Deepavali 2021: ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಮರಳು ಕಲೆಯಲ್ಲಿ ರಂಗೋಲಿ ಚಿತ್ರಿಸಿದ ವಿದ್ಯಾರ್ಥಿಗಳು; ಫೋಟೊ ನೋಡಿ
Diwali 2021: ದೀಪಾವಳಿಯು ಬೆಳಕಿನ ಹಬ್ಬವಾಗಿದೆ. ದೀಪಗಳನ್ನು ಮನೆಯಲ್ಲಿ ಬೆಳಗುತ್ತಾ ಶಾಂತಿ, ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಹೊರತು ಮಾಲಿನ್ಯವನ್ನುಂಟು ಮಾಡುವ ಪಟಾಕಿಗಳಿಂದಲ್ಲ ಎಂಬುದು ನೆನಪಿರಲಿ.
ಪರಿಸರ ಸ್ನೇಹಿ ದೀಪಾವಳಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸುಂದರವಾದ ಮರಳು ಕಲೆಯನ್ನು ರಚಿಸಿದ್ದಾರೆ. ಆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದೀಪಾವಳಿಯಲ್ಲಿ ವಿಶೇಷವಾಗಿ ಚಿತ್ರಿಸುವ ರಂಗೋಲಿಗಳನ್ನು ಮರಳು ಕಲೆಯಲ್ಲಿ ಪ್ರದರ್ಶಿಸಿದ್ದಾರೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳನ್ನು ಹೆಚ್ಚು ಬಳಸಬೇಡಿ ಎಂಬ ಸಂದೇಶವನ್ನು ಸಾರುವ ಮೂಲಕ ವಿದ್ಯಾರ್ಥಿಗಳು ಮರಳು ಕಲೆಯನ್ನು ರಚಿಸಿದ್ದಾರೆ.
ದೀಪಾವಳಿಯು ಬೆಳಕಿನ ಹಬ್ಬವಾಗಿದೆ. ದೀಪಗಳನ್ನು ಮನೆಯಲ್ಲಿ ಬೆಳಗುತ್ತಾ ಶಾಂತಿ, ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಹೊರತು ಮಾಲಿನ್ಯವನ್ನುಂಟು ಮಾಡುವ ಪಟಾಕಿಗಳಿಂದಲ್ಲ. ಮರಳು ಕಲೆಯ ಮೂಲಕ ಈ ಸಂದೇಶವನ್ನು ಸಾರಲು ಪ್ರಯತ್ನಿಸಿದ್ದೇವೆ ಎಂದು ವಿದ್ಯಾರ್ಥಿ ವರ್ಷಾ ಎಎನ್ಐ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾಳೆ.
Prayagraj | With an aim to create awareness for eco-friendly Diwali, people make ‘diyas, rangoli’ using sand. “It’s the festival of lights, should be celebrated with peace & harmony, not crackers. Hence with sand art we’re trying to put across the message,” said Varsha (31.10) pic.twitter.com/Fh0bMNaLHt
— ANI UP (@ANINewsUP) October 31, 2021
ನಾವು ದೀಪಾವಳಿಯನ್ನು ಆಧರಿಸಿ ಮರಳು ಕಲೆಯನ್ನು ರಚಿಸಿದ್ದೇವೆ. ಪುರಾತನ ಸಂಪ್ರದಾಯವನ್ನು ಬಿಂಬಿಸುವ ರಂಗೋಲಿಯನ್ನು ನಾವು ರಚಿಸಿದ್ದೇವೆ. ಸ್ಟಿಕ್ಕರ್ಸ್ಗಳು, ಫ್ಯಾಕ್ಟರಿಯಲ್ಲಿ ತಯಾರಾದ ಅಲಂಕಾರಿಕಾ ಪರಿಕರಗಳನ್ನು ಖರೀದಿಸುವುದನ್ನು ತಪ್ಪಿಸಲು ಈ ಪ್ರಯತ್ನದ ಮೂಲಕ ಜನರಿಗೆ ತಿಳಿಸುತ್ತಿದ್ದೇವೆ. ಇವುಗಳ ಬದಲಾಗಿ ಮನೆಯಲ್ಲೇ ರಂಗೋಲಿ ಬಿಡಿಸಿ. ಪ್ಲಾಸ್ಟಿಕ್ನಂತಹ ವಸ್ತುಗಳನ್ನು ಬಳಸಬೇಡಿ ಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳಿಂದ ದೂರವಿರಿ ಎಂಬ ಸಂದೇಶವನ್ನು ಇನ್ನೊಬ್ಬ ವಿದ್ಯಾರ್ಥಿ ಅಜಯ್ ಎಎನ್ಐ ಜೊತೆ ಮಾತನಾಡಿದ್ದಾರೆ.
Prayagraj | With an aim to create awareness for eco-friendly Diwali, people make ‘diyas, rangoli’ using sand. “It’s the festival of lights, should be celebrated with peace & harmony, not crackers. Hence with sand art we’re trying to put across the message,” said Varsha (31.10) pic.twitter.com/Fh0bMNaLHt
— ANI UP (@ANINewsUP) October 31, 2021
Prayagraj | With an aim to create awareness for eco-friendly Diwali, people make ‘diyas, rangoli’ using sand. “It’s the festival of lights, should be celebrated with peace & harmony, not crackers. Hence with sand art we’re trying to put across the message,” said Varsha (31.10) pic.twitter.com/Fh0bMNaLHt
— ANI UP (@ANINewsUP) October 31, 2021
ಇದನ್ನೂ ಓದಿ:
Diwali Festival: ದೀಪಾವಳಿ ಹಬ್ಬಕ್ಕೆ ಜ್ಯುವೆಲ್ಲರಿಗಳಿಂದ ಆಕರ್ಷಕ ಆಫರ್ಗಳು