Sputnik Light ಭಾರತದಲ್ಲಿ ರಷ್ಯಾದ ಸಿಂಗಲ್ ಶಾಟ್ ಸ್ಪುಟ್ನಿಕ್ ಲೈಟ್ ಲಸಿಕೆ ಪ್ರಯೋಗ  ಶೀಘ್ರ ಆರಂಭ

TV9 Digital Desk

| Edited By: Rashmi Kallakatta

Updated on:Sep 15, 2021 | 11:56 AM

Covid Vaccine: ದೇಶೀಯ ಫಾರ್ಮಾ ಕಂಪನಿ ಪ್ಯಾನೇಸಿಯಾ ಬಯೋಟೆಕ್ ತಯಾರಿಸಿದ ಸ್ಪುಟ್ನಿಕ್ ಲೈಟ್ ನ ಮಾದರಿಗಳನ್ನು ಈಗಾಗಲೇ ಗುಣಮಟ್ಟ, ಸುರಕ್ಷತೆ ಪರಿಶೀಲನೆಗಾಗಿ ಕಸೌಲಿಯ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿಯಲ್ಲಿ ಕಳುಹಿಸಲಾಗಿದೆ

Sputnik Light ಭಾರತದಲ್ಲಿ ರಷ್ಯಾದ ಸಿಂಗಲ್ ಶಾಟ್ ಸ್ಪುಟ್ನಿಕ್ ಲೈಟ್ ಲಸಿಕೆ ಪ್ರಯೋಗ  ಶೀಘ್ರ ಆರಂಭ
ಸ್ಪುಟ್ನಿಕ್ ಲೈಟ್

ದೆಹಲಿ: ರಷ್ಯಾದ ಸಿಂಗಲ್ ಶಾಟ್ ಲಸಿಕೆ  ಸ್ಪುಟ್ನಿಕ್ ಲೈಟ್​​ನ (Sputnik Light ) ಬ್ರಿಡ್ಜಿಂಗ್ ಟ್ರಯಲ್ ಅನ್ನು ಆರಂಭಿಸಲು ಭಾರತ ಸಜ್ಜಾಗುತ್ತಿದ್ದಂತೆ, ಮೊದಲ ಬ್ಯಾಚ್ ಅನ್ನು ಗುಣಮಟ್ಟ ಮತ್ತು ಸುರಕ್ಷತೆ ಮೌಲ್ಯಮಾಪನಕ್ಕಾಗಿ ಕಳುಹಿಸಲಾಗಿದೆ ಎಂದು ನ್ಯೂಸ್ 18 ಡಾಟ್ ಕಾಮ್ ವರದಿ ಮಾಡಿದೆ. ಪ್ಯಾನೇಸಿಯಾ ಬಯೋಟೆಕ್ ತಯಾರಿಸಿದ ಬ್ಯಾಚ್ ಅನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ನಂತರ ಡೋಸೇಜ್‌ಗಳನ್ನು ಪ್ರಯೋಗದಲ್ಲಿ ಭಾಗವಹಿಸುವವರಿಗೆ ಸುರಕ್ಷಿತವಾಗಿ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಜೂನ್ 30 ರಂದು ಸ್ಪುಟ್ನಿಕ್ ಲೈಟ್ ಹಂತ -3 ಕ್ಲಿನಿಕಲ್ ಪ್ರಯೋಗದ ಅಗತ್ಯವನ್ನು ತಳ್ಳಿಹಾಕಿದ ನಂತರ, ತಜ್ಞರ ಸಮಿತಿ-ವಿಷಯ ತಜ್ಞರ ಸಮಿತಿ (SEC)ಯು ಆಗಸ್ಟ್ 5 ರಂದು ಪ್ರಯೋಗ ನಡೆಸಲು ಡಾ. ರೆಡ್ಡೀಸ್ ಗೆ  ಅನುಮತಿ ನೀಡಿತು. ಹೈದರಾಬಾದ್ ಮೂಲದ ಡಾ. ರೆಡ್ಡೀಸ್  ಭಾರತದಲ್ಲಿ ಬ್ರಾಂಡ್ ಸ್ಪುಟ್ನಿಕ್ ವಿ ಯ ಉಸ್ತುವಾರಿ ವಹಿಸಿದ್ದಾರೆ.

