Statue of Equality: ಹೈದರಾಬಾದ್‌ನಲ್ಲಿ ತಲೆ ಎತ್ತಲಿದೆ ವಿಶ್ವದ ಎರಡನೇ ಅತೀ ಎತ್ತರದ ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ‌

TV9 Digital Desk

| Edited By: Ayesha Banu

Updated on:Sep 15, 2021 | 10:13 AM

ಹೈದರಾಬಾದ್ನಲ್ಲಿ ವಿಶ್ವದ 2ನೇ ಅತಿ ಎತ್ತರದ ಶ್ರೀರಾಮಾನುಜಾಚಾರ್ಯರ ಪ್ರತಿಮೆ ಅನಾವರಣಗೊಳ್ಳಲಿದೆ. ಶ್ರೀರಾಮಾನುಜರ ಸಾವಿರ ವರ್ಷದ ಜನ್ಮದಿನಾಚರಣೆ ಅಂಗವಾಗಿ 216ಅಡಿ ಎತ್ತರದ ಪ್ರತಿಮೆ ತಲೆ ಎತ್ತಲಿದ್ದು ಅದಕ್ಕಾಗಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗ್ತಿದೆ. ವಿಶೇಷ ಅಂದ್ರೆ ಪ್ರತಿಮೆ ಅನಾವರಣಗೊಳ್ತಿರುವ ಜಾಗ ವಿಶ್ವದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಲಿದೆ.

Statue of Equality: ಹೈದರಾಬಾದ್‌ನಲ್ಲಿ ತಲೆ ಎತ್ತಲಿದೆ ವಿಶ್ವದ ಎರಡನೇ ಅತೀ ಎತ್ತರದ ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ‌
ಶ್ರೀರಾಮಾನುಜರ ಸಾವಿರ ವರ್ಷದ ಜನ್ಮದಿನಾಚರಣೆ ಅಂಗವಾಗಿ 216ಅಡಿ ಎತ್ತರದ ಪ್ರತಿಮೆ ತಲೆ ಎತ್ತಲಿದೆ


ದಾರ್ಶನಿಕ.. ವೈಷ್ಣವ ಧರ್ಮದ ತತ್ವಜ್ಞಾನಿ.. ದೇವರಲ್ಲಿನ ನಂಬಿಕೆಗೆ ಯಾವುದೇ ಧರ್ಮ.. ಘನತೆ.. ಹಾಗೂ ಜಾತಿಗಳ ತೊಡಕಿರುವುದಿಲ್ಲವೆಂದು ತಮ್ಮ ವಿಶಿಷ್ಟಾದ್ವೈತ ಸಿದ್ಧಾಂತದ ಮೂಲಕ ಸಾಮಾಜಿಕ ಸುಧಾರಣೆಯನ್ನು ಸಾಕಾರಗೊಳಿಸಿದ ಹರಿಕಾರ. 120 ವರ್ಷಗಳ ಕಾಲ ಬದುಕಿ ತಮ್ಮ ಕೊನೆಯುಸಿರಿರೋವರೆಗೂ ಸಮಾನತೆಗಾಗಿ ಶ್ರಮಿಸಿದ ಭಕ್ತಿ ಪಂಥದ ಯೋಗಿ ಶ್ರೀರಾಮನುಜಾಚಾರ್ಯರು. ಇಂತಹ ಮಹಾನ್ ವ್ಯಕ್ತಿಯ ಬೃಹತ್‌ ಪ್ರತಿಮೆಯೊಂದು ಸದ್ಯದಲ್ಲೇ ಅನಾವರಣಗೊಳ್ಳಲಿದೆ.

ಹೈದರಾಬಾದ್‌ನಲ್ಲಿ ತಲೆ ಎತ್ತಲಿದೆ ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ
ವಿಶಿಷ್ಟಾದ್ವೈತ ಸಿದ್ಧಾಂತದ ಪ್ರಚಾರಕ ಶ್ರೀ ರಾಮನುಜಾಚಾರ್ಯರ ಜನ್ಮ ಸಹಸ್ರಾಬ್ದಿಯ ನೆನಪಿಗಾಗಿ ಇಂತಹವೊಂದು ಬೃಹತ್ ಪ್ರತಿಮೆಯನ್ನ ಅನಾವರಣಗೊಳ್ಳಿಸಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ವಿಶ್ವದ ಎರಡನೇ ಅತೀ ಎತ್ತರದ ಪ್ರತಿಮೆ‌ ಎಂಬ ಹೆಗ್ಗಳಿಕೆಯೊಂದಿಗೆ, ಪದ್ಮಾಸನ ಹಾಕಿ ಕುಳಿತ ಭಂಗಿಯಲ್ಲಿರುವ 216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ ತಲೆ ಎತ್ತಲಿದೆ. ಸಾವಿರ ವರ್ಷದ ಜನ್ಮದಿನಾಚರಣೆ ಅಂಗವಾಗಿ 2022ರ ಫೆಬ್ರವರಿಯಲ್ಲಿ , ಹೈದರಾಬಾದ್‌ನ ಶಂಶಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಮುಂಚಿಂತಾಲ್‌ ಗ್ರಾಮದ ಬಳಿ ಈ ವಿಗ್ರಹ ಅನಾವರಣಗೊಳ್ಳಲಿದೆ.‌

