ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮಿ

Statue of Equality: ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವವನ್ನು ಹೈದರಾಬಾದ್​ನ ಶಮ್ಸಾಬಾದ್​ನ ಆಶ್ರಮದಲ್ಲಿ ಅವರ ನೂತನ ಪ್ರತಿಮೆಯನ್ನು ಅನಾವರಣ ಮಾಡುವ ಮೂಲಕ ಆರಂಭಿಸಲಾಗುವುದು. ಈ ಪ್ರತಿಮೆಯು 216 ಅಡಿ ಎತ್ತರವಿದ್ದು, ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ.

ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮಿ
ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮಿ

ಹೈದರಾಬಾದ್: ಇಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ಶ್ರೀ ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವ ಆಚರಣೆಗೆ ಹಾಗೂ ಶ್ರೀ ರಾಮಾನುಜ ಸಹಸ್ರಾಬ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ತ್ರಿದಡಿ ಚಿನ್ನ ಜೀಯರ್ ಸ್ವಾಮೀಜಿ ಆಮಂತ್ರಿಸಿದರು. ಶ್ರೀ ರಾಮಾನುಜಾಚಾರ್ಯರು 11ನೇ ಶತಮಾನದ ಹಿಂದು ಧರ್ಮಶಾಸ್ತ್ರಜ್ಞ ತತ್ವಜ್ಞಾನಿ ಹಾಗೂ ಭಕ್ತಿ ಚಳುವಳಿಯನ್ನು ನಡೆಸಿದ ಸಮಾಜ ಸುಧಾರಕರೂ ಆಗಿದ್ದಾರೆ.

ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವವನ್ನು ಹೈದರಾಬಾದ್​ನ ಶಮ್ಸಾಬಾದ್​ನ ಆಶ್ರಮದಲ್ಲಿ ರಾಮಾನುಜರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭಿಸಲಾಗುವುದು. ಈ ಪ್ರತಿಮೆಯು 216 ಅಡಿ ಎತ್ತರವಿದ್ದು, ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ. ಜಾತಿಬೇಧ ಇಲ್ಲದೆ, ಮಾನವಸಂಕುಲದ ಉನ್ನತಿಗೆ ಕೆಲಸ ಮಾಡಿದ ರಾಮಾನುಜರ ನೆನಪಿಗೆ ಈ ಪ್ರತಿಮೆ ನಿರ್ಮಿಸಲಾಗಿದೆ.

ರಾಮಾನುಜ ಸಂಸ್ಥಾನದ ತ್ರಿದಂಡಿ ಚಿನ್ನ ಜೀಯರ್ ಮಂಗಳವಾರ ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳನ್ನು ಆಹ್ವಾನಿಸಿದರು. ಅಷ್ಟೇ ಅಲ್ಲದೆ, ಫೆಬ್ರವರಿ 2 ರಿಂದ ಫೆಬ್ರವರಿ 14 ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ಈ ಸಮಾನತೆಯ ಪ್ರತಿಮೆಯನ್ನು 200 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಹೈದರಾಬಾದ್​ನ ಹೊರವಲಯದಲ್ಲಿ ಇರುವ ಶಮ್ಸಾಬಾದ್​ನ ಮುಚಿಂತಾಲ್ ಎಂಬಲ್ಲಿ ಇದೆ.

ಕಾರ್ಯಕ್ರಮದ ವಿಶೇಷವಾಗಿ ಸಮಾಜದ ಒಳಿತಿಗಾಗಿ ಸಹಸ್ರಹುಂಡಾತ್ಮಕ ಲಕ್ಷ್ಮೀ ಯಾಗ ನಡೆಯಲಿದೆ. ಅದಕ್ಕಾಗಿ 1,035 ಹೋಮ ಕುಂಡಗಳನ್ನು ನಿರ್ಮಿಸಲಾಗುವುದು. ಎರಡು ಲಕ್ಷ ಹಸುವಿನ ಕೆಜಿ ತುಪ್ಪದಿಂದ ಹೋಮ ನೆರವೇರಲಿದೆ ಎಂದು ತಿಳಿಸಲಾಗಿದೆ. ಈ ಸ್ಥಳವು ಶೀಘ್ರವೇ ವಿಶ್ವದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬುದು ಚಿನ್ನ ಜೀಯರ್ ಸ್ವಾಮೀಜಿಗಳ ಆಶಯವಾಗಿದೆ.

Chinna Jeeyar Swamy

ಉಪ ರಾಷ್ಟ್ರಪತಿಗಳನ್ನು ಆಹ್ವಾನಿಸಿದ ಚಿನ್ನ ಜೀಯರ್ ಸ್ವಾಮೀಜಿ

ಈ ಬೃಹತ್ ಮೂರ್ತಿ ನಿರ್ಮಾಣ ಯೋಜನೆಗೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಖರ್ಚಾಗಿದೆ. 1,800 ಟನ್​ಗೂ ಅಧಿಕ ಪಂಚಲೋಹ ಬಳಸಲಾಗಿದೆ. ಈ ಉದ್ಯಾನ ಪ್ರದೇಶದಲ್ಲಿ 108 ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ದೇಗುಲದ ಕಲ್ಲಿನ ಕಂಬಗಳನ್ನು ವಿಶೇಷವಾಗಿ ರಾಜಸ್ಥಾನ್​ನಲ್ಲಿ ನಿರ್ಮಿಸಲಾಗಿದೆ.

Statue of Equality

ಸಮಾನತೆಯ ಮೂರ್ತಿ

ಇದನ್ನೂ ಓದಿ: ರಾಮನಗರ: ವಿಶ್ವದ ಅತೀ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ ನೋಡಲು ಹರಿದುಬರುತ್ತಿದೆ ಭಕ್ತಸಾಗರ

ಇದನ್ನೂ ಓದಿ: ಗುಜರಿ ವಸ್ತುಗಳಿಂದಲೇ ನಿರ್ಮಾಣವಾಯ್ತು 14 ಅಡಿ ಎತ್ತರದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ!

Click on your DTH Provider to Add TV9 Kannada