ಪಂಜಾಬ್​ ಸಂಕಷ್ಟದ ಬಳಿಕ ಕಾಂಗ್ರೆಸ್​​ಗೆ ಎದುರಿಗೇ ಇದೆ ರಾಜಸ್ತಾನ ಅಂತಃಕಲಹ! ಇದಕ್ಕೆ ಹೈಕಮಾಂಡ್​ ಮದ್ದೇನು?

ಈ ಮಧ್ಯೆ, ಪಂಜಾಬ್​ ಸಂಕಷ್ಟದ ಬಳಿಕ ಕಾಂಗ್ರೆಸ್​​ಗೆ ಎದುರಾಗಿದೆ ರಾಜಸ್ಥಾನ ಅಂತಃಕಲಹ! ರಾಜಸ್ಥಾನದಲ್ಲಿನ ಆಂತಃಕಲಹ ಪಂಜಾಬ್​ನಷ್ಟೇ ಗಂಭೀರವಾಗಿದೆ. ಇದಕ್ಕೆ ಹೈಕಮಾಂಡ್​ ಮದ್ದೇನು? ಎಂಬುದು ಕುತೂಹಲಕಾರಿಯಾಗಿದೆ.

ಪಂಜಾಬ್​ ಸಂಕಷ್ಟದ ಬಳಿಕ ಕಾಂಗ್ರೆಸ್​​ಗೆ ಎದುರಿಗೇ ಇದೆ ರಾಜಸ್ತಾನ ಅಂತಃಕಲಹ! ಇದಕ್ಕೆ ಹೈಕಮಾಂಡ್​ ಮದ್ದೇನು?
ಪಂಜಾಬ್​ ಸಂಕಷ್ಟದ ಬಳಿಕ ಕಾಂಗ್ರೆಸ್​​ಗೆ ಎದುರಿಗೇ ಇದೆ ರಾಜಸ್ತಾನ ಅಂತಃಕಲಹ! ಇದಕ್ಕೆ ಹೈಕಮಾಂಡ್​ ಮದ್ದೇನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 20, 2021 | 11:29 AM

ಅಂತೂ ಇಂತೂ ಪಂಜಾಬ್​ನಲ್ಲಿ ರಾಜಕೀಯವಾಗಿ ಎದ್ದಿದ್ದ ಸುದೀರ್ಘ ಬೀಸುಗಾಳಿ ಈಗ ಒಂದು ಕಡೆ ನಿಲ್ಲುವ ಹಂತಕ್ಕೆ ಬಂದಿದೆ. ಚುನಾವಣೆ ಎದುರಿಗೇ ಇರುವ ಸದ್ಯ ಈ ಸಂಕಷ್ಟ ದೂರವಾದಂತೆ ಕಾಂಗ್ರೆಸ್​​ ಪಕ್ಷಕ್ಕೆ ಭಾಸವಾಗಿದೆಯಾದರೂ ಅದಾದಮೇಲೆ ಅಸೆಂಬ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗ ಕಾಂಗ್ರೆಸ್​​ ಎದುರಿಗೆ ರಾಜಸ್ತಾನ ಅಂತಃಕಲಹ ಕಾಡತೊಡಗಿದೆ. ಇದಕ್ಕೆ ಹೈಕಮಾಂಡ್​ ಮದ್ದೇನು? ಎಂಬುದು ಸದ್ಯದ ರಾಜಕೀಯ ಕುತೂಹಲ.

ಹಾವು ಮುಂಗುಸಿಯಂತೆ ಕಾದಾಡುತ್ತಿದ್ದ ಪಕ್ಷದ ಹಿರಿಯ ನಾಯಕ, ಮುಖ್ಯಮಂತ್ರಿ ಅಮರಿಂದರ್​ ಸಿಂಗ್ ಮತ್ತು ಮತ್ತೊಬ್ಬ ಪಕ್ಷದ ನಾಯಕ ನವಜೋತ್​ ಸಿಂಗ್​​ ಸಿಧು ನಡುವಣ ಕಲಹವನ್ನು ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್​ ಬಗೆಹರಿಸಿಕೊಂಡಿದೆ. ​ಅಮರಿಂದರ್​ ಸಿಂಗ್ ಅವರನ್ನ ಕೆಳಗಿಳಿಸಿ, ನವಜೋತ್​ ಸಿಂಗ್​​ ಸಿಧು ಅವರ ಆಪ್ತನನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂಡಿಸಿದೆ. ಅದ್ಯಕ್ಕೆ ಅಲ್ಲಿ ಎಲ್ಲವೂ ಇತ್ಯರ್ಥವಾಗಿದೆ ಅನ್ನಿಸುತ್ತಿದೆ. ಆದರೆ ಅಮರಿಂದರ್​ ಸಿಂಗ್ ಬಂಡಾಯ ಕಾಂಗ್ರೆಸ್​​ಗೆ ಹೇಗೆ ತಿರುಗುಬಾಣವಾಗಲಿದೆ ಎಂಬುದು ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಮನದಟ್ಟಾಗಲಿದೆ.

