ಭಗವಂತನಿಗೆ ನೈವೇದ್ಯ ಸಲ್ಲಿಸದಿದ್ದರೆ ಪೂಜೆ ಅಪೂರ್ಣ, ಯಾವ ದೇವರಿಗೆ ಯಾವ ಪ್ರಸಾದ ಅರ್ಪಿಸಬೇಕು ತಿಳಿಯಿರಿ

TV9 Digital Desk

| Edited By: Ayesha Banu

Updated on: Sep 15, 2021 | 7:35 AM

ಜ್ಞಾನದ ದೇವತೆ ಸರಸ್ವತಿ, ಶಾರದೆ. ಶಾರದೆಯ ಪೂಜಾ ವೇಳೆ ಹಾಲು, ಪಂಚಾಮೃತ, ಮೊಸರು, ಬೆಣ್ಣೆ, ಬಿಳಿ ಎಳ್ಳಿನಿಂದ ತಯಾರಿಸಿದ ಲಡ್ಡು, ಹಯಗ್ರೀವ ವಿಶೇಷವಾಗಿ ಅರ್ಪಿಸಲಾಗುತ್ತದೆ. ತಾಯಿ ಸರಸ್ವತಿಗೆ ಈ ನೈವೇದ್ಯ ಅರ್ಪಿಸಿ ಪೂಜೆ ಮಾಡುವುದರಿಂದ ಶಿಕ್ಷಣ, ವ್ಯಾಸಂಗದಲ್ಲಿ ಅಪಾರ ಯಶಸ್ಸು ಸಾಧಿಸಬಹುದು.

ಭಗವಂತನಿಗೆ ನೈವೇದ್ಯ ಸಲ್ಲಿಸದಿದ್ದರೆ ಪೂಜೆ ಅಪೂರ್ಣ, ಯಾವ ದೇವರಿಗೆ ಯಾವ ಪ್ರಸಾದ ಅರ್ಪಿಸಬೇಕು ತಿಳಿಯಿರಿ
ನೈವೇದ್ಯ ಇಲ್ಲದೇ ಭಗವಂತನಿಗೆ ಸಲ್ಲಿಸುವ ಪೂಜೆ ಅಪೂರ್ಣ, ಯಾವ ದೇವರಿಗೆ ಯಾವ ಪ್ರಸಾದ ಅರ್ಪಿಸಬೇಕು ತಿಳಿಯಿರಿ

ಭಗವಂತನ ಪೂಜೆಯ ವೇಳೆ ಪ್ರಸಾದ ಅರ್ಪಿಸದಿದ್ದರೆ ಪೂಜೆ ಅಪೂರ್ಣವೆನಿಸುತ್ತದೆ, ಭಗವಂತನ ಪೂಜೆಯಲ್ಲಿ ನೈವೇದ್ಯಕ್ಕೆ ತುಂಬಾ ಮಹತ್ವ ಇದೆ. ದೇವ-ದೇವತೆಗೆ ಇಷ್ಟವಾದ ನೈವೇದ್ಯ ಅರ್ಪಿಸುವುದು ಮುಖ್ಯವಾಗುತ್ತದೆ. ದೇವರಿಗೆ ಇಷ್ಟವಾದ ನೈವೇದ್ಯ ಅರ್ಪಿಸಿ, ದೇವರ ಪ್ರೀತಿಗೆ ಪಾತ್ರವಾಗಬಹುದು. ಭಗವಂತನ ಕೃಪೆ ಗಳಿಸಲು ಭಗವಂತನಿಗೆ ಇಷ್ಟವಾದ ನೈವೇದ್ಯ ಅರ್ಪಿಸುವ ವಿಚಾರದಲ್ಲಿ ಯಾವ ದೇವರಿಗೆ ಏನು ಪ್ರಸಾದ ಅರ್ಪಿಸಬೇಕು ತಿಳಿಯೋಣ ಬನ್ನೀ.

