AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ತಾನೇ ಮುಂದೆ ನಿಂತು ಹೆಂಡತಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಗಂಡ!

Wedding Story: ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಹಮ್ ದಿಲ್ ದೇ ಚುಕೇ ಸನಮ್ ಸಿನಿಮಾದ ರೀತಿಯದ್ದೇ ಕತೆಯುಳ್ಳ ಘಟನೆಯೊಂದು ಗುರುಗ್ರಾಮದಲ್ಲಿ ನಡೆದಿದೆ. ಗಂಡನೇ ಮುಂದೆ ನಿಂತು ಹೆಂಡತಿಯನ್ನು ಆಕೆಯ ಪ್ರೇಮಿಯ ಜೊತೆ ಮದುವೆ ಮಾಡಿಸಿದ ಕತೆಯಿದು!

Shocking News: ತಾನೇ ಮುಂದೆ ನಿಂತು ಹೆಂಡತಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಗಂಡ!
ಮದುವೆ ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on:Nov 01, 2021 | 9:24 PM

Share

ಕಾನ್ಪುರ: 1999ರ ಬ್ಲಾಕ್​ ಬಸ್ಟರ್ ಸಿನಿಮಾ ‘ಹಮ್ ದಿಲ್ ದೇ ಚುಕೇ ಸನಮ್’ ನಿಮಗೆ ನೆನಪಿರಬಹುದು. ಆ ಸಿನಿಮಾದ ಕತೆ ನಿಜ ಜೀವನದಲ್ಲಿ ನಡೆದರೆ ಹೇಗಿರುತ್ತದೆ? ಈ ರೀತಿಯೂ ನಡೆಯುತ್ತದಾ? ಎಂದು ನಿಮಗೆ ಅಚ್ಚರಿಯಾಗಿದ್ದರೆ ಈ ಕತೆ ಓದಿ. ಐದು ತಿಂಗಳ ಹಿಂದೆ ಮದುವೆಯಾದ ಕಾನ್ಪುರದಲ್ಲಿರುವ ಒಬ್ಬ ವ್ಯಕ್ತಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾರೆ.

ಗುರುಗ್ರಾಮದಲ್ಲಿ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುವ ಪಂಕಜ್ ಶರ್ಮಾ ಈ ವರ್ಷ ಮೇ ತಿಂಗಳಲ್ಲಿ ಕೋಮಲ್ ಎಂಬಾಕೆಯನ್ನು ಮದುವೆಯಾಗಿದ್ದರು. ಆದರೆ, ಮದುವೆಯಾದ ನಂತರ ಆಕೆ ಈಗಾಗಲೇ ಬೇರೆಯವನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಷಯ ಆತನಿಗೆ ಗೊತ್ತಾಗಿತ್ತು. ಮದುವೆಯಾದ ದಿನದಿಂದಲೂ ಆಕೆ ಗಂಡ ಜೊತೆಗಾಗಲಿ, ಗಂಡನ ಮನೆಯವರೊಂದಿಗಾಗಲಿ ಮಾತನಾಡಿರಲಿಲ್ಲ. ಇದರಿಂದ ಆತನಿಗೆ ಬಹಳ ಗೊಂದಲವಾಗಿತ್ತು.

ತನಗಿಷ್ಟವಿಲ್ಲದ ಹುಡುಗನನ್ನು ಮದುವೆಯಾಗಿದ್ದ ಕೋಮಲ್ ಗಂಡನ ಜೊತೆ ಸಂಸಾರ ನಡೆಸುತ್ತಿರಲಿಲ್ಲ. ಮದುವೆಯಾದ ಮೇಲೂ ತನ್ನ ಪ್ರೇಮಿ ಪಿಂಟು ಜೊತೆಗೇ ಜೀವನ ನಡೆಸಲು ನಿರ್ಧರಿಸಿದ್ದಳು. ಇದನ್ನು ತಿಳಿದ ಆಕೆಯ ಗಂಡ ಪಂಕಜ್ ಶರ್ಮ ಈ ವಿಷಯವನ್ನು ಕೋಮಲ್​ಳ ತಂದೆ-ತಾಯಿಗೆ ಹೇಳಿದರು. ಅವರು ತಮ್ಮ ಮಗಳಿಗೆ ಬುದ್ಧಿ ಹೇಳಲು ಸಾಕಷ್ಟು ಪ್ರಯತ್ನಿಸಿದರು. ಆದರೆ, ಆಕೆ ತನ್ನ ಪ್ರೇಮಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹಠ ಹಿಡಿದಳು.

ಬಳಿಕ ಕೌಟುಂಬಿಕ ದೌರ್ಜನ್ಯ ವಿರೋಧಿ ಘಟಕದಲ್ಲಿ ಪಂಕಜ್, ಕೋಮಲ್ ಹಾಗೂ ಪಿಂಟುವನ್ನು ಕರೆಸಿ ಮಾತುಕತೆ ನಡೆಸಲಾಯಿತು. ಅಲ್ಲೂ ತಾನು ಪಂಕಜ್ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಕೋಮಲ್ ಸ್ಪಷ್ಟವಾಗಿ ಹೇಳಿದ್ದರಿಂದ ಪಂಕಜ್ ತಾನೇ ಮುಂದೆ ನಿಂತು ಕೋಮಲ್ ಹಾಗೂ ಪಿಂಟುವಿನ ಮದುವೆ ಮಾಡಿಸುವುದಾಗಿ ಹೇಳಿದರು. 5 ತಿಂಗಳ ಹಿಂದೆ ತಾನು ಮದುವೆಯಾದ ಕೋಮಲ್​ಳನ್ನು ಈ ಮಾತುಕತೆ ನಡೆದ ಮರುದಿನವೇ ಆಕೆಯ ಪ್ರೇಮಿಯ ಜೊತೆ ಮದುವೆ ಮಾಡಿಸಿಕೊಡುವ ಮೂಲಕ ಪಂಕಜ್ ಎರಡೂ ಕುಟುಂಬಸ್ಥರನ್ನು ಅಚ್ಚರಿಗೊಳಪಡಿಸಿದ್ದಾರೆ.

ಇದನ್ನೂ ಓದಿ: Shocking News: ಮಡಿಕೇರಿಯ ಮಹಿಳೆಯ ಹೊಟ್ಟೆಯಲ್ಲಿತ್ತು 1.5 ಕೆಜಿ ಕೂದಲು!

Shocking News: ಬಡ ರಿಕ್ಷಾ ಚಾಲಕನಿಗೆ 3.47 ಕೋಟಿ ರೂ. ಆದಾಯ ತೆರಿಗೆ ವಿಧಿಸಿದ ಐಟಿ ಅಧಿಕಾರಿಗಳು!

Published On - 9:23 pm, Mon, 1 November 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