Viral Video: ಸರ್ಕಾರಿ ಕಚೇರಿಗೆ ನುಗ್ಗಿದ ಮೇಕೆ ಫೈಲ್ ಕಚ್ಚಿಕೊಂಡು ಪರಾರಿ; ಬೆನ್ನತ್ತಿ ಓಡಿದ ಸಿಬ್ಬಂದಿಯ ವಿಡಿಯೋ ವೈರಲ್

Shocking Video: ಮೇಕೆಯೊಂದು ಆಫೀಸಿನ ಕೋಣೆಗೆ ಹೋಗಿ ಕಡತವನ್ನು ಬಾಯಿಯಲ್ಲಿ ಹಿಡಿದುಕೊಂಡು ಹೊರಗೆ ಬಂದಿತು. ಮೇಕೆಯ ಬಾಯಿಯಲ್ಲಿ ಫೈಲ್ ಅನ್ನು ಗುರುತಿಸಿದ ಉದ್ಯೋಗಿ ತಕ್ಷಣವೇ ಅದರ ಹಿಂದೆ ಓಡಲು ಪ್ರಾರಂಭಿಸಿದರು.

Viral Video: ಸರ್ಕಾರಿ ಕಚೇರಿಗೆ ನುಗ್ಗಿದ ಮೇಕೆ ಫೈಲ್ ಕಚ್ಚಿಕೊಂಡು ಪರಾರಿ; ಬೆನ್ನತ್ತಿ ಓಡಿದ ಸಿಬ್ಬಂದಿಯ ವಿಡಿಯೋ ವೈರಲ್
ಫೈಲ್ ಎತ್ತಿಕೊಂಡು ಹೋದ ಮೇಕೆಯ ವಿಡಿಯೋ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 03, 2021 | 5:42 PM

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮೇಕೆಯೊಂದು ಚೌಬೆಪುರ ಡೆವಲಪ್‌ಮೆಂಟ್ ಬ್ಲಾಕ್ ಕಚೇರಿಯ ಕೊಠಡಿಯೊಂದಕ್ಕೆ ನುಗ್ಗಿ ಕಡತವನ್ನು ಬಾಯಿಯಲ್ಲಿ ಕಚ್ಚಿಕೊಂಡು ಪರಾರಿಯಾದ ವಿಚಿತ್ರವಾದ ಘಟನೆ ನಡೆದಿದೆ. ಮೇಕೆಯ ಬಾಯಿಯಲ್ಲಿ ಆಫೀಸ್ ಫೈಲ್ ಇರುವುದನ್ನು ಗಮನಿಸಿದ ಆ ಕಚೇರಿಯ ನೌಕರರು ಆ ಕಡತವನ್ನು ವಾಪಾಸ್ ಪಡೆಯಲು ಮೇಕೆಯ ಹಿಂದೆ ಓಡಿದ್ದಾರೆ. ಚೌಬೆಪುರ ಬ್ಲಾಕ್‌ನಲ್ಲಿರುವ ಪಂಚಾಯತ್ ಕಾರ್ಯದರ್ಶಿ ಕಚೇರಿಯಲ್ಲಿ ಬುಧವಾರ ಈ ಘಟನೆ ನಡೆದಿದೆ.

ಕಪ್ಪು ಮೇಕೆಯೊಂದು ಆಫೀಸಿನ ಕೋಣೆಗೆ ಹೋಗಿ ಕಡತವನ್ನು ಬಾಯಿಯಲ್ಲಿ ಹಿಡಿದುಕೊಂಡು ಹೊರಗೆ ಬಂದಿತು. ಮೇಕೆಯ ಬಾಯಿಯಲ್ಲಿ ಫೈಲ್ ಅನ್ನು ಗುರುತಿಸಿದ ಉದ್ಯೋಗಿ ತಕ್ಷಣವೇ ಅದರ ಹಿಂದೆ ಓಡಲು ಪ್ರಾರಂಭಿಸಿದರು. ಈ ತಮಾಷೆಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

22 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಪಂಚಾಯತ್ ಕಾರ್ಯದರ್ಶಿ ಕಚೇರಿಯ ಹೊರಗೆ ಕೆಲವು ನೌಕರರು ಬಿಸಿಲಲ್ಲಿ ನಿಂತಿರುವುದನ್ನು ಕಾಣಬಹುದು. ಅವರಲ್ಲಿ ಒಬ್ಬರು ಮೇಕೆಯನ್ನು ಹಿಂಬಾಲಿಸಿದ್ದಾರೆ.

ಈ ವೈರಲ್ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮೇಕೆ ಕೂಡ ಫೈಲ್​ನಲ್ಲಿರುವ ದಾಖಲೆಗಳನ್ನು ಓದಲು ಅದನ್ನು ತೆಗೆದುಕೊಂಡು ಹೋಗಿರಬಹುದು ಎಂದು ಒಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಒಂದು ಫೈಲ್ ಅನ್ನು ಮೇಕೆಗೆ ಸಿಗುವಷ್ಟು ಬೇಜವಾಬ್ದಾರಿಯಿಂದ ಇಟ್ಟಿದ್ದಾರೆ ಎಂದರೆ ಇಂಥವರಿಂದ ಜನಸಾಮಾನ್ಯರಿಗೆ ಏನು ಸಹಾಯ? ಎಂದು ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ.

ನೌಕರರು ಕಡತವನ್ನು ವಾಪಾಸ್ ಪಡೆಯುವಲ್ಲಿ ಯಶಸ್ವಿಯಾದರೂ ಅದರ ಹಾಳೆಗಳು ಕಿತ್ತುಹೋಗಿದ್ದವು. ಮೇಕೆ ಆ ಫೈಲ್​ನ ಒಂದು ಭಾಗವನ್ನು ಜಗಿಯುತ್ತಿತ್ತು. ಉದ್ಯೋಗಿಗಳು ಹರಿದ ಕಡತದ ಪುಟಗಳನ್ನು ಗಮ್ ಟೇಪ್​ನಿಂದ ಅಂಟಿಸಿದರು.

ಇದನ್ನೂ ಓದಿ: Viral Video: ಕುಕ್ಕರ್​ನಲ್ಲಿ ಕಾಫಿ ಮಾಡೋದನ್ನು ನೋಡಿದ್ದೀರಾ?; ಬೀದಿ ವ್ಯಾಪಾರಿಯ ವಿಡಿಯೋ ವೈರಲ್

Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್