ಟೋಸ್ಟರ್​ನಿಂದ ಹೊರಬಂದ ಬ್ರೆಡ್​ ನೋಡಿ ಗಾಬರಿಯಾದ ಬೆಕ್ಕು: ವೀಡಿಯೋ ವೈರಲ್​

ರೆಡ್ಡಿಟ್ ಹಂಚಿಕೊಂಡ ಈ ಕಿರುವಿಡಿಯೋದಲ್ಲಿ ಬೆಕ್ಕೊಂದು ಅಡುಗೆಮನೆಯ ಕಟ್ಟೆಯ ಮೇಲೆ ನಿಧಾನವಾಗಿ ಹತ್ತಿ ಬಗ್ಗಿ ನೋಡುತ್ತದೆ. ಇದೇ ವೇಳೆ ಟೋಸ್ಟರ್ ನಿಂದ ಬ್ರೆಡ್ ಪುಟಿದು ಹಾರುತ್ತದೆ. ಇದರಿಂದ ಗಾಬರಿಗೊಂಡ ಬೆಕ್ಕು ಕೆಳಕ್ಕೆ ಬೀಳುತ್ತದೆ. ಬೆಕ್ಕಿನ ತಮಾಷೆಯ ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಟೋಸ್ಟರ್​ನಿಂದ ಹೊರಬಂದ ಬ್ರೆಡ್​ ನೋಡಿ ಗಾಬರಿಯಾದ ಬೆಕ್ಕು: ವೀಡಿಯೋ ವೈರಲ್​
cat scared in kitchen

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲೂ ಪ್ರಾಣಿ, ಪಕ್ಷಿಗಳ ತರಲೆ, ತುಂಟಾಟ ಅವುಗಳ ಓಡಾಡದ ವಿಡಿಯೋಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಪ್ರಾಣಿಪ್ರಿಯರನ್ನು ಇಂತಹ ವಿಡಿಯೋಗಳು ಆಗಾಗ ಮುದಗೊಳಿಸುತ್ತವೆ. ಇಲ್ಲೊಂದು ಬೆಕ್ಕು ಅಡುಗೆಮನೆಯಲ್ಲಿ ಓಡಾಡುವಾಗ ಟೋಸ್ಟರ್ ಮೂಲಕ ಬ್ರೆಡ್ ಒಂದು ಇದ್ದಕ್ಕಿಂದ ಹೊರಬಂದಿದ್ದನ್ನು ನೋಡಿ ಆಶ್ಚರ್ಯದಿಂದ ಕಣ್ಣರಳಿಸಿ ನೋಡಿ ಅಡುಗೆ ಮನೆಯ ಕಟ್ಟೆಯಿಂದ ಜಿಗಿಯುತ್ತದೆ. ಜಿಗಿಯುತ್ತಿದ್ದಂತೆ ಆಯತಪ್ಪಿ ಬೆಕ್ಕು ನೆಲಕ್ಕೆ ಬಿದ್ದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೆಡ್ಡಿಟ್ ಹಂಚಿಕೊಂಡ ಈ ಕಿರುವಿಡಿಯೋದಲ್ಲಿ ಬೆಕ್ಕೊಂದು ಅಡುಗೆಮನೆಯ ಕಟ್ಟೆಯ ಮೇಲೆ ನಿಧಾನವಾಗಿ ಹತ್ತಿ ಬಗ್ಗಿ ನೋಡುತ್ತದೆ. ಇದೇ ವೇಳೆ ಟೋಸ್ಟರ್ ನಿಂದ ಬ್ರೆಡ್ ಪುಟಿದು ಹಾರುತ್ತದೆ. ಇದರಿಂದ ಗಾಬರಿಗೊಂಡ ಬೆಕ್ಕು ಕೆಳಕ್ಕೆ ಬೀಳುತ್ತದೆ. ಬೆಕ್ಕಿನ ತಮಾಷೆಯ ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. this toast is taking a whi….. ಎಂದು ಕ್ಯಾಪ್ಷನ್​ ನೀಡುವ ಮೂಲಕ ರೆಡ್ಡಿಟ್ ವಿಡಿಯೊವನ್ನು ಹಂಚಿಕೊಂಡಿದೆ.

ವಿಡಿಯೋ ಶೇರ್ ಅಗಿ 9 ಗಂಟೆಯೊಳಗೆ 600ಕ್ಕೂ ಹೆಚ್ಚು ವಿಕ್ಷಣೆ ಪಡೆದಿದೆ. ವಿಡಿಯೋ ನೋಡಿ ನೆಟ್ಟಿಗರು ಖುಷಿಯ ಎಮೋಜಿಗಳನ್ನು ಹಂಚಿಕೊಂಡಿದ್ದು ಇನ್ನೂ ಹಲವರು ಬೆಕ್ಕಿನ ಮುಗ್ಧತೆಗೆ ಮನಸೋತಿದ್ದಾರೆ.

ಇದೇ ಮೊದಲೇನಲ್ಲ. ಈ ಹಿಂದೆಯೂ ಬೆಕ್ಕಿನ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವುದರ ಮೂಲಕ ನೋಡುಗರ ಮನಗೆದ್ದಿತ್ತು. ಅದಕ್ಕೆ ಉದಾಹರಣೆಯೆಂದರೆ ಕೆಲವು ದಿನಗಳ ಹಿಂದೆ ಈಜಿಪ್ಟ್ ನಲ್ಲಿ ಬೆಕ್ಕೊಂದು ಕೊಳಲಿನ ಸಂಗೀತಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ವಿಡಿಯೋ ಇಂಟರ್ ನೆಟ್ ನಲ್ಲಿ ವೈರಲ್ ಆಗಿತ್ತು. ಇದೀಗಬೆಕ್ಕು ಟೋಸ್ಟರ್​ನಿಂದ ಬ್ರೆಡ್​ ಹೊರಬಂದಿದಕ್ಕೆ ಗಾಬರಿಯಿಂದ ಹಾರಿದ ವಿಡಿಯೋ ವೈರಲ್​ ಆಗಿದೆ. ಬೆಕ್ಕಿನ ತುಂಟಾಟಕ್ಕೆ ಮುಗ್ಧತೆಗೆ ವೀಕ್ಷಕರು ಮನಸೋತಿದ್ದಾರೆ.

Published On - 5:05 pm, Sat, 4 December 21

Click on your DTH Provider to Add TV9 Kannada