ಅಂದಹಾಗೆ ರಾಮಾನುಜ ಸಂಸ್ಥಾನದ ತ್ರಿದಂಡಿ ಚಿನ್ನ ಜೀಯರ್ ಶ್ರೀಗಳು, ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ್ ರಾವ್, ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸುವಂತೆ ರಾಷ್ಟ್ರಪತಿಗೆ ಆಹ್ವಾನ ನೀಡಿದ್ದಾರೆ. ಇವರ ಜೊತೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೂ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಲಾಗಿದೆ.

ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಅನಾವರಣಗೊಳ್ಳುತ್ತಿರುವ ಸ್ಥಳವು ವಿಶ್ವದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಈ ಸ್ಥಳದ ವಿಶೇಷತೆಗಳೇನು ಅಂತಾ ನೋಡೋದಾದ್ರೆ

Statue of Equality

ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ

ಶ್ರೀ ರಾಮಾನುಜಚಾರ್ಯರ ದಿವ್ಯ ಕ್ಷೇತ್ರ
200 ಎಕೆರೆ ಪ್ರದೇಶದಲ್ಲಿ ರಾಮಾನುಜಾಚಾರ್ಯರ ವಿಗ್ರಹ ಸ್ಥಾಪನೆಯಾಗಲಿದೆ. ಈ ಸ್ಥಳದಲ್ಲಿ 108 ವೈಷ್ಣವ ದಿವ್ಯ ಕ್ಷೇತ್ರಗಳ ಪ್ರತಿಕೃತಿಗಳು ರಚನೆಯಾಗಲಿವೆ. ಇದಲ್ಲದೇ ತಿರುಗುವ ರಾಮಾನುಜಾಚಾರ್ಯರ ಮೂರ್ತಿ ಹಾಗೂ ಬಣ್ಣದ ಕಾರಂಜಿ, ಆಚಾರ‍್ಯರ ಜನ್ಮದ 120 ವರ್ಷಗಳನ್ನು ಸೂಚಿಸುವ 120 ಕಿಲೋ ತೂಕದ ಚಿನ್ನದ ಪ್ರತಿಮೆ ಕೂಡ ಸ್ಥಳದಲ್ಲಿರಲಿದೆ. ಒಟ್ಟಿನಲ್ಲಿ ಭಕ್ತರ ಆಕರ್ಷಣೆಯ ಪ್ರವಾಸಿ ತಾಣವಾಗಲಿದ್ದು, 2020ಫೆಬ್ರವರಿ 2ರಿಂದ 14 ವರೆಗೆ ಅನಾವರಣ ಕಾರ್ಯಕ್ರಮಗಳು ನಡೆಯಲಿವೆ. ಇನ್ನು ಸಮಾಜದ ಒಳಿತಿಗಾಗಿ ಸಹಸ್ರಹುಂಡಾತ್ಮಕ ಲಕ್ಷ್ಮೀ ಯಾಗ ನಡೆಯಲಿದೆ. ಅದಕ್ಕಾಗಿ 1,035 ಹೋಮ ಕುಂಡಗಳನ್ನು ನಿರ್ಮಿಸಲಾಗ್ತಿದೆ. ವಿಶೇಷ ಅಂದ್ರೆ ಎರಡು ಲಕ್ಷ ಕೆಜಿ ಹಸುವಿನ ತುಪ್ಪದಿಂದ ಹೋಮ ನೆರವೇರಲಿದೆ.

ಇಷ್ಟೆಲ್ಲಾ ಯೋಜನೆಯ ಅನುಷ್ಠಾನಕ್ಕಾಗಿ ರಾಮಾನುಜ ಸಹಸ್ರಾಬ್ಧಿ ಎಂಬ ಸಂಘಟನೆಯನ್ನು ರಚಿಸಿಕೊಳ್ಳಲಾಗಿದ್ದು, ತಿರುಪತಿ ತಿರುಮಲ ದೇವಸ್ಥಾನದ ಪ್ರಾಂಗಣವನ್ನು ನವೀಕರಿಸಿದ ಸ್ಥಪತಿಗಳೇ ಪ್ರತಿಮೆ‌ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಒಟ್ನಲ್ಲಿ ಥಾಯ್ಲೆಂಡಿನಲ್ಲಿರುವ ಬುದ್ಧ ಮೂರ್ತಿಯ ನಂತರ, ಶ್ರೀ ರಾಮನುಜಾಚಾರ್ಯರ ಬೃಹತ್ ಪ್ರತಿಮೆ ವಿಶ್ವದ ಎರಡನೇ ಅತಿ ಎತ್ತರದ ವಿಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಇದನ್ನೂ ಓದಿ:  ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮಿ


ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada