ಈ 5 ರಾಶಿಯವರು ಸದಾ ಬೇರೊಬ್ಬರ ಬಗ್ಗೆ, ವ್ಯವಸ್ಥೆಯ ಬಗ್ಗೆ ಚಾಡಿ ಹೇಳುತ್ತಲೇ ಇರುತ್ತಾರೆ! ನಿಮ್ಮ ರಾಶಿ ಯಾವುದು?

ಧನು ರಾಶಿಯ ಜನರಿಗೆ ಯಾವಾಗ ಸುಮ್ಮನಿರಬೇಕು, ಮೌನವಾಗಿರಬೇಕು, ಯಾವಾಗ ಮಾತನಾಡಬೇಕು ಎಂಬುದರ ಬಗ್ಗೆ ಜ್ಞಾನವೇ ಇರುವುದಿಲ್ಲ. ಅವರಿಗೆ ಯಾವುದೋ ಒಂದು ಒಂಚೂರೇಚೂರು ಇಷ್ಟವಾಗುವುದಿಲ್ಲ ಎಂದಾದರೆ ಎದುರಿಗಿನ ವ್ಯಕ್ತಿಯಿಂದ ಹಿಡಿದು ಇಡೀ ವ್ಯವಸ್ಥೆಯನ್ನು ಜಾಲಡಿಬಿಡುತ್ತಾರೆ. ಆ ದುಃಖದಲ್ಲೇ ಮುಳುಗಿಬಿಡುತ್ತಾರೆ.

ಈ 5 ರಾಶಿಯವರು ಸದಾ ಬೇರೊಬ್ಬರ ಬಗ್ಗೆ, ವ್ಯವಸ್ಥೆಯ ಬಗ್ಗೆ ಚಾಡಿ ಹೇಳುತ್ತಲೇ ಇರುತ್ತಾರೆ! ನಿಮ್ಮ ರಾಶಿ ಯಾವುದು?
ಈ 5 ರಾಶಿಯವರು ಸದಾ ಬೇರೊಬ್ಬರ ಬಗ್ಗೆ, ವ್ಯವಸ್ಥೆಯ ಬಗ್ಗೆ ಚಾಡಿ ಹೇಳುತ್ತಲೇ ಇರುತ್ತಾರೆ! ನಿಮ್ಮ ರಾಶಿ ಯಾವುದು?
Follow us
TV9 Web
| Updated By: ಆಯೇಷಾ ಬಾನು

Updated on: Sep 15, 2021 | 6:49 AM

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿಯ ಅಷ್ಟೂ ಗುಣಾವಗುಣಗಳು ಗ್ರಹ ಗತಿ, ನಕ್ಷತ್ರ ಪ್ರಭಾವಗಳ ಆಧಾರದಲ್ಲಿ ಮೂಡಿಬಂದಿರುತ್ತವೆ. ಕೆಲವು ರಾಶಿಯ ಜನ ತುಂಬಾ ಸಬಲರಾಗಿರುತ್ತಾರೆ. ಅವರಲ್ಲಿ ಬಲಾಢ್ಯವಾಗಿ ಹೋರಾಡುವ ಮನೋ ಸ್ಥೈರ್ಯವಿರುತ್ತದೆ. ಆದರೆ ಕೆಲವರು ತಮ್ಮ ಬಗ್ಗೆ ತಮಗೆ ವಿಶ್ವಾಸವಿರುವುದಿಲ್ಲ. ಆ ಐದು ರಾಶಿಯ ಜನರು ಸದಾ ಬೇರೊಬ್ಬರ ಬಗ್ಗೆ ದೂರುತ್ತಲೇ ಇರುತ್ತಾರೆ! ದುಃಖ-ದುಮ್ಮಾನದಲ್ಲೇ ಇರುತ್ತಾರೆ. ಹಾಗಾದರೆ ಯಾರು ಆ ರಾಶಿಯವರು ತಿಳಿಯೋಣ ಬನ್ನಿ.

