Shocking Video: ಪಟಾಕಿಗೆ ಬೆಂಕಿ ಹೊತ್ತಿಸಿ ಪೆಟ್ರೋಲ್ ಬಂಕ್​ ಮೇಲೆ ಎಸೆದ ಯುವಕರು; ಆಮೇಲೇನಾಯ್ತು?

Viral Video: ಸಿಸಿಟಿವಿಯಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪೆಟ್ರೋಲ್​ ಬಂಕ್​ಗೆ ಬೆಂಕಿ ಹಚ್ಚಲು ಪಟಾಕಿಯನ್ನು ಹೊತ್ತಿಸಿ ಯುವಕ ಪೆಟ್ರೋಲ್ ಬಂಕ್ ಮೇಲೆ ಎಸೆದಿದ್ದಾನೆ. ಪೆಟ್ರೋಲ್ ಬಂಕ್​ನ ಸಿಬ್ಬಂದಿ ಎಚ್ಚೆತ್ತುಕೊಳ್ಳದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು.

Shocking Video: ಪಟಾಕಿಗೆ ಬೆಂಕಿ ಹೊತ್ತಿಸಿ ಪೆಟ್ರೋಲ್ ಬಂಕ್​ ಮೇಲೆ ಎಸೆದ ಯುವಕರು; ಆಮೇಲೇನಾಯ್ತು?
ಪೆಟ್ರೋಲ್ ಬಂಕ್ ಮೇಲೆ ಪಟಾಕಿ ಎಸೆದ ಯುವಕರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 03, 2021 | 6:09 PM

ಸೂರತ್: ಇಬ್ಬರು ಯುವಕರು ಬೈಕ್​ನಲ್ಲಿ ಪೆಟ್ರೋಲ್ ಬಂಕ್​ಗೆ ತೆರಳಿದ್ದವರು ಪೆಟ್ರೋಲ್ ಬಂಕ್​ ಮೇಲೆ ಪಟಾಕಿ ಹೊತ್ತಿಸಿ ಬಿಸಾಡಿರುವ ಶಾಕಿಂಗ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೈಕ್​ನಲ್ಲಿ ಬಂದ ಇಬ್ಬರು ಯುವಕರ ಪೈಕಿ ಓರ್ವ ಪಟಾಕಿಯನ್ನು ಹಚ್ಚಿ ಪೆಟ್ರೋಲ್​ ಬಂಕ್​ಗೆ ಬಿಸಾಡಿದ್ದಾನೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪೆಟ್ರೋಲ್​ ಬಂಕ್​ಗೆ ಬೆಂಕಿ ಹಚ್ಚಲು ಪಟಾಕಿಯನ್ನು ಹೊತ್ತಿಸಿ ಆ ಯುವಕ ಪೆಟ್ರೋಲ್ ಬಂಕ್ ಮೇಲೆ ಎಸೆದಿದ್ದಾನೆ. ಪೆಟ್ರೋಲ್ ಬಂಕ್​ನ ಸಿಬ್ಬಂದಿ ಎಚ್ಚೆತ್ತುಕೊಳ್ಳದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಗುಜರಾತ್ ರಾಜ್ಯದ ಸೂರತ್ ಪಿಪ್ಲಾಡ್ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ಎಲ್ಲಾ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ವಿಡಿಯೋದಲ್ಲಿ ಇರುವಂತೆ, ಸ್ಕೂಟಿಯಲ್ಲಿ ಇಬ್ಬರು ಯುವಕರು ಪೆಟ್ರೋಲ್ ತುಂಬಿಸಲು ಇಬ್ಬರನ್ನು ಕರೆದುಕೊಂಡು ಹೋಗಿದ್ದಾರೆ. ಮುಂದೆ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಪೆಟ್ರೋಲ್ ತುಂಬಿಸಿಕೊಂಡು ವಾಪಾಸ್ ಹೋಗಿದ್ದಾನೆ. ಹಿಂದೆ ಕುಳಿತ ವ್ಯಕ್ತಿ ಬೈಕ್ ಸ್ಟಾರ್ಟ್ ಆದ ನಂತರ ಪಟಾಕಿ ಟೇಪ್‌ಗಳಿಗೆ ಬೆಂಕಿ ಹಚ್ಚಿ ಪೆಟ್ರೋಲ್ ಪಂಪ್‌ಗೆ ಎಸೆದಿದ್ದಾನೆ. ಕೂಡಲೇ ಎಚ್ಚೆತ್ತ ಸಿಬ್ಬಂದಿಯೊಬ್ಬರು ಕ್ರ್ಯಾಕರ್ ಪೈಪ್ ಬಳಿಯಿಂದ ಆ ಪಟಾಕಿಯನ್ನು ಒದ್ದು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ನಂತರ ಆ ಪಟಾಕಿ ಪೆಟ್ರೋಲ್​ ಪಂಪ್​ನಿಂದ ಸ್ವಲ್ಪ ದೂರದಲ್ಲಿ ಸ್ಫೋಟಗೊಂಡಿದೆ. ಪೈಪ್ ಬಳಿ ಪಟಾಕಿ ಸಿಡಿಸಿದ್ದರೆ ಭಾರೀ ಅವಘಡ ಸಂಭವಿಸುತ್ತಿತ್ತು.

ಈ ಘಟನೆಯ ನಂತರ ಪೆಟ್ರೋಲ್ ಪಂಪ್ ಮ್ಯಾನೇಜರ್ ಮೋತಿಲಾಲ್ ಚೌಧರಿ ಯುವಕನ ವಿರುದ್ಧ ಉಮ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) 285, 286, 336, 114 ಸೆಕ್ಷನ್‌ಗಳ ಅಡಿಯಲ್ಲಿ ಸಾರ್ವಜನಿಕ ಜೀವನಕ್ಕೆ ಹಾನಿ ಮಾಡಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಒಬ್ಬನನ್ನು ಮೊಹಮ್ಮದ್ ಇರ್ಫಾನ್ ಖುರೇಷಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

Shocking News: ತಾನೇ ಮುಂದೆ ನಿಂತು ಹೆಂಡತಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಗಂಡ!

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್