Viral Video: ಜೀಪ್ ನೋಡಿ ಅಟ್ಟಿಸಿಕೊಂಡು ಬಂದ ದೈತ್ಯ ಘೇಂಡಾಮೃಗ; ವಿಡಿಯೊ ನೋಡಿ
ದೈತ್ಯ ಘೇಂಡಾಮೃಗವು ಜೀಪನ್ನು ಹಿಂಬಾಲಿಸಿಕೊಂಡು ಬಂದಿದೆ. ಈ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೊ ನೋಡಿ.
ಸಾಮಾನ್ಯವಾಗಿ ರಸ್ತೆಯಲ್ಲಿ ಸಾಗುತ್ತಿರುವಾಗ ದೈತ್ಯಾಕಾರದ ಪ್ರಾಣಿಗಳು ಕಂಡರೆ ಭಯವಾಗುವುದು ಸಹಜ. ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ಗಮನಿಸುವಂತೆ ದೈತ್ಯ ಘೇಂಡಾಮೃಗವು ಜೀಪನ್ನು ಹಿಂಬಾಲಿಸಿಕೊಂಡು ಬಂದಿದೆ. ಈ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಕೆಲವುರು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದು ನಮ್ಮ ಜೀವವನ್ನು ಕೆಲವು ಬಾರಿ ನಾವೇ ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಕಾಡಿನಲ್ಲಿ ಸಾಗುತ್ತಿದ್ದಾಗ ಜೀಪಿನ ಎದುರು ಘೇಂಡಾಮೃಗವೊಂದು ಬಂದು ನಿಂತಿದೆ. ಆ ಸಮಯದಲ್ಲಿ ಜೀಪಿನ ಚಾಲಕನು ಹಿಂಭಾಗದಿಂದಲೇ ಅಂದರೆ ರಿವರ್ಸ್ನಲ್ಲಿ ಜೀಪನ್ನು ಓಡಿಸುತ್ತಾ ಸಾಗಿದ್ದಾನೆ. ಎದುರಿನಲ್ಲೇ ಇದ್ದ ಘೆಂಡಾಮೃಗ ಜೀಪನ್ನೇ ಹಿಂಬಾಲಿಸಿಕೊಂಡು ಬಂದಿದೆ. ಜೀಪಿನಲ್ಲಿ ಕುಳಿತಿದ್ದ ಓರ್ವರು ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಜೀಪನ್ನು ವೇಗವಾಗಿ ಓಡಿಸಿದಂತೆಯೇ ಘೇಂಡಾಮೃಗವೂ ಸಹ ವೇಗವಾಗಿ ಓಡಿ ಬಂದಿದೆ. ಕೆಲ ಸಮಯದ ಬಳಿಕ ಕಾಡಿನ ಒಳಕ್ಕೆ ಹೋಗಿದೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೊವನ್ನು ಫೆಸ್ಬುಕ್ನಲ್ಲಿ ಹಂಚಿಕೊಳ್ಳಲಾಗಿದ್ದು ಕೆಲವರು ಭಯಾನಕ ದೃಶ್ಯವಿದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೊ ನೋಡಿದ ಕೆಲವರು, ಘೇಂಡಾಮೃಗ ತುಂಬಾ ವೇಗದಲ್ಲಿ ಓಡಿ ಬರುತ್ತಿದೆ. ನಿಮ್ಮ ಜೀವದೊಂದಿಗೆ ಆಟವಾಡಿಬೇಡಿ ಎಂದು ಎಚ್ಚರಿಸಿದ್ದಾರೆ. ಹಿಮ್ಮುಖವಾಗಿ ಚಲಿಸುತ್ತಿದ್ದಾಗ ಹಿಂದೆ ಬಂದಿದ್ದ ಆನೆಗೆ ಡಿಕ್ಕಿ ಹೊಡೆದಿದ್ದರೆ ಏನಾಗಿರಬಹುದು ಕಲ್ಪಿಸಿಕೊಳ್ಳಿ? ಎದುರು ಘೇಂಡಾಮೃಗ, ಹಿಂದೆ ಆನೆ! ಎಂದು ಮತ್ತೋರ್ವರು ಹೇಳಿದ್ದಾರೆ.
ಇದನ್ನೂ ಓದಿ:
Viral Video: ಕುಚ್ ಕುಚ್ ಹೋತಾ ಹೈ ಚಿತ್ರದ ಹಾಡಿಗೆ ಅಮ್ಮ, ಅತ್ತೆಯ ಜೊತೆಗೂಡಿ ಸಕತ್ ಸ್ಟೆಪ್ ಹಾಕಿದ ವರ; ವಿಡಿಯೊ ನೋಡಿ
Viral Video: ಹೊಟೆಲ್ನಲ್ಲಿ ಪಾತ್ರೆ ತೊಳೆದ ಕೋತಿ ನೋಡಿ; ವಿಡಿಯೊ ವೈರಲ್
Published On - 10:01 am, Thu, 28 October 21