Viral Video: ಕೆರಳಿದ ಆನೆಯಿಂದ ಸಫಾರಿ ಜೀಪ್ ಮೇಲೆ ದಾಳಿ; ಕಂಗಾಲಾಗಿ ಓಡಿದ ಪ್ರವಾಸಿಗರು
ಆನೆಯ ದಾಳಿಯಿಂದ ಕಂಗಾಲಾದ ಪ್ರವಾಸಿಗರು ವಾಹನದಿಂದ ಜಿಗಿದು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ.
ಸಫಾರಿಗೆ ಹೋಗಿ ಹುಲಿ, ಸಿಂಹ, ಆನೆಗಳನ್ನು ಎಂದಾದರೂ ಹತ್ತಿರದಿಂದ ನೋಡಿದ್ದೀರಾ? ಕಣ್ಣೆದುರು ಕ್ರೂರ ಪ್ರಾಣಿಗಳು ಕಾಡಿನಲ್ಲಿ ಓಡಾಡುತ್ತಿದ್ದಾಗಲೇ ಸಫಾರಿಗೆ ಹೋದ ಅರ್ಧಕ್ಕರ್ಧ ಜನರ ಹೃದಯಬಡಿತ ಹೆಚ್ಚಾಗಿರುತ್ತದೆ. ಇನ್ನೇನಾದರೂ ಆ ಪ್ರಾಣಿಗಳು ಕೈಗೆಟುಕುವಷ್ಟು ಹತ್ತಿರ ಬಂದು ನಮ್ಮ ಮೇಲೆ ದಾಳಿ ಮಾಡಿದರೆ ಆಗಿನ ಪರಿಸ್ಥಿತಿ ಹೇಗಿರಬಹುದು? ದಕ್ಷಿಣ ಆಫ್ರಿಕಾದ ಸೆಲಾಟಿ ಗೇಮ್ ರಿಸರ್ವ್ ಫಾರೆಸ್ಟ್ನಲ್ಲಿ ಕೆರಳಿದ ಆನೆಯೊಂದು ಸಫಾರಿ ವಾಹನದ ಮೇಲೆ ದಾಳಿ ಮಾಡಿ ಅದರಲ್ಲಿದ್ದ ಪ್ರಯಾಣಿಕರನ್ನು ಓಡಿ ಹೋಗುವಂತೆ ಮಾಡಿರುವ ವಿಡಿಯೋ ಬೆಚ್ಚಿ ಬೀಳಿಸುವಂತಿದೆ.
ಆನೆಯ ದಾಳಿಯಿಂದ ಕಂಗಾಲಾದ ಪ್ರವಾಸಿಗರು ವಾಹನದಿಂದ ಜಿಗಿದು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರನ್ನು ಹೊತ್ತ ಸಫಾರಿ ವಾಹನದಲ್ಲಿ ಗೈಡ್ ಕೂಡ ಇದ್ದರು. ಎಲ್ಲರೂ ಸಫಾರಿಯನ್ನು ಎಂಜಾಯ್ ಮಾಡುತ್ತಾ, ಕೇಕೆ ಹಾಕುತ್ತಾ ಹೋಗುತ್ತಿದ್ದಾಗ ಮರಗಳ ಹಿಂದಿನಿಂದ ಓಡಿಬಂದ ಆನೆಯೊಂದು ಸಫಾರಿ ವಾಹನವನ್ನು ತನ್ನ ಸೊಂಡಿಲಿನಿಂದ ತಳ್ಳಿ ದಾಳಿ ಮಾಡಿದೆ. ಇದರಿಂದ ಕಂಗಾಲಾದ ಪ್ರವಾಸಿಗರು ದಿಕ್ಕೆಟ್ಟು ಓಡಿದ್ದಾರೆ.
Too much intrusion will take your life in Wilderness. However, wild animals keeps on forgiving us since long.#responsible_tourism specially wildlife tourism should be educational rather recreational. हांथी के इतना घुसा नही जाता ? watch second video too pic.twitter.com/AOKGZ2BAjB
— WildLense® Eco Foundation ?? (@WildLense_India) November 30, 2021
ಆಕ್ರಮಣಕಾರಿ ಆನೆಯ ದಾಳಿಯಿಂದ ಹೆದರಿ ಟ್ರೈನಿ ಗೈಡ್‌ಗಳು ಕೂಡ ಓಡಿಹೋಗಿದ್ದಾರೆ. ಈ ವೇಳೆ ಪ್ರವಾಸಿಗರಲ್ಲೊಬ್ಬರು ಆ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಲಕ್ಷಾಂತರ ಜನರು ಫೇಸ್ಬುಕ್ ಮತ್ತು ಟ್ವಿಟ್ಟರ್ನಲ್ಲಿ ವೀಕ್ಷಿಸಿದ್ದಾರೆ.
ಸಾಮಾನ್ಯವಾಗಿ ಗಂಡಾನೆಗಳು ಸಂಭೋಗದ ಅವಧಿಯಲ್ಲಿ ಈ ರೀತಿ ಆಕ್ರಮಣಕಾರಿಯಾಗಿರುತ್ತವೆ. ಹೆಣ್ಣಾನೆಯೊಂದಿಗೆ ಲೈಂಗಿಕ ಆಕರ್ಷಣೆಯಲ್ಲಿರುವ ಗಂಡಾನೆಗಳು ಆ ಸಂದರ್ಭದಲ್ಲಿ ಮನುಷ್ಯರು ಮತ್ತು ಇತರ ಆನೆಗಳನ್ನು ಕಂಡರೆ ಅತ್ಯಂತ ಆಕ್ರಮಣಕಾರಿ ಮತ್ತು ಹಿಂಸಾತ್ಮಕವಾಗಿ ವರ್ತಿಸುತ್ತವೆ ಎನ್ನಲಾಗಿದೆ.
ಇದನ್ನೂ ಓದಿ: Viral Video: ಸರ್ಕಾರಿ ಕಚೇರಿಗೆ ನುಗ್ಗಿದ ಮೇಕೆ ಫೈಲ್ ಕಚ್ಚಿಕೊಂಡು ಪರಾರಿ; ಬೆನ್ನತ್ತಿ ಓಡಿದ ಸಿಬ್ಬಂದಿಯ ವಿಡಿಯೋ ವೈರಲ್
ಕೈ ತುಂಬ ಸಂಬಳ ಕೊಟ್ಟರೂ ಲಂಚ ತಗೊಂಡು ನಾಯಿ ಹಾಗೆ ಬಿದ್ದಿರುತ್ತಾರೆ; ಪೊಲೀಸರ ವಿರುದ್ಧ ಕೂಗಾಡಿದ ಆರಗ ಜ್ಞಾನೇಂದ್ರ