“ದೇಶೀಯ ಫಾರ್ಮಾ ಕಂಪನಿ ಪ್ಯಾನೇಸಿಯಾ ಬಯೋಟೆಕ್ ತಯಾರಿಸಿದ ಸ್ಪುಟ್ನಿಕ್ ಲೈಟ್ ನ ಮಾದರಿಗಳನ್ನು ಈಗಾಗಲೇ ಗುಣಮಟ್ಟ, ಸುರಕ್ಷತೆ ಪರಿಶೀಲನೆಗಾಗಿ ಕಸೌಲಿಯ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿಯಲ್ಲಿ ಕಳುಹಿಸಲಾಗಿದೆ” ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಪ್ರಯೋಗದಲ್ಲಿ ಭಾಗವಹಿಸುವವರ ದಾಖಲಾತಿ ಈ ವಾರ ಆರಂಭವಾಗುವ ಸಾಧ್ಯತೆಯಿದೆ.” ಎಂದು ಹೆಸರು ಹೇಳಲು ಬಯಸದ ಅಧಿಕಾರಿ ಹೇಳಿದ್ದಾರೆ .

ಪ್ಯಾನೇಸಿಯಾ ಬಯೋಟೆಕ್‌ಗೆ ಈ ಬಗ್ಗೆ ಇಮೇಲ್ ಕಳುಹಿಸಿದ್ದು, ಇದಕ್ಕೆ ಪ್ರತಿಕ್ರಿಯೆ ಬಂದಿಲ್ಲ ಎಂದು ನ್ಯೂಸ್ 18 ಹೇಳಿದೆ.

ಲಸಿಕೆ ನೀಡಲಿರುವ ಆಸ್ಪತ್ರೆಗಳ ದಾಖಲಾತಿ ಆರಂಭ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬ ಅಧಿಕಾರಿಯು ರಷ್ಯಾದ ಸಿಂಗಲ್ ಶಾಟ್ ಲಸಿಕೆಯ ಪ್ರಯೋಗವನ್ನು ಪ್ರಾರಂಭಿಸಲು ಇಲಾಖೆಯನ್ನು ತಲುಪಲಾಗಿದೆ ಎಂದು ದೃಢಪಡಿಸಿದರು. ಸಿಟಿಆರ್‌ಐ (CTRI)-ಭಾರತದ ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ, ಲಸಿಕೆ ಪ್ರಯೋಗಕ್ಕಾಗಿ ಆಸ್ಪತ್ರೆಯನ್ನು ಆಯ್ಕೆ ಮಾಡಿರುವುದಾಗಿರುವ ಇಮೇಲ್ ಅನ್ನು ಅಧಿಕಾರಿ ತೋರಿಸಿದರು. ಸಿಟಿಆರ್​​ಐ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ನಡೆಸಲ್ಪಡುವ ಒಂದು ಪೋರ್ಟಲ್ ಆಗಿದೆ. ಅಗತ್ಯ ಅನುಮೋದನೆಗಳನ್ನು ಪಡೆದ ನಂತರ ಕಂಪನಿಗಳು ಇಲ್ಲಿ ಪ್ರಯೋಗವನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಸಿಟಿಆರ್‌ಐ ಆಡಳಿತವು ಕಳುಹಿಸಿದ ಇಮೇಲ್ ಪ್ರಕಾರ, “ಇದು ಹಂತ III, ಓಪನ್ ಲೇಬಲ್, ನಿಯಂತ್ರಣವಿಲ್ಲದ, ಮಲ್ಟಿಸೆಂಟರ್, ಬ್ರಿಡ್ಜಿಂಗ್ ಅಧ್ಯಯನವನ್ನು ಉಲ್ಲೇಖಿಸಿ ಸ್ಪುಟ್ನಿಕ್‌ನ ಒಂದೇ ಡೋಸ್‌ನ ಇಮ್ಯುನೊಜೆನಿಸಿಟಿ ಮೌಲ್ಯಮಾಪನ ಮಾಡುತ್ತದೆ. SARS-CoV-2 ಸೋಂಕನ್ನು ತಡೆಗಟ್ಟಲು ಭಾರತೀಯ ವಯಸ್ಕರು ಮತ್ತು ಹಿರಿಯರಿಗೆ ಸ್ಪುಟ್ನಿಕ್ ಲೈಟ್ ನ ಒಂದು ಡೋಸ್ ಸುರಕ್ಷತೆಯನ್ನು ನೀಡುತ್ತದೆ ‘ ಎಂದು ನೋಂದಣಿಗಾಗಿ CTRI ಗೆ ಸಲ್ಲಿಸಲಾದ ಇಮೇಲ್ ಉಲ್ಲೇಖಿಸಿದೆ. ಇದರಲ್ಲಿ 17 ಸೆಪ್ಟೆಂಬರ್ 2021 ರಿಂದ ರೋಗಿಗಳ ದಾಖಲಾತಿಯನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿದೆ.