ಈ ಮಧ್ಯೆ, ಪಂಜಾಬ್​ ಸಂಕಷ್ಟದ ಬಳಿಕ ಕಾಂಗ್ರೆಸ್​​ಗೆ ಎದುರಾಗಿದೆ ರಾಜಸ್ಥಾನ ಅಂತಃಕಲಹ! ರಾಜಸ್ಥಾನದಲ್ಲಿನ ಆಂತಃಕಲಹ ಪಂಜಾಬ್​ನಷ್ಟೇ ಗಂಭೀರವಾಗಿದೆ. ಇದಕ್ಕೆ ಹೈಕಮಾಂಡ್​ ಮದ್ದೇನು? ಎಂಬುದು ಕುತೂಹಲಕಾರಿಯಾಗಿದೆ.

ರಾಜಸ್ತಾನದಲ್ಲಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋತ್​ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್​ ಪೈಲಟ್​ ಮಧ್ಯೆ ಒಂದು ವರ್ಷದಿಂದ ತಿಕ್ಕಾಟ ನಡೆದುಬಂದಿದೆ. ಈ ಮಧ್ಯೆ, ಕಾಂಗ್ರೆಸ್​ ಹೈಕಮಾಂಡ್​ ರಾಜಸ್ತಾನದಲ್ಲಿ ಪಕ್ಷದ ನಾಯಕರ ತಿಕ್ಕಾಟವನ್ನು ತಿಳಿಗೊಳಿಸಲು ಯತ್ನಿಸುತ್ತಿದೆ. ಆದರೆ ಫಲ ನೀಡುತ್ತಿಲ್ಲ. ಈ ಮಧ್ಯೆ, ಮುಖ್ಯಮಂತ್ರಿ ಅಶೋಕ್​ ಗೆಹ್ಲೋತ್​ ಸಂಪುಟವನ್ನು ಪುನಾರಚಿಸುವ ನಿರ್ಧಾರ ಇನ್ನೂ ಕಾರ್ಯಗತವಾಗಿಲ್ಲ. ತಿಕ್ಕಾಟ ಹೆಚ್ಚಾಗಿ, ಹೊಂದಾಣಿಕೆ ಕೊರತೆಯಿಂದಾಗಿ ಗೆಹ್ಲೋತ್​ ಸಂಪುಟ ಪುನಾರಚನೆ ಮುಂದೆ ಹೋಗುತ್ತಿದೆ.

ಸದ್ಯಕ್ಕೆ ಪಂಜಾಬ್​ ಫಾರ್ಮುಲಾ, ಅಧಿಕಾರ ಸ್ಥಿತ್ಯಂತರ ಕಂಡು ಪಕ್ಷದ ಯುವ ವರ್ಚಸ್ವೀ ನಾಯಕ ಸಚಿನ್​ ಪೈಲಟ್ ನಗೆಬೀರಿದ್ದಾರೆ. ಶೀಘ್ರದಲ್ಲೇ ​ರಾಜಸ್ತಾನದಲ್ಲಿಯೂ ಬದಲಾವಣೆಯ ಪರ್ವ ಕಂಡುಬರಲಿದೆ. ನಮ್ಮ ನಾಯಕ ಸಚಿನ್​ ಪೈಲಟ್ ಅದಾಗಲೇ ‘ಹೈ’ ನಾಯಕರ ಜೊತೆ ಮಾತುಕತೆ ಜಾರಿಯಲ್ಲಿಟ್ಟಿದ್ದಾರೆ ಎಂದು ಸಚಿನ್​ ಪೈಲಟ್ ಆಪ್ತರು ಹೇಳಿದ್ದಾರೆ. ಇದರಿಂದ ಸದ್ಯದಲ್ಲೇ ರಾಜಸ್ಥಾನದಲ್ಲೂ ಮುಖ್ಯಮಂತ್ರಿ ಬದಲಾಗುತ್ತಾರಾ? ಎಂಬ ಕುತೂಹಲ ಮೂಡಿದೆ.

