AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಪ್ರೇಯಸಿಯನ್ನು ಕೊಂದ ಕೊಲೆಗಾರನ ಸಾವು; ಏಳು ವರ್ಷದ ಪ್ರೀತಿ ಸಾವಿನಲ್ಲಿ ಅಂತ್ಯ

ಯುವತಿಯನ್ನು ಕೊಲೆ ಮಾಡಿದ ಪ್ರೀಯಕರ ಶಿವಮೂರ್ತಿ ಬಳಿಕ ಡೆತ್ ನೋಟ್ ಬರೆದಿಟ್ಟು ತಾನು ವಿಷ ಸೇವಿಸಿದ್ದಾನೆ. ಆದರೆ ಶಿವಮೂರ್ತಿಯನ್ನು ಅಲ್ಲಿನ ಸ್ಥಳೀಯರು ಕಂಡು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಶಿವಮೂರ್ತಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಶಿವಮೊಗ್ಗ: ಪ್ರೇಯಸಿಯನ್ನು ಕೊಂದ ಕೊಲೆಗಾರನ ಸಾವು; ಏಳು ವರ್ಷದ ಪ್ರೀತಿ ಸಾವಿನಲ್ಲಿ ಅಂತ್ಯ
ಕವಿತ ಹಾಗೂ ಶಿವಮೂರ್ತಿ
TV9 Web
| Edited By: |

Updated on: Aug 28, 2021 | 11:32 AM

Share

ಶಿವಮೊಗ್ಗ: ಪ್ರೇಯಸಿಯನ್ನು ಕೊಲೆ ಮಾಡಿ ಪ್ರೀಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗಡಿಭಾಗದ ಬಾನುಕುಳಿ ಗ್ರಾಮದ ಸಮೀಪ ನಡೆದಿದೆ. ನಿನ್ನೆ ಪ್ರೇಯಸಿಯನ್ನು ಹತ್ಯೆ ಮಾಡಿ, ತಾನು ಕೂಡ ವಿಷ ಸೇವಿಸಿದ್ದ ಯುವಕ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನ, ನರ್ಸಿಂಗ್ ವಿದ್ಯಾರ್ಥಿನಿ ಕವಿತಾ (21) ಹಾಸ್ಟೇಲ್ ನಿಂದ ನಾಪತ್ತೆಯಾಗಿದ್ದು, ನಿನ್ನೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಬಾಳೆಕೊಡ್ಲು ಕಾಡಿನ‌ ಪರಿಸರದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕಳೆದ ಏಳು ವರ್ಷದಿಂದ ನೀನೇ ನನ್ನ ಜೀವ ಅಂತಾ ಪ್ರೀತಿ ಮಾಡುತ್ತಿದ್ದ ಯುವಕ ಶಿವಮೂರ್ತಿ. ಮೊನ್ನೆ ಕವಿತಾಳನ್ನು ಶಿವಮೊಗ್ಗದಿಂದ ಪುಸಲಾಯಿಸಿ ತನ್ನ ಊರು ಸಮೀಪದ ಕಾಡಿಗೆ ಕರೆದುಕೊಂಡು ಹೋಗಿದ್ದನು. ಈತನ ಪ್ರೀತಿಯನ್ನು ನಿರಾಕರಣೆ ಮಾಡಿದ್ದ ಪ್ರೇಯಸಿ ವಿರುದ್ಧ ಪ್ರೀಯಕರ ತಿರುಗಿ ಬಿದ್ದಿದ್ದು. ಪ್ರೇಯಸಿಯ ಕತ್ತು ಹಿಸುಕಿ ಶಿವಮೂರ್ತಿ ಕೊಲೆ ಮಾಡಿದ್ದಾನೆ.

