Viral Video: ಮದುವೆ ಗಡಿಬಿಡಿಯಲ್ಲಿಯೂ ತನಗಿಷ್ಟದ ಮ್ಯಾಗಿ ತಿನ್ನುತ್ತಾ ಕುಳಿತ ವಧು; ವಿಡಿಯೊ ನೋಡಿ
ಮದುವೆಯ ಗಡಿಬಿಡಿಯಲ್ಲಿಯೂ ತನಗಿಷ್ಟದ ಮ್ಯಾಗಿ ಸವಿಯುತ್ತಿರುವ ವಧುವಿನ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೊ ಇದೆ ನೀವೇ ನೋಡಿ..
ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ವಧು ಮದುವೆಗೆ ಅಲಂಕಾರಗೊಂಡು ಕುಳಿತಿದ್ದಾಳೆ. ಗಡಿಬಿಡಿಯಲ್ಲಿಯೂ ವಧು ತನಗಿಷ್ಟದ ಮ್ಯಾಗಿ ತಿನ್ನುತ್ತಾ ಕುಳಿತಿದ್ದಾಳೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಳ್ಳಲಾಗಿದೆ. ಎದುರಿಗಿದ್ದವರು ಪ್ರಶ್ನೆ ಮಾಡಿದ್ರೆ, ವರ ಬೇಕಾದ್ರೆ ವೇಟ್ ಮಾಡಲಿ ನಾನು ಮ್ಯಾಗಿ ತಿನ್ನುತ್ತೇನೆ ಎಂದು ಇಷ್ಟವಾದ ತಿಂಡಿಯನ್ನು ಸವಿಯುತ್ತಿದ್ದಾಳೆ. ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಮೇಕಪ್ ಮ್ಯಾನ್ ವಧುವನ್ನು ತಯಾರು ಮಾಡುತ್ತಿದ್ದಾನೆ. ಒಂದು ಕಡೆ ಹೇರ್ ಸ್ಟೈಲ್ ಕೂಡಾ ಮಾಡಲಾಗುತ್ತಿದೆ. ಆ ಮಧ್ಯೆ ಬೌಲ್ನಲ್ಲಿದ್ದ ಮ್ಯಾಗಿಯನ್ನು ವಧು ಸಂತೋಷದಿಂದ ಸವಿಯುತ್ತಿದ್ದಾಳೆ. ಮ್ಯಾಗಿ ಅಂದ್ರೆ ವಧುವಿಗೆ ಎಷ್ಟು ಇಷ್ಟ ಎಂಬುದು ವಿಡಿಯೊದಲ್ಲಿ ವ್ಯಕ್ತವಾಗುತ್ತಿದೆ.
ಆಹಾರ ಪ್ರಿಯ ವಧು- ವರರಿಗೆ ಟ್ಯಾಗ್ ಮಾಡಿ ಎನ್ನುತ್ತಾ ವಿಡಿಯೊ ಹಂಚಿಕೊಳ್ಳಲಾಗಿದೆ. ವರ ಕಾಯುತ್ತಿದ್ದಾನೆ ಎಂದು ಪ್ರಶ್ನೆ ಮಾಡಿದಾಗ, ವರ ಬೇಕಾದ್ರೆ ವೇಟ್ ಮಾಡಲಿ ಎನ್ನುತ್ತಾ ವಧು ಖುಷಿಯಿಂದ ಮ್ಯಾಗಿ ಸವಿಯುತ್ತಿದ್ದಾಳೆ. ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಎಮೋಜಿಗಳನ್ನು ಕಳುಹಿಸುವ ಮೂಲಕ ಅಭಿಪ್ರಾಯ ತಿಳಿಸಿದ್ದರೆ, ಇನ್ನು ಕೆಲವರು ನನಗೂ ಮ್ಯಾಗಿ ಅಂದ್ರೆ ಇಷ್ಟ ಎಂದು ಉತ್ತರಿಸಿದ್ದಾರೆ.
View this post on Instagram