ಬೆಂಗಳೂರಿನಲ್ಲಿ ತುಪ್ಪ ಮಾರಾಟದ ನೆಪದಲ್ಲಿ ದರೋಡೆ ಮಾಡುತ್ತಿದ್ದ ತಂಡ ಬಂಧನ
ತುಪ್ಪ ಮಾರಾಟ ಮಾಡುವಾಗ ಮನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುತ್ತಿದ್ದರು. ಆನಂತರ ಎರಡೇ ದಿನಕ್ಕೆ ಲೂಟಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ನಾಟಿ ಹಸುವಿನ ತುಪ್ಪ ತಂದಿದ್ದೀವಿ ಸ್ವಾಮಿ..ಎನ್ನುತ್ತ ಪುಸಲಾಯಿಸಿ ಎಲ್ಲಿ ಬೆಲೆಬಾಳುವ ವಸ್ತುಗಳಿವೆ ಎಂದು ಕಣ್ಣಲ್ಲೇ ಸರ್ವೇ ನಡೆಸಿ ದರೋಡೆ ನಡೆಸುತ್ತಿದ್ದ ತಂಡವೊಂದನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ತುಪ್ಪ ಮಾರಾಟದ ನೆಪದಲ್ಲಿ ಮನೆ ಮನೆಗೆ ಭೇಟಿ ನೀಡಿ ಎಲ್ಲಿ ಬೆಲೆ ಬಾಳುವ ವಸ್ತುಗಳಿವೆ ಎಂದು ಆರೋಪಿಗಳು ಕಂಡುಹಿಡಿಯುತ್ತಿದ್ದರು. ಗೌರಿಕಿಶೋರಿ, ನೀರು ಆದಾ ಎಂಬುವವರೇ ಬಂಧಿತ ಮಹಿಳೆಯರು. ಆನಂತರ ಎರಡೇ ದಿನಗಳಲ್ಲಿ ತುಪ್ಪ ಮಾರಾಟದ ತಂಡ ದರೋಡೆ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತುಪ್ಪ ಮಾರುವವರ ವೇಶದಲ್ಲಿ ಕೆಂಪು ಹಾಗೂ ಕಪ್ಪು ಬಣ್ಣದ ಸೀರೆಯನ್ನು ಉಟ್ಟು ತಂಡದ ಸದಸ್ಯರು ಮನೆ ಮನೆಗೆ ಬರುತ್ತಿದ್ದರು. ಗುಜರಾತಿ ಗಿರ್ ತಳಿಯ ಹಸುವಿನ ತುಪ್ಪ ಎಂದು ಮಾರಾಟ ಮಾಡುತ್ತಿದ್ದರು. ತುಪ್ಪ ಮಾರಾಟ ಮಾಡುವಾಗ ಮನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುತ್ತಿದ್ದರು. ಆನಂತರ ಎರಡೇ ದಿನಕ್ಕೆ ಲೂಟಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಈ ತಂಡದ ಸದಸ್ಯರ ಮೇಲೆ ನಕಲಿ ಚಿನ್ನ ಮಾರಾಟ ಮಾಡಿದ ಆರೋಪವೂ ಇದೆ ಎಂದು ಸಹ ತಿಳಿದುಬಂದಿದೆ.
ಇದನ್ನೂ ಓದಿ:
ಬಿ ಎಸ್ ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಘೋಷಣೆ; ಲೋಕಸಭಾ ಸ್ಪೀಕರ್ ಓಂ ಬಿರ್ಲಾರಿಂದ ಪ್ರಶಸ್ತಿ ಪ್ರದಾನ
(Bengaluru Police arrested a gang who make theft in the name on Ghee selling)