ಹೀಗೆ ಯುವತಿಯನ್ನು ಕೊಲೆ ಮಾಡಿದ ಪ್ರೀಯಕರ ಶಿವಮೂರ್ತಿ ಬಳಿಕ ಡೆತ್ ನೋಟ್ ಬರೆದಿಟ್ಟು ತಾನು ವಿಷ ಸೇವಿಸಿದ್ದಾನೆ. ಆದರೆ ಶಿವಮೂರ್ತಿಯನ್ನು ಅಲ್ಲಿನ ಸ್ಥಳೀಯರು ಕಂಡು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಶಿವಮೂರ್ತಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಡೆತ್ ನೋಟ್ ಬರೆದು ಆತ್ಮಹತ್ಯೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಪ್ರೀಯಕರನು ಕೆಲವು ಸಾಲುಗಳ ಡೆತ್ ನೋಟ್ ಬರೆದಿಟ್ಟಿದ್ದನು. ಅಷ್ಟಕ್ಕೂ ಡೆತ್ ನೋಟ್ ನಲ್ಲಿ ತಾನು ಜೀವಕ್ಕಿಂತ ಹೆಚ್ಚು ಪ್ರೀತಿಸಿದ ಯುವತಿಯು ನನಗೆ ಕೈಕೊಟ್ಟು ಮತ್ತೊಬ್ಬ ಯುವಕನ ಜೊತೆ ಪ್ರೀತಿ ಪ್ರೇಮ ಎಂದು ಮುಂದುವರೆದಿದ್ದಾಳೆ. ಈ ಸಂಗತಿ ನೋಡಿ ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕವಿತಾ ನನಗೆ ಮೋಸ ಮಾಡಿದ್ದಾಳೆ. ಎಂದಿಗೂ ಪ್ರೀತಿಯನ್ನು ನಂಬಬೇಡಿ ಸ್ನೇಹಿತರೇ ಎಂದು ಬರೆದಿದ್ದಾನೆ.

ಏಳು ವರ್ಷದ ಪ್ರೀತಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗಡಿಭಾಗದ ಬಾನುಕುಳಿ ಗ್ರಾಮದ ಸಮೀಪದ ಕವಿತ ಹಾಗೂ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ತಳಲೆ ಗ್ರಾಮದ ಶಿವಮೂರ್ತಿ ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ನಡುವೆ ಏನಾಯಿತು ಗೊತ್ತಿಲ್ಲ. ಯುವತಿಯು ಶಿವಮೂರ್ತಿ ಪ್ರೀತಿಯಿಂದ ಹಂತ ಹಂತವಾಗಿ ದೂರ ಸರಿಯುತ್ತಿದ್ದಳು. ಯಾವಾಗ ಯುವತಿಯು ತನ್ನಿಂದ ದೂರವಾಗುತ್ತಿದ್ದಾಳೆ ಎನ್ನುವುದು ಯುವಕನಿಗೆ ಗೊತ್ತಾಯಿತೋ, ಅವಳು ಇಲ್ಲದೇ ಬದುಕು ಇಲ್ಲ ಎನ್ನುವ ನಿರ್ಧಾರಕ್ಕೆ ಆತ ಬಂದು ಕೊಲೆ ಮಾಡಿ, ತಾನು ಸಾವಿಗೆ ಶರಣಾಗಿದ್ದಾನೆ. ಆದರೆ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ.

ವರದಿ: ಬಸವರಾಜ್ ಯರಗಣವಿ

ಇದನ್ನೂ ಓದಿ: ಮೊಮ್ಮಗಳಿಗೆ ಮೇಕೆ ಗುಮ್ಮಿದ್ದನ್ನು ಪ್ರಶ್ನಿಸಿದ್ದಕ್ಕೆ ವೃದ್ಧನ ಕೊಲೆ; ಹರಕೆಯ ಮೇಕೆ ವಿಚಾರಕ್ಕೆ ವ್ಯಕ್ತಿ ಬಲಿ

ಕುಮಾರಸ್ವಾಮಿ ಲೇಔಟ್​ನಲ್ಲಿ ದಂಪತಿ ಕೊಲೆ ಕೇಸ್; ಮನೆ ಬಾಡಿಗೆಗಿದ್ದ ನಾಲ್ವರು ಅರೆಸ್ಟ್