ವಿವರಗಳನ್ನು ನೀಡಲು ಮತ್ತು ಭಾಗವಹಿಸುವಿಕೆಯನ್ನು ಅನುಮೋದಿಸಲು ಅಥವಾ ತಿರಸ್ಕರಿಸಲು ಆಸ್ಪತ್ರೆಗೆ ಹೇಳಲಾಗಿದೆ. ” ಪ್ರಾಯೋಗಿಕ ನೋಂದಣಿಗೆ ಇದು ಕಡ್ಡಾಯವಾಗಿರುವುದರಿಂದ ಈ ಇಮೇಲ್‌ಗೆ ಬೇಗನೆ ಉತ್ತರಿಸುವ ಮೂಲಕ ದಯವಿಟ್ಟು ದೃಢೀಕರಿಸಲು/ಪರಿಶೀಲಿಸಲು ವಿನಂತಿಸಲಾಗಿದೆ. ” ಎಂದು CTRI ಆಡಳಿತ ವಿಭಾಗವು ಕಳುಹಿಸಿದ ಇಮೇಲ್ ಹೇಳಿದೆ.

ಆದಾಗ್ಯೂ, ಡಾ. ರೆಡ್ಡೀಸ್  ಪ್ರಯೋಗಾಲಯದ ವಕ್ತಾರರು ಹೀಗೆ “ನಾವು ಸಿಟಿಆರ್​​ಐ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲದ ಯಾವುದೇ ಮಾಹಿತಿಯನ್ನು ಕಾಮೆಂಟ್ ಮಾಡುವುದಿಲ್ಲ ಅಥವಾ ಬಳಸಲು ಶಿಫಾರಸು ಮಾಡುವುದಿಲ್ಲ.”ಎಂದು ಹೇಳಿದ್ದಾರೆ.

ಅನುಮೋದನೆಗಾಗಿ ಡಾ. ರೆಡ್ಡೀಸ್ ಸಮಿತಿಯನ್ನು ಒಪ್ಪಿಸಿದ್ದು ಹೇಗೆ? ಜೂನ್ 30 ರಂದು ಭಾರತದಲ್ಲಿ ಲಸಿಕೆ ಮತ್ತು ಔಷಧಿಗಳ ಅನುಮೋದನೆ ಅಥವಾ ನಿರಾಕರಣೆಗಾಗಿ ಭಾರತೀಯ ಔಷಧ ನಿಯಂತ್ರಕ ಜನರಲ್ (ಡಿಸಿಜಿಐ) ಅನ್ನು ಶಿಫಾರಸು ಮಾಡುವ ಎಸ್ಇಸಿ, ಭಾರತದಲ್ಲಿ ಸ್ಪುಟ್ನಿಕ್ ಲೈಟ್ ನ 3 ನೇ ಹಂತದ ಪ್ರಯೋಗಗಳನ್ನು ನಡೆಸಲು ಯಾವುದೇ “ವೈಜ್ಞಾನಿಕ ತಾರ್ಕಿಕ” ವನ್ನು ಕಂಡುಕೊಂಡಿಲ್ಲ ಎಂದು ಡಾ. ರೆಡ್ಡೀಸ್​​ಗೆ ಹೇಳಿದೆ.

