Viral Video: ಫ್ರೂಟಿ ಜ್ಯೂಸ್ ನೋಡಿ ಆಸೆ ಪಟ್ಟು ಕನ್ನಡಕ ಹಿಂದಿರುಗಿಸಿದ ಕೋತಿಯ ವಿಡಿಯೊ ಫುಲ್ ವೈರಲ್
ಕನ್ನಡಕ ಹೊತ್ತು ಪಂಜರದ ಮೇಲೆ ಹತ್ತಿ ಕುಳಿತಿದ್ದ ಕೋತಿಯು ಫ್ರೂಟಿ ಜ್ಯೂಸ್ ಕಂಡಿದ್ದೇ ಕನ್ನಡಕವನ್ನು ಹಿಂತಿರುಗಿಸಿದೆ. ತಮಾಷೆಯ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.

ಕೋತಿಗಳ ತಮಾಷೆಯ ದೃಶ್ಯಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಅವುಗಳ ಚುರುಕುತನ, ಬುದ್ಧಿವಂತಿಕೆ, ಚೇಷ್ಟೆ ಎಲ್ಲವೂ ಹೆಚ್ಚು ಇಷ್ವಾಗುತ್ತವೆ. ಇಲ್ಲೊಂದು ಕೋತಿಯು, ವ್ಯಕ್ತಿಯ ಕನ್ನಡಕವನ್ನು ಕಸಿದುಕೊಂಡಿದೆ. ಕನ್ನಡ ಹೊತ್ತು ಪಂಜರದ ಮೇಲೆ ಹತ್ತಿ ಕುಳಿತು ನೋಡುತ್ತಿದೆ. ವ್ಯಕ್ತಿ ಫ್ರೂಟಿ ಜ್ಯೂಸ್ ಕೊಟ್ಟ ತಕ್ಷಣ ಕನ್ನಡಕವನ್ನು ಹಿಂತಿರುಗಿಸಲು ಒಪ್ಪಿಕೊಂಡಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೊ ತಮಾಷೆಯಾಗಿದೆ ನೀವೇ ನೋಡಿ.
ವ್ಯಕ್ತಿಯು, ಕೋತಿಯ ಬಳಿಯಿದ್ದ ಕನ್ನಡಕವನ್ನು ಪಡೆಯಲು ಎಷ್ಟು ಪ್ರಯತ್ನಿಸಿದರೂ ಪ್ರಯತ್ನ ವ್ಯರ್ಧವಾಗಿದೆ. ಫ್ರೂಟಿ ಜ್ಯೂಸ್ ಕಂಡಿದ್ದೇ ತಡ ಕನ್ನಡಕವನ್ನು ಹಿಂತಿರುಗಿಸಲು ಒಪ್ಪಿಕೊಂಡಿರುವ ಕೋತಿಯ ಚುರುಕುತನ ನೋಡಿ ಕೆಲವರು ಆಶ್ಚರ್ಯಗೊಂಡಿದ್ದಾರೆ. ಬುದ್ಧಿವಂತ ಕೋತಿ ಎಂದು ಪ್ರತಿಕ್ರಿಯಿಸುವ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
View this post on Instagram
ಇಂತಹ ತಮಾಷೆಯ ದೃಶ್ಯಗಳು ಪಾರ್ಕ್ಗಳಲ್ಲಿ ಆಗಾಗ ನಡೆಯುತ್ತಿರುತ್ತವೆ ಎಂದು ಓರ್ವರು ಹೇಳಿದ್ದಾರೆ. ಕೋತಿಗಳು ಹೆಚ್ಚು ಚುರುಕಾಗಿದ್ದಾರೆ ಎಂದು ಮತ್ತೋರ್ವರು ಪ್ರತಿಕ್ರಿಯಿಸಿದ್ದಾರೆ. ಕೆಲವರು ನಗುವಿನ ಎಮೋಜಿಗಳನ್ನು ಕಳುಹಿಸುವ ಮೂಲಕ ಅನಿಸಿಕೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಮನುಷ್ಯರನ್ನು ಅನುಕರಿಸುತ್ತಿರುವ ಕೋತಿಗಳ ವಿಡಿಯೊ ವೈರಲ್ ಆಗುತ್ತಿವೆ. ಸುಲಭದಲ್ಲಿ ಮನುಷ್ಯರಂತೆಯೇ ವರ್ತಿಸುತ್ತಾ ಪಾತ್ರೆ ತೊಳೆಯುತ್ತಿದ್ದ ಕೋತಿಯ ವಿಡಿಯೊ ಈ ಹಿಂದೆ ಫುಲ್ ವೈರಲ್ ಆಗಿತ್ತು.
ಇದನ್ನೂ ಓದಿ:
Viral Video: ಅಬ್ಬಬ್ಬಾ! ದೈತ್ಯ ಹೆಬ್ಬಾವಿನ ಎದುರು ಮಲಗಿರುವ ವ್ಯಕ್ತಿ ನೋಡಿ; ವಿಡಿಯೊ ವೈರಲ್
Viral Video: ನಾಯಿಯ ಕಿವಿ ಹಿಂಡುತ್ತಿದ್ದ ವ್ಯಕ್ತಿಯನ್ನು ನೋಡಿ ಕೋಪಗೊಂಡ ಹಸುವಿನ ರಿಯಾಕ್ಷನ್ ಹೇಗಿತ್ತು ನೋಡಿ
Published On - 9:47 am, Tue, 2 November 21




