AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹಸಿ ಮೆಣಸಿನಕಾಯಿ ಐಸ್​ ಕ್ರೀಮ್​ ತಿಂದಿದ್ದೀರಾ? ವೈರಲ್ ಆಯ್ತು ಹೊಸ ರೆಸಿಪಿಯ ವಿಡಿಯೋ

ಸ್ಪೂನ್ಸ್ ಆಫ್ ಇಂದೋರ್ 2.0 ಎಂಬ ಯೂಟ್ಯೂಬ್ ಚಾನೆಲ್ ಬೀದಿ ಬದಿ ವ್ಯಾಪಾರಿಯೊಬ್ಬರು ಹಸಿ ಮೆಣಸಿನಕಾಯಿ ಐಸ್ ಕ್ರೀಮ್ ರೋಲ್ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ 76 ಲಕ್ಷಕ್ಕೂ ಹೆಚ್ಚು ವ್ಯೂವ್ಸ್​ ಪಡೆದು ಈ ವಿಡಿಯೋ ವೈರಲ್​ ಆಗಿದೆ.

Viral Video: ಹಸಿ ಮೆಣಸಿನಕಾಯಿ ಐಸ್​ ಕ್ರೀಮ್​ ತಿಂದಿದ್ದೀರಾ? ವೈರಲ್ ಆಯ್ತು ಹೊಸ ರೆಸಿಪಿಯ ವಿಡಿಯೋ
ಐಸ್ ಕ್ರೀಮ್
Follow us
TV9 Web
| Updated By: preethi shettigar

Updated on:Dec 25, 2021 | 3:36 PM

ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಖಾದ್ಯಗಳ ವಿಡಿಯೋ ಸಾಕಷ್ಟು ಹರಿದಾಡುತ್ತವೆ. ಅವುಗಳಲ್ಲಿ ಕೆಲವನ್ನು ಜನರು ಇಷ್ಟ ಪಟ್ಟಿದ್ದರೆ ಇನ್ನು ಕೆಲವು ವಿಲಕ್ಷಣ ಆಹಾರ ಸಂಯೋಜನೆಗಳು ಹೆಚ್ಚಿನ ಜನರಿಗೆ ಇಷ್ಟವಾಗುವುದಿಲ್ಲ. ಇದೀಗ ಮತ್ತೊಂದು ಹೊಸ ತಿನಿಸಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ಸಖತ್ ವೈರಲ್ ಆಗುತ್ತಿದೆ. ಸ್ಪೂನ್ಸ್ ಆಫ್ ಇಂದೋರ್ 2.0 ಎಂಬ ಯೂಟ್ಯೂಬ್ ಚಾನೆಲ್ ಬೀದಿ ಬದಿ ವ್ಯಾಪಾರಿಯೊಬ್ಬರು ಹಸಿ ಮೆಣಸಿನಕಾಯಿ ಐಸ್ ಕ್ರೀಮ್ ರೋಲ್ ಮಾಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ 76 ಲಕ್ಷಕ್ಕೂ ಹೆಚ್ಚು ವ್ಯೂವ್ಸ್​ ಪಡೆದು ಈ ವಿಡಿಯೋ ವೈರಲ್​ ಆಗಿದೆ.

ಇಂದೋರ್ ಮೂಲದ ವ್ಯಾಪಾರಿಯೊಬ್ಬರು ತನ್ನ ರಸ್ತೆಬದಿಯ ಅಂಗಡಿಯಲ್ಲಿ ಹಸಿ ಮೆಣಸಿನಕಾಯಿ ಮತ್ತು ಇತರ ಕೆಲವು ಪದಾರ್ಥಗಳೊಂದಿಗೆ ಐಸ್‌ಕ್ರೀಮ್ ಅನ್ನು ತಯಾರಿಸಿದ್ದಾರೆ. ಈ ಹೊಸ ವಿಧಾನದ ವಿಲಕ್ಷಣ ಆಹಾರ ಸಂಯೋಜನೆಯನ್ನು ನೆಟ್ಟಿಗರು ಇಷ್ಟಪಟ್ಟಿಲ್ಲ. ಈ ತಿನಿಸು ನೋಡಿ ಹಲವರು ಅಸಾಮಾಧಾನ ಹೊರಹಾಕಿದ್ದಾರೆ. ತಮ್ಮ ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ತಿಳಿಸಿದ್ದಾರೆ. ಈ ರೀತಿಯ ಆಹಾರ ಸೇವಿಸಲು ಸಾಧ್ಯವಿಲ್ಲ ಎಂದು ಕೆಲವರು ಕಮೆಂಟ್​ ಮಾಡಿದ್ದರೆ ಮತ್ತೆ ಕೆಲವರು ಇದಕ್ಕೆ ಶುಂಠಿ ಪೆಸ್ಟ್​ ಕೂಡ ಸೇರಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದಲ್ಲಿ ಮೊದಲಿಗೆ ಹಸಿ ಮೆಣಸಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಂಡಿದ್ದಾರೆ. ಅದರ ನಂತರ, ಹಾಲಿನ ಕೆನೆಗೆ ನುಟೆಲ್ಲಾ ಚಾಕೊಲೇಟ್ ಸ್ಪ್ರೆಡ್ ಅನ್ನು ಸೇರಿಸಿದ್ದಾರೆ. ಬಳಿಕ ಐಸ್ ಕ್ರೀಮ್ ತಯಾರಿಸಲು ಬೇಕಾದ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದ್ದಾರೆ. ನಂತರ ಅದನ್ನು ಗಟ್ಟಿಯಾಗುವವರೆಗೆ ಬಿಟ್ಟು ರೋಲ್ ರೂಪದಲ್ಲಿ ಸಿದ್ಧಮಾಡಿದ್ದಾರೆ. ಕೊನೆಗೆ ಈ ರೋಲ್​ನ ಮೇಲೆ ಹಸಿಮೆಣಸಿನಕಾಯಿ ತುಂಡುಗಳಿಂದ ಅಲಂಕರಿಸಿದ್ದಾರೆ.

ಇದನ್ನೂ ಓದಿ: ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

ಟೋಸ್ಟರ್​ನಿಂದ ಹೊರಬಂದ ಬ್ರೆಡ್​ ನೋಡಿ ಗಾಬರಿಯಾದ ಬೆಕ್ಕು: ವೀಡಿಯೋ ವೈರಲ್​

Published On - 9:53 am, Tue, 7 December 21