ಆದರೆ ರಾಜಸ್ತಾನದಲ್ಲಿ ರಾಜಕೀಯ ವಾಸ್ತವ ಭಿನ್ನವಾಗಿದೆ. ಇಲ್ಲಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋತ್​ ಅವರಿಗೆ ಇನ್ನೂ ಪಕ್ಷದ ಮೇಲೆ ಹಿಡಿತ ಇದೆ. ಜೊತೆಗೆ ಅಶೋಕ್​ ಗೆಹ್ಲೋತ್​ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದಾರೆ. ಅದರೆ ಅಮರಿಂದರ್​ ಸಿಂಗ್​ಗೆ ಮುಳುವಾಗಿದ್ದೇ ಇದು. ಭಾರತೀಯ ಸೇನಾ ಹಿನ್ನೆಲೆಯ ಕ್ಯಾಪ್ಟನ್​ ಅಮರಿಂದರ್​ ಹೈಕಮಾಂಡ್​​ ವಿರುದ್ಧ ಸಿಡಿದೆದ್ದಿದ್ದರು.

ಜೊತೆಗೆ, ಪಂಜಾಬ್​ನಲ್ಲಿ ನವಜೋತ್​ ಸಿಂಗ್​​ ಸಿಧು ಕಾಂಗ್ರೆಸ್​ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಅದು ಅಮರಿಂದರ್​ ಸಿಂಗ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅದರಿಂದ ತಿಕ್ಕಾಟ ನಿರ್ಣಾಕಯ ಹಂತದತ್ತ ಸಾಗಿತು. ಜೊತೆಗೆ ರಾಜಕೀಯವಾಗಿ ಪಂಜಾಬ್​ನಲ್ಲಿ ಚುನಾವಣೆಗಳು 2022ರ ಮಾರ್ಚ್​​ನಲ್ಲಿದೆ. ಅಂದರೆ ಹತ್ತಿರದಲ್ಲಿಯೇ ಇದೆ. ಆದರೆ ರಾಜಸ್ತಾನದಲ್ಲಿ ಅಸೆಂಬ್ಲಿ ಚುನಾವಣೆಗೆ ಇನ್ನು ತುಸು ಹೆಚ್ಚು ಕಾಲ ಇದೆ. 2023ರ ಡಿಸೆಂಬರ್ ನಲ್ಲಿ ರಾಜಸ್ತಾನದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ.

ಆದರೆ ಪಂಜಾಬ್​ ಮಾದರಿಯಾಗಿಟ್ಟುಕೊಂಡು ರಾಜಸ್ತಾನದಲ್ಲಿ ದಿಢೀರನೆ ನಾಯಕತ್ವ ಬದಲಾವಣೆಗೆ ಕೈಹಾಕದಿದ್ದರೂ ರಾಜಸ್ತಾನದಲ್ಲಿನ ಆಂತರಿಕ ಕಲಹವನ್ನು ತಿಳಿಗೊಳಿಸುವುದು ಪಕ್ಷದ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಇನ್ನು ಪಂಜಾಬ್​, ರಾಜಸ್ತಾನದ ಹಾದಿಯಲ್ಲಿ ಛತ್ತೀಸ್​ಗಢದಲ್ಲಿಯೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಒಂದಷ್ಟು ತಲ್ಲಣಗಳು ಇವೆ. ಆರೋಗ್ಯ ಸಚಿವ ಟಿ ಎಸ್​ ಸಿಂಗ್​ಡೋ ​ ಛತ್ತೀಸ್​ಗಢದ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ. ಆದರೆ ಈ ಬದಲಾವಣೆಗಳು, ಪಕ್ಷದೊಳಗಿನ ದೋಷಗಳು ದೂರಗಾಮಿ ಪರಿಣಾಮಬೀರಬಲ್ಲದು. ಅದು 2024ರ ಲೋಕಸಭಾ ಸಾರ್ವಯ್ರಿಕ ಚುನಾವಣೆಗಳ ಮೇಲೂ ಪ್ರಭಾವ ಬೀರಬಲ್ಲದು. ಹಾಗಾಗಿ ಕಾಂಗ್ರೆಸ್​ ನಡೆ ಎಚ್ಚರಿಕೆಯಿಂದ ಆಗಬೇಕಿದೆ. ಏಕೆಂದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಕನಿಷ್ಠ 100 ಸ್ಥಾನ ಗಳಿಸುವ ಇರಾದೆ ಹೊಂದಿದೆ.

(after Punjab turmoil congress high command may face same situation in Rajasthan followed by Chhattisgarh)