ಸಮಿತಿ ಪ್ರಕಾರ, ಸ್ಪುಟ್ನಿಕ್ ಲೈಟ್ ಸಾಮಾನ್ಯ ಲಸಿಕೆ ಸ್ಪುಟ್ನಿಕ್ ವಿ ಯ ಘಟಕ -1 (ಡೋಸ್ ಒನ್) ಮತ್ತು ಭಾರತೀಯ ಜನಸಂಖ್ಯೆಯಲ್ಲಿ ಅದರ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿ ಡೇಟಾವನ್ನು ಈಗಾಗಲೇ ಇಲ್ಲಿ ಪ್ರಯೋಗದಲ್ಲಿ ರಚಿಸಲಾಗಿದೆ. ಪ್ರತ್ಯೇಕ, ಇದೇ ರೀತಿಯ ಪ್ರಯೋಗವನ್ನು ನಡೆಸಲು ಸಮಿತಿಗೆ ಸಮರ್ಪಕ ಡೇಟಾ ಮತ್ತು ಸಮರ್ಥನೆ ಸಿಕ್ಕಿಲ್ಲ.

ಆದಾಗ್ಯೂ, ಆಗಸ್ಟ್ 5 ರಂದು ನಡೆದ ಸಮಿತಿ ಸಭೆಯ ಮಿನಿಟ್ಸ್ ಪ್ರಕಾರ – “ಸಂಸ್ಥೆಯು ಈಗ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿಯನ್ನು ಪ್ರಸ್ತುತಪಡಿಸಿದೆ ಮತ್ತು ಪ್ರತಿಕಾಯಗಳ ದೀರ್ಘಾಯುಷ್ಯವನ್ನು ನೀಡುತ್ತದೆ, ಇದು ಭಾಗವಹಿಸುವವರಲ್ಲಿ ಪ್ರತಿಕಾಯಗಳ ನಿರಂತರತೆಯ ಅಳತೆಯನ್ನು ನೀಡುತ್ತದೆ. ” ಎಂದು ಹೇಳಿದೆ.

ಎಸ್ಇಸಿ, ವಿವರವಾದ ಚರ್ಚೆಯ ನಂತರ, ಭಾರತೀಯ ಜನಸಂಖ್ಯೆಯಲ್ಲಿ ಹಂತ III ಇಮ್ಯೂನ್-ಬ್ರಿಡ್ಜಿಂಗ್ ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಅನುಮತಿ ನೀಡಲು ಶಿಫಾರಸು ಮಾಡಲಾಯಿತು “.  ಮಧ್ಯಂತರ ವಿಶ್ಲೇಷಣೆಯನ್ನು 42 ನೇ ದಿನದಲ್ಲಿ ನಡೆಸಬಹುದು ಏಕೆಂದರೆ ಈ ಡೇಟಾವನ್ನು ಮೊದಲ ಡೋಸ್ ನಂತರ ಭಾರತದಲ್ಲಿ ಸ್ಪುಟ್ನಿಕ್ V ಪ್ರಯೋಗದ ಸಮಯದಲ್ಲಿ ಉತ್ಪಾದಿಸಲಾಗಿಲ್ಲ, ಇದು 21 ನೇ ದಿನದವರೆಗೆ ಮಾತ್ರ ಲಭ್ಯವಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:  Coronavirus cases in India: ದೇಶದಲ್ಲಿ 27,176 ಹೊಸ ಕೊವಿಡ್ ಪ್ರಕರಣ ಪತ್ತೆ, 284 ಮಂದಿ ಸಾವು

(India to Begin the bridging trial of Russia’s single-shot vaccine Sputnik Light Shortly)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada