Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

Wedding Story: ವಿಚಿತ್ರವೆಂದರೆ ಇನ್ನೊಬ್ಬ ಮಹಿಳೆ ಕೂಡ ಕೆಲವೇ ದಿನಗಳ ಹಿಂದಷ್ಟೆ ಮದುವೆಯಾಗಿದ್ದಳು. ಇಬ್ಬರೂ ನವವಿವಾಹಿತೆಯರು ಮದುವೆಗೆ ತಮಗೆ ಹಾಕಿದ್ದ ಚಿನ್ನಾಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದರು.

Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!
ಮದುವೆ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 03, 2021 | 8:59 PM

ತ್ರಿಶೂರ್: ಬೇರೆ ಯಾರನ್ನೋ ಮದುವೆಯಾಗಿ ಆತನೊಂದಿಗೆ ಬಾಳಲು ಇಷ್ಟವಿಲ್ಲದೆ ಮಹಿಳೆ ಮನೆ ಬಿಟ್ಟು ಓಡಿಹೋದ ಹಲವು ಉದಾಹರಣೆಗಳಿವೆ. ಮದುವೆ ಫಿಕ್ಸ್ ಆದಮೇಲೂ ಮಂಟಪದಿಂದಲೇ ಮದುಮಗಳು ಓಡಿಹೋದ ಘಟನೆಗಳೂ ನಡೆದಿವೆ. ಆದರೆ, ಮದುವೆಯಾದ ಮರುದಿನವೇ ಮಹಿಳೆಯೊಬ್ಬರು ತನ್ನ ಗರ್ಲ್​ಫ್ರೆಂಡ್ ಜೊತೆ ಪರಾರಿಯಾಗಿದ್ದನ್ನು ಎಲ್ಲಾದರೂ ಕೇಳಿದ್ದೀರಾ?

ಇಂತಹ ವಿಚಿತ್ರವಾದ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಕೇರಳದ ತ್ರಿಶೂರ್​ನ ಮಹಿಳೆಯೊಬ್ಬರು ತಾನು ಮದುವೆಯಾದ ಮರುದಿನವೇ ಗಂಡನ ಮನೆಯಿಂದ ನಾಪತ್ತೆಯಾಗಿದ್ದಾರೆ. ಹೆಂಡತಿ ಕಾಣದ ಕಾರಣ ಆಕೆಯ ಗಂಡನಿಗೆ ಹೃದಯಾಘಾತ ಉಂಟಾಗಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿಶೂರ್​ನ ಪಝುವಿಲ್​ನ 23 ವರ್ಷದ ಮಹಿಳೆ ಹೀಗೆ ತನ್ನ ಗೆಳತಿಯೊಂದಿಗೆ ಪರಾರಿಯಾದಾಕೆ.

ಹೆಂಡತಿ ಪರಾರಿಯಾಗಿರುವ ಬಗ್ಗೆ ಆಕೆಯ ಗಂಡ ಪೊಲೀಸರಿಗೆ ದೂರು ನೀಡಿದ್ದಾರೆ. ಆರು ದಿನ ತನಿಖೆ ಮಾಡಿದ ಪೊಲೀಸರಿಗೆ ಆಕೆ ತನ್ನ ಗೆಳತಿಯೊಂದಿಗೆ ಓಡಿ ಹೋದ ಘಟನೆ ಬೆಳಕಿಗೆ ಬಂದಿದೆ. ಆ ಮಹಿಳೆಯನ್ನು ಹುಡುಕಿ ಗಂಡನ ಮನೆಗೆ ಸೇರಿಸಲಾಗಿದ್ದು, ಆಕೆ ತನ್ನ ಮದುವೆಗೆ ಮೊದಲೇ ತನ್ನ ಗೆಳತಿಯೊಂದಿಗೆ ಓಡಿಹೋಗಲು ಬಯಸಿದ್ದಳು. ಆದರೆ, ಮನೆಯಲ್ಲಿ ತನ್ನ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಓಡಿಹೋಗಲು ನಿರ್ಧರಿಸಿದ್ದ ಆಕೆ ಅದಕ್ಕಾಗಿಯೇ ಮದುವೆಯಾಗಿದ್ದಳು ಎನ್ನಲಾಗಿದೆ.

ಆಕೆಯ ಪತಿ ಚವಕ್ಕಾಡ್ ನ ಮೂಲದವರಾಗಿದ್ದು, ಪೊಲೀಸ್ ಠಾಣೆಯಲ್ಲಿ ಅ. 25ರಂದು ತನ್ನ ಹೆಂಡತಿ ನಾಪತ್ತೆಯಾಗಿರುವ ದೂರು ದಾಖಲಿಸಿದ್ದರು. ಮದುವೆಯಾದ ಮಾರನೇ ದಿನ ಬ್ಯಾಂಕ್​ಗೆ ಹೋಗಿದ್ದ ಆಕೆ ಗಂಡನ ಮೊಬೈಲ್ ತೆಗೆದುಕೊಂಡು ನನ್ನ ಗೆಳತಿಯನ್ನು ಭೇಟಿ ಮಾಡಿ ವಾಪಾಸ್ ಬರುತ್ತೇನೆ ಎಂದು ಹೇಳಿ ಹೋಗಿದ್ದಳು. ಆದರೆ, ಬೈಕ್​ನಲ್ಲಿ ಹೋದ ಆಕೆ ಮತ್ತೆ ವಾಪಾಸ್ ಬರಲೇ ಇಲ್ಲ ಎಂದು ಪತಿ ದೂರಿನಲ್ಲಿ ತಿಳಿಸಿದ್ದರು.

ತ್ರಿಶೂರ್​ನಿಂದ ತನ್ನ ಗೆಳತಿಯೊಂದಿಗೆ ಪರಾರಿಯಾಗುವುದಕ್ಕೆ ಆ ಮಹಿಳೆ ಚೆನ್ನೈಗೆ ರೈಲು ಟಿಕೆಟ್ ಬುಕ್ ಮಾಡಿದ್ದರು. ಆದರೆ, ಸಿಕ್ಕಿ ಬೀಳುತ್ತೇವೆಂಬ ಭಯದಿಂದ ಅವರಿಬ್ಬರೂ ಬಸ್ ಮೂಲಕ ಕೊಟ್ಟಾಯಂಗೆ ಹೋಗಿ ಅಲ್ಲಿಂದ ಚೆನ್ನೈಗೆ ರೈಲಿನಲ್ಲಿ ಹೋಗಿದ್ದರು. ಅಲ್ಲಿಂದ ಹೋಟೆಲ್​ನಲ್ಲಿ ರೂಂ ಬುಕ್ ಮಾಡಿಕೊಂಡು ಇದ್ದರು. ಅಂದಹಾಗೆ, ವಿಚಿತ್ರವೆಂದರೆ ಇನ್ನೊಬ್ಬ ಮಹಿಳೆ ಕೂಡ ಕೆಲವೇ ದಿನಗಳ ಹಿಂದಷ್ಟೆ ಮದುವೆಯಾಗಿದ್ದಳು. ಇಬ್ಬರೂ ನವವಿವಾಹಿತೆಯರು ಮದುವೆಗೆ ತಮಗೆ ಹಾಕಿದ್ದ ಚಿನ್ನಾಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದರು. ಅವರನ್ನು ಮಧುರೈನಲ್ಲಿ ಪತ್ತೆಹಚ್ಚಲಾಗಿದೆ.

ಇದನ್ನೂ ಓದಿ: Shocking Video: ಪಟಾಕಿಗೆ ಬೆಂಕಿ ಹೊತ್ತಿಸಿ ಪೆಟ್ರೋಲ್ ಬಂಕ್​ ಮೇಲೆ ಎಸೆದ ಯುವಕರು; ಆಮೇಲೇನಾಯ್ತು?

Viral Photo: ಡಿಐಜಿಯಾಗಿರುವ ಅಪ್ಪನಿಗೆ ಸಲ್ಯೂಟ್ ಮಾಡಿದ ಪೊಲೀಸ್ ಅಧಿಕಾರಿ ಮಗಳು; ಹೆಮ್ಮೆಯ ಕ್ಷಣದ ಫೋಟೋ ವೈರಲ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