Viral Video: ನಾಯಿಯ ಕಿವಿ ಹಿಂಡುತ್ತಿದ್ದ ವ್ಯಕ್ತಿಯನ್ನು ನೋಡಿ ಕೋಪಗೊಂಡ ಹಸುವಿನ ರಿಯಾಕ್ಷನ್ ಹೇಗಿತ್ತು ನೋಡಿ

ನಾಯಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ನೋಡಿದ ಹಸು ಕೋಪಗೊಂಡು ಏನು ಮಾಡಿದೆ ಎಂದು ವಿಡಿಯೊದಲ್ಲೆ ನೋಡಿ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಫುಲ್​ ವೈರಲ್​

Viral Video: ನಾಯಿಯ ಕಿವಿ ಹಿಂಡುತ್ತಿದ್ದ ವ್ಯಕ್ತಿಯನ್ನು ನೋಡಿ ಕೋಪಗೊಂಡ ಹಸುವಿನ ರಿಯಾಕ್ಷನ್ ಹೇಗಿತ್ತು ನೋಡಿ
ನಾಯಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಪರಿಸ್ಥಿತಿ ಏನಾಗಿದೆ ನೋಡಿ
Follow us
TV9 Web
| Updated By: shruti hegde

Updated on: Nov 01, 2021 | 12:41 PM

ವ್ಯಕ್ತಿಯೊಬ್ಬ ನಾಯಿಗೆ ಕಿರುಕುಳ ನೀಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಯಿಯ ಕಿವಿಗಳನ್ನು ಹಿಂಡುತ್ತಿದ್ದ ವ್ಯಕ್ತಿಯನ್ನು ನೋಡಿದ ಹಸು ಕೋಪಗೊಂಡು ವ್ಯಕ್ತಿಯನ್ನು ತಳ್ಳಿದೆ. ತನ್ನ ಕೋಡಿನಿಂದ ವ್ಯಕ್ತಿಯನ್ನು ತಿವುದು ನೆಲಕ್ಕೆ ಬೀಳಿಸಿದ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ. ನಾಯಿಗೆ ವ್ಯಕ್ತಿ ಕಿರುಕುಳ ನೀಡುತ್ತಿದ್ದಂತೆಯೇ ಜೋರಾಗಿ ಕಿರುಚುತ್ತಿತ್ತು, ನೋವು ಸಹಿಸಲಾಗದೇ ಒದ್ದಾಡುತ್ತಿತ್ತು. ಅದನ್ನು ನೋಡಿದ ಹಸು ಕೋಪಗೊಂಡು ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಗುದ್ದಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್ ಆಗಿದೆ.

ವಿಡಿಯೊದಲ್ಲಿ ಗಮನಿಸುವಂತೆ ವ್ಯಕ್ತಿ ನಾಯಿಗೆ ಕಿರುಕುಳ ಕೊಡುತ್ತಿರುವುದನ್ನು ನೋಡಿ ಹಸು ಕೋಪಗೊಂಡು ಆತನ ಮೇಲೆ ಸವಾರಿ ಮಾಡಿದೆ. ವ್ಯಕ್ತಿ ನೆಲಕ್ಕೆ ಉರುಳಿ ಬಿದ್ದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಭಾರತೀಯ ಅರಣ್ಯ ಅಧಿಕಾರಿ ಸುಸಂತಾ ನಂದಾ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಕರ್ಮ ಎಂದು ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಪೋಸ್ಟ್ ಮಾಡಿದ್ದಾರೆ.

ವಿಡಿಯೊ ಫುಲ್ ವೈರಲ್ ಆಗುತ್ತಿದ್ದಂತೆಯೇ ಸುಮಾರು 1.2 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಲಭ್ಯವಾಗಿವೆ. ಸುಮಾರು 3,000 ರೀಟೀಟ್​ಗಳನ್ನು ಸಂಗ್ರಹಿಸಿದೆ. ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ವ್ಯಕ್ತಿಗೆ ತಕ್ಕ ಶಾಸ್ತಿಯಾಯಿತು ಎಂದು ಹೇಳಿದ್ದಾರೆ. ನಾಯಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ ಹಸು ತಕ್ಕ ಶಾಸ್ತಿ ಮಾಡಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಮೂಕ ಪ್ರಾಣಿಯಾಗಿದ್ದರೂ ಭಾವನೆಗಳು ಅರ್ಥವಾಗುತ್ತವೆ, ನಾಯಿಯ ನೋವು ಹಸುವಿನ ಕೋಪಕ್ಕೆ ಕಾರಣವಾಗಿದೆ ಹಾಗಾಗಿ ಹಸು ವ್ಯಕ್ತಿಗೆ ಗುದ್ದಿದೆ ಎಂದು ಮತ್ತೋರ್ವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಕೊಂಚ ತಡವಾಗಿದ್ದರೂ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದರು ತಾಯಿ-ಮಗು; ಶಾಕಿಂಗ್ ವಿಡಿಯೋ ಇಲ್ಲಿದೆ

Viral Video: ಜೀಪ್ ನೋಡಿ ಅಟ್ಟಿಸಿಕೊಂಡು ಬಂದ ದೈತ್ಯ ಘೇಂಡಾಮೃಗ; ವಿಡಿಯೊ ನೋಡಿ