Lord Ganesha: ಬುಧವಾರದಂದು ಗಣೇಶನನ್ನು ಪೂಜಿಸಿದರೆ ನಿಮಗೆ ಈ ಫಲ ಸಿಗುತ್ತೆ, ಗಣಪನ ಈ ಕೃಪೆಗೆ ಪಾತ್ರರಾಗ್ತೀರಿ

ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನಕ್ಕೂ ತನ್ನದೇ ಆದ ಮಹತ್ವವಿದೆ. ಹಾಗೂ ಪ್ರತಿ ದಿನವನ್ನೂ ಒಂದೊಂದು ದೇವರಿಗೆ ಸಮರ್ಪಿಸಲಾಗಿದೆ. ಹೀಗಾಗಿ ಬುಧವಾರವನ್ನು ಭಗವಾನ್ ಗಣೇಶನಿಗೆ ಅರ್ಪಿಸಲಾಗಿದೆ. ಬುಧವಾರದಂದೆ ಗಣೇಶನಿಗೆ ಶ್ರೇಷ್ಠ ದಿನವೆಂದು ಹೇಳಲು ಒಂದು ದಂತ ಕಥೆ ಇದೆ.

Lord Ganesha: ಬುಧವಾರದಂದು ಗಣೇಶನನ್ನು ಪೂಜಿಸಿದರೆ ನಿಮಗೆ ಈ ಫಲ ಸಿಗುತ್ತೆ, ಗಣಪನ ಈ ಕೃಪೆಗೆ ಪಾತ್ರರಾಗ್ತೀರಿ
ಗಣೇಶ
Follow us
TV9 Web
| Updated By: ಆಯೇಷಾ ಬಾನು

Updated on: Sep 15, 2021 | 7:10 AM

ಹಿಂದೂ ಧರ್ಮದಲ್ಲಿ ಬುಧವಾರವನ್ನು ಗಣೇಶನಿಗೆ ಅರ್ಪಿಸಲಾಗಿದೆ. ಶಿವ-ಪಾರ್ವತಿ ಪುತ್ರ ಗಣೇಶನನ್ನು ಶುಭ ಕಾರ್ಯದ ಆರಂಭದ ಮೊದಲು ಪೂಜಿಸಲಾಗುತ್ತೆ. ಪ್ರಥಮ ಪೂಜಿತ, ವಿಘ್ನಹರ್ತ ಗಣೇಶನನ್ನು ಬುಧವಾರದಂದು ಪೂಜಿಸುವುದರಿಂದ ನಿಮ್ಮ ಜಾತಕದಲ್ಲಿ ಬುಧನ ಸ್ಥಾನವನ್ನು ಬಲಪಡಿಸಬಹುದು ಹಾಗೂ ಗಣೇಶನ ಕೃಪೆಗೆ ಪಾತ್ರರಾಗಬಹುದು. ಹಾಗಾದ್ರೆ ಬನ್ನಿ ಬುಧವಾರದಂದು ಗಣೇಶನಿಗೆ ಏಕೆ ಪೂಜಿಸಲಾಗುತ್ತದೆ ಹಾಗೂ ಅದರ ಲಾಭದ ಬಗ್ಗೆ ಇಲ್ಲಿ ತಿಳಿಯಿರಿ.

ಬುಧವಾರದಂದು ಗಣೇಶನನ್ನು ಪೂಜಿಸುವುದೇಕೆ? ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನಕ್ಕೂ ತನ್ನದೇ ಆದ ಮಹತ್ವವಿದೆ. ಹಾಗೂ ಪ್ರತಿ ದಿನವನ್ನೂ ಒಂದೊಂದು ದೇವರಿಗೆ ಸಮರ್ಪಿಸಲಾಗಿದೆ. ಹೀಗಾಗಿ ಬುಧವಾರವನ್ನು ಭಗವಾನ್ ಗಣೇಶನಿಗೆ ಅರ್ಪಿಸಲಾಗಿದೆ. ಬುಧವಾರದಂದೆ ಗಣೇಶನಿಗೆ ಶ್ರೇಷ್ಠ ದಿನವೆಂದು ಹೇಳಲು ಒಂದು ದಂತ ಕಥೆ ಇದೆ. ಅದೇನೆಂದರೆ ಪಾರ್ವತಿ ದೇವಿ ತನ್ನ ಕೈಯಾರೆ ಗಣೇಶನನ್ನು ಸೃಷ್ಟಿಸುವಾಗ ಬುಧ ದೇವರು ಕೂಡ ಕೈಲಾಸ ಪರ್ವತದಲ್ಲೇ ಇರುತ್ತಾನೆ. ಹೀಗಾಗಿ ಗಣೇಶನಿಗೆ ಬುಧವಾರದಂದು ಪೂಜಿಸಲಾಗುತ್ತೆ. ಅಲ್ಲದೆ ಬುಧವಾರವನ್ನು ಸೌಮ್ಯವಾರ ಎಂದೂ ಸಹ ಕರೆಯಲಾಗುತ್ತೆ. ಗಣೇಶನಿಗೆ ಸೌಮ್ಯತೆ ಇಷ್ಟವಾಗುತ್ತೆ. ಹೀಗಾಗಿ ಗಣೇಶನನ್ನು ಬುಧವಾರದಂದು ಪೂಜಿಸುವುದು ಮಂಗಳಕರವೆಂದು ಭಾವಿಸಲಾಗಿದೆ.

ಬುಧವಾರದಂದು ಗಣೇಶನ ಪೂಜೆ ಹೇಗಿರಬೇಕು ಉಪವಾಸ ಇಡಲು ಬಯಸುವವರು ಬುಧವಾರ ಬೆಳಿಗ್ಗೆ ಬೇಗನೆ ಎದ್ದು, ಸ್ನಾನ ಮಾಡಿ ಉಪವಾಸ ಆಚರಿಸುವ ಸಂಕಲ್ಪ ಮಾಡಬೇಕು. ಬಳಿಕ ಗಣಪತಿ ಯಂತ್ರವನ್ನು ಸ್ಥಾಪಿಸಿ ಗಣೇಶನನ್ನು ಸ್ಮರಿಸಿಕೊಳ್ಳಬೇಕು. ಷೋಡಶೋಪಚಾರ ವಿಧಿಯೊಂದಿಗೆ ಗಣೇಶನನ್ನು ಪೂಜಿಸಬೇಕು. ದಂತಕಥೆಯನ್ನು ಪಠಿಸಿ ಮತ್ತು ಲಡ್ಡು, ಮೋದಕ ಮತ್ತು ಹಲ್ವಾವನ್ನು ಗಣೇಶನಿಗೆ ಅರ್ಪಿಸಬೇಕು. ಕೊನೆಗೆ ಆರತಿ ಮಾಡಿ ನಿಮ್ಮಿಂದ ತಿಳಿದೋ ತಿಳಿಯದೇ ಆದಂತಹ ತಪ್ಪುಗಳಿಗೆ ಕ್ಷಮೆ ಕೇಳಿಕೊಳ್ಳಿ.

ಮತ್ತೊಮ್ಮೆ ಸಂಜೆ ಸ್ನಾನ ಮಾಡಿ ಪೂಜೆ ಮಾಡಿ ಪ್ರಸಾದ ಸೇವಿಸುವ ಮೂಲಕ ಉಪವಾಸವನ್ನು ಮುರಿಯಬೇಕು. ಹಾಗೂ ನಿಮಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಗತಿಕರಿಗೆ ದಾನ ಮಾಡಬೇಕು. ಆಗಲೇ ಉಪವಾಸ ಸಂಪೂರ್ಣವಾಗುವುದು. ಇನ್ನು ಹಸಿರು ಬಣ್ಣದ ಬಟ್ಟೆ ಮತ್ತು ಹೆಸರು ಬೇಳೆಯನ್ನು ದಾನ ಮಾಡುವುದು ಶ್ರೇಷ್ಠ.

ಬುಧವಾರ ಗಣೇಶನ ಪೂಜೆಯಿಂದಾಗುವ ಪ್ರಯೋಜನಗಳು ಸಂಕಷ್ಟ ಹರ, ವಿಘ್ನಹರ ಗಣಪತಿಯನ್ನು ನಾವು ಆರಂಭಿಸುವ ಪ್ರತಿ ಕೆಲಸದ ಮೊದಲು ಪೂಜಿಸುತ್ತೇವೆ. ಯಾವುದೇ ಹೊಸ ಕೆಲಸವನ್ನು ಆರಂಭಿಸುವುದಕ್ಕೆ ಬುಧವಾರ ಒಳ್ಳೆದಿನ ಎನ್ನಲಾಗುತ್ತೆ. ಹೀಗಾಗಿ ಬುಧವಾರದ ಪೂಜೆಯಿಂದ ಮಂಗಳಕರವಾಗಿ ಎಲ್ಲಾ ಕಾರ್ಯಗಳು ನಡೆಯುತ್ತವೆ ಎನ್ನಲಾಗುತ್ತೆ. ಬುಧವಾರ ಗಣೇಶನನ್ನು ಪೂಜಿಸಿದರೆ ಜಾತಕದಲ್ಲಿ ಬುಧನ ಸ್ಥಾನವನ್ನು ಬಲಪಡಿಸಬಹುದು. ಉಪವಾಸ ಆಚರಿಸುವ ಮತ್ತು ಶ್ರದ್ಧೆ, ಭಕ್ತಿಯಿಂದ ಶುದ್ಧ ಆತ್ಮದಿಂದ ಗಣೇಶನನ್ನು ಪೂಜಿಸುವ ಜನರಿಗೆ ಶಾಂತಿ, ನೆಮ್ಮದಿ, ಸಮೃದ್ಧಿ ಮತ್ತು ಸಂಪತ್ತನ್ನು ಭಗವಾನ್ ಗಣಪತಿ ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. ಅಲ್ಲದೆ ಅವರ ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಗಣೇಶ ನಿವಾರಿಸಿ ಸುಖಕರ ಜೀವನ ನೀಡುತ್ತಾನೆ. ಗಣೇಶನ ಪೂಜೆಯಿಂದ ಜ್ಞಾನ, ಬುದ್ಧಿ ಪಡೆದುಕೊಳ್ಳಬಹುದು.

ಇದನ್ನೂ ಓದಿ: Lord Ganesha: ಪ್ರಥಮ ಪೂಜಿತ ಗಣೇಶನ ದೇಹದ ಅಂಗಾಂಗಗಳ ಮಹತ್ವ ನಿಮಗೆ ಗೊತ್ತೇ?

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