ಆ ಐದು ರಾಶಿಯ ಜನರು ಸದಾ ತಮ್ಮ ಬಗ್ಗೆ ದುಃಖ-ದುಮ್ಮಾನ ತೋಡಿಕೊಳ್ಳುತ್ತಿರುತ್ತಾರೆ, ಬೇರೊಬ್ಬರ ಬಗ್ಗೆ ದೂರುಗಳನ್ನು ಹೇಳುತ್ತಾ ಇರುತ್ತಾರೆ, ಎದುರಿಗಿನ ವ್ಯಕ್ತಿಯ ಬಗ್ಗೆ ನಿರಂತರವಾಗಿ ಚಾಡಿ ಹೇಳುತ್ತಲೇ ಇರುತ್ತಾರೆ. ಪ್ರಶ್ನೆ, ಸವಾಲುಗಳನ್ನು ಹಾಕುತ್ತಿರುತ್ತಾರೆ. ಯಾವುದೋ ಒಂದು ವಿಷಯವನ್ನು ಎತ್ತಿಕೊಂಡು ತಮ್ಮ ಅತೃಪ್ತಿ ತೋರುತ್ತಾರೆ. ಇವರಿಗೆ ಖುಷಿ ವಿಚಾರಗಳೇ ಇರುವುದಿಲ್ಲ. ಕೋಪ-ಕ್ರೋಧಗಳನ್ನು ಹೊರಹಾಕುವುದರಲ್ಲಿಯೇ ಆತ್ಮ ತೃಪ್ತಿ ಕಾಣುತ್ತಾರೆ.

ಇದರಿಂದ ಅವರು ಸ್ವಯಂ ಸಮಸ್ಯೆಗಳಲ್ಲಿ ಸಿಲುಕುತ್ತಾರೆ ಎಂಬುದನ್ನು ಅರಿತುಕೊಳ್ಳುವುದಿಲ್ಲ. ಇಲ್ಲದ ಸಲ್ಲದ ಸಮಸ್ಯೆಗಳಲ್ಲಿ ಇವರು ಸಿಲುಕಿಕೊಳ್ಳುತ್ತಾರೆ. ಜಾತಕದ ಗ್ರಹ ಗತಿಗಳ ಪ್ರಕಾರ ಐದು ರಾಶಿಯ ಜನರು ಇಂತಹ ಮನೋಸ್ಥಿತಿಯನ್ನು ಹೊಂದಿರುತ್ತಾರೆ. ಈ ಕೆಳಗಿನ ಐದು ರಾಶಿಗಳ ಮೂಲಕ ಅಂತಹ ಜಾತಕದವರನ್ನು ತಿಳಿದುಕೊಳ್ಳೋಣ ಬನ್ನೀ

1. ಕರ್ಕಾಟಕ ರಾಶಿ Cancer:

ಕರ್ಕಾಟಕ ರಾಶಿಯ ವ್ಯಕ್ತಿಗಳು ಸದಾ ತಮ್ಮ ಕ್ರೋಧ ಮತ್ತು ಅಶಾಂತ ಭಾವನೆಗಳನ್ನು ಹೊರಹಾಕಲು ಹವಣಿಸುತ್ತಿರುತ್ತಾರೆ. ಈ ಭಾವನೆಗಳನ್ನು ಹೊರಹಾಕಲು ಅವರು ಒಂದು ಔಟ್​ಲೆಟ್​ ಹುಡುಕುತ್ತಿರುತ್ತಾರೆ.

2. ಕನ್ಯಾ ರಾಶಿ Virgo:

ಕನ್ಯಾ ರಾಶಿ ವ್ಯಕ್ತಿಗಳು ಪರಿಪೂರ್ಣು ಎಂಬಂತೆ ಇರುತ್ತಾರೆ. ಸ್ವಾಭಾವಿಕವಾಗಿ ಪ್ರತಿ ಜಾಗದಲ್ಲಿಯೂ ತಪ್ಪು ಹೆಜ್ಜೆ ಇಡುತ್ತಾರೆ. ಸಣ್ಣಪುಟ್ಟ ತಪ್ಪುಗಳ ಬಗ್ಗೆಯೂ ಕುಂದುಕೊರತೆ, ಕೊಂಕುಗಳನ್ನು ತೆಗೆಯುತ್ತಿರುತ್ತಾರೆ.