ಸನಾತನ ಧರ್ಮದಲ್ಲಿ ಈಶ್ವರನ ಪೂಜೆಯಲ್ಲಿ ಫಲ, ಸಿಹಿ ವಸ್ತು, ಬತಾಸು ಮುಂತಾದುವನ್ನು ಅರ್ಪಿಸುವುದಕ್ಕೆ ನೈವೇದ್ಯ ಅಥವಾ ಪ್ರಸಾದ ಅನ್ನುತ್ತಾರೆ. ಪೂಜೆಯ ವೇಳೆ ದೇವರಿಗೆ ಅರ್ಪಿಸಿದ ನೈವೇದ್ಯವನ್ನು, ಪೂಜೆಯ ಬಳಿಕ ಭಕ್ತರಿಗೆ ಹಂಚಿದಾಗ ಅದನ್ನು ದೇವರ ಪ್ರಸಾದ ಅನ್ನುತ್ತಾರೆ. ದೇವರಿಗೆ ಪೂಜೆ ಸಲ್ಲಿಸುವಾಗ ಪ್ರಸಾದ ಇಡುವುದು ತುಂಬಾ ಮುಖ್ಯವಾಗುತ್ತದೆ.

ಆದರೆ ಭಕ್ತರು ಇದನ್ನು ಮರೆಯುತ್ತಾರೆ, ಅಥವಾ ನಿರ್ಲಕ್ಷಿಸುತ್ತಾರೆ. ಅಥವಾ ಯಾವ ಪ್ರಸಾದ ಸಲ್ಲಿಸಬೇಕು ಅನ್ನುವುದು ತಿಳಿದಿರುವುದಿಲ್ಲ. ಹಾಗೆ ಮಾಡುವುದು ಅಪಚಾರವಾದೀತು. ಒಂದು ವೇಳೆ ಈ ಮಹತ್ವದ ಮಾಹಿತಿ ಅರಿತುಕೊಂಡು ನಿಮ್ಮ ಇಷ್ಟದ ದೇವರಿಗೆ ಇಷ್ಟದ ಪ್ರಸಾದ ಅರ್ಪಿಸುವುದರಿಂದ ಶೀಘ್ರಮೇವ ಭಗವಂತನ ಕೃಪೆಗೆ ಪಾತ್ರರಾಗಬಲ್ಲಿರಿ.

ಪ್ರಥಮ ಪೂಜಕ ವಿಘ್ನ ವಿನಾಯಕ Lord Ganesha: ಈಗ ಭಾದ್ರಪದ ಮಾಸದಲ್ಲಿ ಗಣೇಶ ಚತುರ್ಥಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಗಣೇಶನಿಗೆ ಪ್ರೀತಿಪಾತ್ರವಾದ ನೈವೇದ್ಯ ಏನು ಎಂಬುದನ್ನು ತಿಳಿಯುವುದಾದರೆ ಆತನಿಗೆ ಕಡುಬು, ಮೋದಕ, ಲಡ್ಡು ಭಕ್ತಿ ಪ್ರಧಾನ ಪ್ರಸಾದವಾಗಿದೆ. ಆದರೆ ಗಣೇಶನಿಗೆ ಪ್ರಿಯವಾದ ಈ ಮೋದಕ ಪ್ರಸಾದ ನಾನಾ ರೂಪ, ನಾನಾ ರುಚಿಯಲ್ಲಿ ತಯಾರಿಸಲಾಗುತ್ತದೆ.

ದುರ್ಗಾ ಮಾತೆ Maa Durga: ಶಕ್ತಿಯನ್ನು ಸಿದ್ಧಿಸಿಕೊಳ್ಳುವಾಗ ದುರ್ಗಾ ಮಾತೆಗೆ ಪಾಯಸ, ಮಾಲ್ಪುವಾ (ಕಜ್ಜಾಯದ ಮಾದರಿ ಸಿಹಿ), ಕೊಬ್ಬರಿ ಮಿಠಾಯಿ ಅರ್ಪಿಸಬೇಕು. ದೇವಿಗೆ ಈ ಪ್ರಸಾದಗಳ ಪೈಕಿ ಯಾವುದಾದರೂ ಒಂದನ್ನು ಅರ್ಪಿಸಿ ಭಕ್ತಿ ಭಾವದಿಂದ ಪೂಜಿಸಿದರೆ ಮಾತೆ ಒಲಿದು, ನಿಮ್ಮ ಇಷ್ಟಾರ್ಥ ನೆರವೇರುತ್ತದೆ.

ಸರಸ್ವತಿ ದೇವಿ Maa Saraswati: ಜ್ಞಾನದ ದೇವತೆ ಸರಸ್ವತಿ, ಶಾರದೆ. ಶಾರದೆಯ ಪೂಜಾ ವೇಳೆ ಹಾಲು, ಪಂಚಾಮೃತ, ಮೊಸರು, ಬೆಣ್ಣೆ, ಬಿಳಿ ಎಳ್ಳಿನಿಂದ ತಯಾರಿಸಿದ ಲಡ್ಡು, ಹಯಗ್ರೀವ ವಿಶೇಷವಾಗಿ ಅರ್ಪಿಸಲಾಗುತ್ತದೆ. ತಾಯಿ ಸರಸ್ವತಿಗೆ ಈ ನೈವೇದ್ಯ ಅರ್ಪಿಸಿ ಪೂಜೆ ಮಾಡುವುದರಿಂದ ಶಿಕ್ಷಣ, ವ್ಯಾಸಂಗದಲ್ಲಿ ಅಪಾರ ಯಶಸ್ಸು ಸಾಧಿಸಬಹುದು.

ವಿಷ್ಣು ಭಗವಾನ್ Lord Vishnu: ಭಗವಂತ ವಿಷ್ಣುವಿಗೆ ಪೂಜೆ ವೇಳೆ ಪಾಯಸ ಅಥವಾ ರವೆ ಹಲ್ವಾ ಅಥವಾ ಸಜ್ಜಿಗೆ ಅರ್ಪಿಸಬೇಕು. ವಿಷ್ಣುವಿನ ಪೂಜೆ ಬಳಿಕ ಭಕ್ತರಿಗೆ ದೇವರ ನೈವೇದ್ಯವನ್ನು ಪ್ರಸಾದದ ರೂಪದಲ್ಲಿ ವಿತರಿಸುವುದಾಗ ಅದರ ಜೊತೆಗೆ ತುಳಸಿ ದಳವನ್ನಿಟ್ಟು ಕೊಡಬೇಕು. ಹೀಗೆ ಮಾಡುವುದರಿಂದ ಭಗವಂತ ವಿಷ್ಣು ಸುಪ್ರಸನ್ನಗೊಂಡು ನಿಮ್ಮ ಮನೋಕಾಮನೆಗಳನ್ನು ಶೀಘ್ರವೇ ನೆರವೇರಿಸುತ್ತಾನೆ.

ಶಿವ Lord Shiva: ಈಶ್ವರನಿಗೆ ಪಂಚಾಮೃತ ನೈವೇದ್ಯವೆಂದರೆ ತುಂಬಾ ಇಷ್ಟ. ಹೀಗಾಗಿ ಶಿವನ ಆರಾಧನೆಯ ವೇಳೆ ಹಾಲು, ಮೊಸರು, ಜೇನು, ಸಕ್ಕರೆ, ತುಪ್ಪವನ್ನು ಜಲಧಾರೆಯೊಂದಿಗೆ ಅರ್ಪಿಸಬೇಕು. ಇದರಿಂದ ಭಗವಂತ ಖಚಿತವಾಗಿ ಸುಪ್ರಸನ್ನಗೊಂಡು, ನಿಮ್ಮ ಇಷ್ಟಾರ್ಥ ನೆರವೇರುತ್ತದೆ.

ಆಂಜನೇಯ Hanuman ji: ವಾಯುಪುತ್ರ ಹನುಮಂತನಿಗೆ ಹಲ್ವಾ, ಒಣ ಹಣ್ಣು, ಒಣ ಬೀಜ (ಡ್ರೈ ಫ್ರೂಟ್ಸ್​), ಬೂಂದಿ, ಬೆಲ್ಲದ ಸಿಹಿಯುಂಡೆ, ಸಿಹಿ ವೀಳ್ಯ ಅರ್ಪಿಸಬೇಕು. ಹೀಗೆ ಅರ್ಪಿಸುವ ಸಾಧಕರ ಮೇಲೆ ಆಂಜನೇಯ ಕೃಪೆ ತೋರುತ್ತಾನೆ.

(Importance of Prasada: which prasada is good in worship of god and goddess)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada