AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಪ್ರಿಯಕರನೊಂದಿಗೆ ಓಡಿಹೋಗಲು ಹೆತ್ತ ತಂದೆ ತಾಯಿಗೆ ವಿಷ ಪ್ರಾಶನ ಮಾಡಿಸಿದ ಯುವತಿ

ಖುಷ್ಬು ಮತ್ತು ಸಚಿನ್ ಕುಟುಂಬವು ಸೂರತ್​ನ ದಿಂಡೋಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಇಬ್ಬರಿಗೂ ಸ್ನೇಹ ಬೆಳೆದಿದೆ. ದಿನ ಕಳೆಯುತ್ತಿದ್ದಂತೆ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದೆ.

Crime News: ಪ್ರಿಯಕರನೊಂದಿಗೆ ಓಡಿಹೋಗಲು ಹೆತ್ತ ತಂದೆ ತಾಯಿಗೆ ವಿಷ ಪ್ರಾಶನ ಮಾಡಿಸಿದ ಯುವತಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Sep 20, 2021 | 10:05 AM

Share

ಸೂರತ್​ನ 18 ವರ್ಷದ ಯುವತಿಯೋರ್ವಳು ತಾನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಲು ಹೆತ್ತ ತಂದೆ ತಾಯಿಗೆ ವಿಷ ಹಾಕಿದ್ದಾಳೆ. ಆರೋಪಿತ ಯುವತಿಯನ್ನು ಖುಷ್ಬು ಎಂದು ಗುರುತಿಸಲಾಗಿದೆ. 10ನೇ ತರಗತಿಯವರೆಗೆ ಓದಿದ್ದ ಆಕೆಯ ಪ್ರಿಯಕರ ಸಚಿನ್ ಎಂಬುವವನ ಜತೆ ಓಡಿ ಹೋಗಲು ನಿರ್ಧಾರ ಮಾಡಿದ್ದಳು. ಇದಕ್ಕೆ ಪೋಷಕರು ಅಡ್ಡಿಯಾದ್ದರಿಂದ, ಆಹಾರದಲ್ಲಿ ವಿಷ ಹಾಕಿ ನೀಡಿದ್ದಾಳೆ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಖುಷ್ಬು ಮತ್ತು ಸಚಿನ್ ಕುಟುಂಬವು ಸೂರತ್​ನ ದಿಂಡೋಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಇಬ್ಬರಿಗೂ ಸ್ನೇಹ ಬೆಳೆದಿದೆ. ದಿನ ಕಳೆಯುತ್ತಿದ್ದಂತೆ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದೆ. ಖುಷ್ಬು ಅಪ್ರಾಪ್ತ ವಯಸ್ಸಿನವಳಾದ್ದರಿಂದ ಪೋಷಕರು ಆ ಸಂಬಂಧವನ್ನು ನಿರಾಕರಿಸಿದ್ದಾರೆ. ಇದರಿಂದಾಗಿ ಬೇಸರಗೊಂಡ ಖುಷ್ಬು ಸಚಿನ್​ನೊಡನೆ ಮನೆಬಿಟ್ಟು ಓಡಿ ಹೋಗಿದ್ದಳು. ಖುಷ್ಬು ಕುಟುಂಬ ಅವರಿರುವ ಜಾಗವನ್ನು ಹುಡುಕಿ ಮರಳಿ ಮನೆಗೆ ಕರೆತಂದಿದ್ದರು. ಪ್ರೀತಿಯ ಮೋಹದಿಂದ ಖುಷ್ಬುವಿನ ಮನ ಬದಲಾಯಿಸಲು ಆ ನಗರವನ್ನು ಬಿಟ್ಟು ಬೇರೆಡೆಗೆ ಹೋಗಿ ವಾಸವಿದ್ದರು.

ಪೊಲೀಸರು ಮಾಹಿತಿ ತಿಳಿಸಿದಂತೆ, ಬೇರೆಡೆಗೆ ವಾಸವಿದ್ದಾಗಲೂ ಸಹ ಖುಷ್ಬು ಮನ ಬದಲಾಗಿಲ್ಲ. ಸಚಿನ್ ಜತೆಗಿನ ಪ್ರೀತಿಯನ್ನು ಮತ್ತೆ ಮುಂದುವರೆಸಿದ್ದಳು. ಆದರೆ 18 ವರ್ಷ ವಯಸ್ಸಾಗುವುದನ್ನೇ ಕಾಯುತ್ತಿದ್ದು, ತನ್ನ 18ನೇ ವರ್ಷದ ಜನ್ಮದಿನದ ಎರಡು ದಿನಗಳ ಬಳಿಕ ಸಚಿನ್ ಜತೆಗೆ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದ್ದಾಳೆ.

ಸೆಪ್ಟೆಂಬರ್ 12ನೇ ತಾರೀಕಿನಂದು ಮೆಡಿಕಲ್ ಸ್ಟೋರ್ಸ್​ನಿಂದ ಒಂದಿಷ್ಟು ಮಾತ್ರೆಗಳನ್ನು ತಂದು ಆಹಾರದಲ್ಲಿ ಬೆರೆಸಿ ಮನೆಯವರಿಗೆಲ್ಲಾ ನೀಡಿದ್ದಾಳೆ. ಸ್ವಲ್ಪ ಸಮಯದ ಬಳಿಕ ಮನೆಯವರು ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಿದ್ದಂತೆಯೇ ಸಚಿನ್ ಆಕೆಯ ಮನೆಗೆ ಬಂದು ಖುಷ್ಬುಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.

ಆಕೆಯ ತಂದೆ ವಂಜಾರಾ ಅವರಿಗೆ ಎಚ್ಚರವಾದ ಬಳಿಕ, ಎಚ್ಚರ ತಪ್ಪಿ ಬಿದ್ದಿದ್ದ ಮನೆಯವರನ್ನು ಎದ್ದೇಳಿಸಲು ಪ್ರಯತ್ನಿಸಿದ್ದಾರೆ. ಈ ಕಡೆ ಖುಷ್ಬು ಮತ್ತು ಸಚಿನ್ ಮದುವೆಯಾಗಲು ಪೊಲೀಸ್ ಠಾಣೆಯನ್ನು ತಲುಪಿದ್ದಾರೆ. ಖುಷ್ಬು ತಾಯಿ ಮತ್ತು ಸಹೋದರನ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಆಸ್ಪತ್ರೆಗೆ ಕರೆತರಲಾಗಿದೆ. ತಂದೆ ವಂಜಾರಾ ಅವರು ಖುಷ್ಬು, ಸಚಿನ್ ಮತ್ತು ಸಚಿನ್ ತಂದೆ ಅಶೋಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿತೂರಿ ಮಾಡಿ ವಿಷ ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

Crime News: ಪ್ರೀತಿಸಲು ನಿರಾಕರಿಸಿದ ಬಾಲಕಿಗೆ ಚಾಕು ಇರಿದ! ಒನ್​​ ಸೈಡ್ ಲವ್ ಹೆಸರಿನಲ್ಲಿ ಯುವಕನ ಹುಚ್ಚಾಟ

Crime News: ಹುಡುಗಿಗೆ ಮೆಸೇಜ್ ಕಳಿಸಿದ್ದಕ್ಕೆ ಕೇರಳದ ಯುವಕನ ಕತ್ತು ಹಿಸುಕಿ ಕೊಲೆ

(Girl poisons family to escape and marry her boyfriend in surat)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