3. ವೃಶ್ಚಿಕ ರಾಶಿ Scorpio:

ವೃಶ್ಚಿಕ ರಾಶಿ ಜನರು ಎಲ್ಲವೂ ಸಾರಾಸಗಟಾಗಿ ಸರಿಯಾಗಿಯೇ ಇರಬೇಕು ಎಂದು ಲೆಕ್ಕ ಹಾಕುತ್ತಾರೆ. ಅವ್ಯವಸ್ಥೆ, ಅರಾಜಕತೆ, ಅವಿನೀತಿ. ಅನ್ಯಾಯ, ಅಸಂಬಂದ್ಧಗಳನ್ನು ಸುತರಾಂ ಇಷ್ಟಪಡುವುದಿಲ್ಲ. ಎಲ್ಲವೂ ಇದಂ ಇತ್ತಂ ಎಂಬಂತೆ ಇರಬೇಕು ಎಂದು ಬಯಸುತ್ತಾರೆ. ಇದೆಲ್ಲವೂ ಸರಿಯಾಗಿ ಇಲ್ಲ ಎಂದು ತಿಳಿಯುತ್ತಿದ್ದಂತೆ ಅದರ ವಿರುದ್ಧ ಗುಟುರು ಹಾಕುತ್ತಾರೆ.

4. ಧನು ರಾಶಿ Sagittarius: ಧನು ರಾಶಿಯ ರಾಶಿ ರಾಶಿಯಾಗಿ ಪ್ರಾಮಾಣಿಕರಾಗಿರುತ್ತಾರೆ. ಎಲ್ಲವನ್ನೂ ಬಹಿರಂಗವಾಗಿ ಹೇಳುತ್ತಾ ಇರುತ್ತಾರೆ. ಈ ಧನು ರಾಶಿಯ ಜನರಿಗೆ ಯಾವಾಗ ಸುಮ್ಮನಿರಬೇಕು, ಮೌನವಾಗಿರಬೇಕು, ಯಾವಾಗ ಮಾತನಾಡಬೇಕು ಎಂಬುದರ ಬಗ್ಗೆ ಜ್ಞಾನವೇ ಇರುವುದಿಲ್ಲ. ಅವರಿಗೆ ಯಾವುದೋ ಒಂದು ಒಂಚೂರೇಚೂರು ಇಷ್ಟವಾಗುವುದಿಲ್ಲ ಎಂದಾದರೆ ಎದುರಿಗಿನ ವ್ಯಕ್ತಿಯಿಂದ ಹಿಡಿದು ಇಡೀ ವ್ಯವಸ್ಥೆಯನ್ನು ಜಾಲಡಿಬಿಡುತ್ತಾರೆ. ಆ ದುಃಖದಲ್ಲೇ ಮುಳುಗಿಬಿಡುತ್ತಾರೆ.

5. ಕುಂಭ ರಾಶಿ Aquarius: ಇವರು ಬುದ್ಧಿವಂತರೂ, ಚೌಕಾಸಿ ಜನರು ಆಗಿರುತ್ತಾರೆ. ಕುಂಭ ರಾಶಿಯ ವ್ಯಕ್ತಿಗಳು ಪ್ರತಿ ವಿಷಯದಲ್ಲಿಯೂ ಸಾಫಲ್ಯತೆ ಕಾಣಲು ಬಯಸುತ್ತಾರೆ. ಇದರ ಹುಡುಕಾಟದಲ್ಲಿ ತಮ್ಮಲ್ಲಿನ ಕ್ರೋಧ, ಆವೇಶಗಳನ್ನು ಬಹಿರಂಗಪಡಿಸುತ್ತಾ ಎದುರಿಗಿನ ವ್ಯಕ್ತಿಗಳ ಮೇಲೆ ಎಗರಾಡುತ್ತಾ ಇರುತ್ತಾರೆ.

(five zodiac signs that are always complaining know about them how)

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