Viral Video: ಅಮೆಜಾನ್ ವ್ಯಾನ್​ನಿಂದ ರಹಸ್ಯವಾಗಿ ಹೊರಬಂದ ಯುವತಿಯ ವಿಡಿಯೊ ವೈರಲ್; ಚಾಲಕನನ್ನು ಕೆಲಸದಿಂದ ವಜಾಗೊಳಿಸಿದ ಕಂಪನಿ

ವಿಡಿಯೊದಲ್ಲಿ ಗಮನಿಸುವಂತೆ ರಸ್ತೆ ಮಧ್ಯದಲ್ಲಿ ಅಮೆಜಾನ್ ಡೆಲಿವರಿ ವ್ಯಾನ್ ನಿಂತಿದೆ. ಡೆಲಿವರಿ ಬಾಯ್ ವ್ಯಾನ್​ನ ಹಿಂಬದಿಯ ಬಾಗಿಲನ್ನು ತೆಗೆದುತ್ತಿದ್ದಂತೆಯೇ ಯುವತಿಯೊಬ್ಬಳು ಕೆಳಗಿಳಿದು ಮೊಬೈಲ್ ನೋಡುತ್ತಾ ಮುಂದೇ ಸಾಗಿದ್ದಾಳೆ.

Viral Video: ಅಮೆಜಾನ್ ವ್ಯಾನ್​ನಿಂದ ರಹಸ್ಯವಾಗಿ ಹೊರಬಂದ ಯುವತಿಯ ವಿಡಿಯೊ ವೈರಲ್; ಚಾಲಕನನ್ನು ಕೆಲಸದಿಂದ ವಜಾಗೊಳಿಸಿದ ಕಂಪನಿ
ಅಮೆಜಾನ್ ವ್ಯಾನ್​ನಿಂದ ರಹಸ್ಯವಾಗಿ ಹೊರಬಂದ ಯುವತಿ
Follow us
TV9 Web
| Updated By: shruti hegde

Updated on:Nov 02, 2021 | 1:43 PM

ಅಮೆಜಾನ್ ಡೆಲಿವರಿ ವ್ಯಾನ್​ನಿಂದ ಹೊರಗಿಳಿದ ಯುವತಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಮೆಜಾನ್ ಡೆಲಿವರಿ ಬಾಯ್ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಮೂಲತಃ ಟಿಕ್​ ಟಾಕ್​ನಲ್ಲಿ ಪೋಸ್ಟ್ ಮಾಡಲಾದ 11 ಸೆಕೆಂಡುಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 11.3 ಮಿಲಿಯನ್ ವೀಕ್ಷಣಿಗಳನ್ನು ಗಳಿಸಿಕೊಂಡಿದ್ದು, ವ್ಯಾನ್​ನಿಂದ ಯುವತಿ ಇಳಿಯುತ್ತಿರುವುದು ರಹಸ್ಯವೆನಿಸುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದ್ದು ಅಮೆಜಾನ್ ಡೆಲಿವರಿ ಬಾಯ್ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ವಿಡಿಯೊದಲ್ಲಿ ಗಮನಿಸುವಂತೆ ರಸ್ತೆ ಮಧ್ಯದಲ್ಲಿ ಅಮೆಜಾನ್ ಡೆಲಿವರಿ ವ್ಯಾನ್ ನಿಂತಿದೆ. ಡೆಲಿವರಿ ಬಾಯ್ ವ್ಯಾನ್​ನ ಹಿಂಬದಿಯ ಬಾಗಿಲನ್ನು ತೆಗೆದುತ್ತಿದ್ದಂತೆಯೇ ಯುವತಿಯೊಬ್ಬಳು ಕೆಳಗಿಳಿದು ಮೊಬೈಲ್ ನೋಡುತ್ತಾ ಮುಂದೇ ಸಾಗಿದ್ದಾಳೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ವಿಡಿಯೊ ಫುಲ್ ವೈರಲ್ ಆಗಿದೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಅಮೆಜಾನ್, ಚಾಲಕನು ಇನ್ನು ಮುಂದೆ ಕಂಪನಿಯೊಂದಿಗೆ ಸಂಬಂಧ ಹೊಂದಿರುವುದಿಲ್ಲ. ಅಮೆಜಾನ್​ ವಸ್ತು ವಿತರಣಾ ವ್ಯಾನ್​ಗಳಲ್ಲಿ ಇತರನ್ನು ಕರೆದೊಯ್ಯುವಂತಿಲ್ಲ ಎಂದು ಕಂಪನಿ ಉತ್ತರಿಸಿದೆ. ಏತನ್ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು, ನಿಗೂಢ ಮಹಿಳೆ ಮತ್ತು ಅವಳ್ಯಾಕೆ ವ್ಯಾನ್​ನಲ್ಲಿದ್ದಳು? ಎಂದು ಪ್ರಶ್ನಿಸಿದ್ದಾರೆ. ಚಾಲಕನು ತನ್ನ ಸ್ನೇಹಿತೆಗೆ ಡ್ರಾಪ್ ನೀಡುತ್ತಿದ್ದಾನೆ ಎಂದು ಕೆಲವರು ಹೇಳಿದ್ದಾರೆ. ಕೆಲವರು ಚಾಲಕನ ಬಗ್ಗೆ ತಮಾಷೆ ಮಾಡಿ ನಕ್ಕಿದ್ದಾರೆ.

ಅಮೆಜಾನ್ ಡೆಲಿವರಿ ವ್ಯಾನ್ ಚಾಲಕರು ಸುದ್ದಿಯಲ್ಲಿರುವುದು ಇದೇ ಮೊದಲಲ್ಲ. ಈ ಹಿಂದೆ ಮಹಿಳೆ ಸ್ನಾನ ಮಾಡುವುದನ್ನು ನೋಡಲು ಮಹಿಳೆಯಂತೆ ಉಡುಗೆ ತೊಟ್ಟು ಶೂ ಧರಿಸಿ, ಶೂಗಳಿಗೆ ಪೆನ್ ಕ್ಯಾಮರಾವನ್ನು ಜೋಡಿಸಿದ ಆರೋಪದ ಮೇಲೆ ಅಮೆಜಾನ್ ಚಾಲಕನನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಂಧಿಸಲಾಯಿತು. ಮತ್ತೊಂದು ವಿಡಿಯೊದಲ್ಲಿ ಅಮೆಜಾನ್ ಪಾರ್ಸಲ್​ಗಳನ್ನು ವ್ಯಕ್ತಿ ಬಿಸಾಡಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಫುಲ್ ವೈರಲ್ ಆಗಿತ್ತು.

ಇದನ್ನೂ ಓದಿ:

Shocking News: ತಾನೇ ಮುಂದೆ ನಿಂತು ಹೆಂಡತಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಗಂಡ!

Shocking News: ಮಹಿಳೆಯ ಕಿವಿಯೊಳಗೆ ರಾತ್ರಿಯಿಡೀ ವಾಸವಿದ್ದ ಜೇಡರ ಹುಳು; ಅಪರೂಪದ ಕೇಸ್​ ಕಂಡು ವೈದ್ಯರಿಗೇ ಶಾಕ್!

Published On - 1:43 pm, Tue, 2 November 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