Shocking News: ಮಡಿಕೇರಿಯ ಮಹಿಳೆಯ ಹೊಟ್ಟೆಯಲ್ಲಿತ್ತು 1.5 ಕೆಜಿ ಕೂದಲು!

Kodagu News: ಮಡಿಕೇರಿಯ ಕೊಡಗು ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ನಲ್ಲಿ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಹೊಟ್ಟೆಯಲ್ಲಿ ದೊಡ್ಡ ವಸ್ತು ಇರುವುದು ಸ್ಕ್ಯಾನಿಂಗ್​ನಲ್ಲಿ ಕಂಡುಬಂದಿತ್ತು. ಆಪರೇಷನ್ ಮಾಡಿದಾಗ ಕೂದಲ ದೊಡ್ಡ ಗಂಟೊಂದು ಪತ್ತೆಯಾಯಿತು.

Shocking News: ಮಡಿಕೇರಿಯ ಮಹಿಳೆಯ ಹೊಟ್ಟೆಯಲ್ಲಿತ್ತು 1.5 ಕೆಜಿ ಕೂದಲು!
ಮಹಿಳೆಯ ಹೊಟ್ಟೆಯಲ್ಲಿದ್ದ ಕೂದಲು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 27, 2021 | 5:48 PM

ಮಡಿಕೇರಿ: ತೀವ್ರವಾದ ಹೊಟ್ಟೆ ನೋವಿನಿಂದ ಕೊಡಗಿನ ಮಡಿಕೇರಿಯಲ್ಲಿರುವ ಆಸ್ಪತ್ರೆಗೆ ಬಂದಿದ್ದ ಮಹಿಳೆಯನ್ನು ಪರಿಶೀಲಿಸಿದ ವೈದ್ಯರಿಗೆ ಆಕೆಯ ಹೊಟ್ಟೆ ನೋವಿನ ಕಾರಣ ತಿಳಿಯಲಿಲ್ಲ. ಕೊನೆಗೆ ಸ್ಕ್ಯಾನಿಂಗ್ ಮಾಡಿದಾಗ ಆಕೆಯ ಹೊಟ್ಟೆಯಲ್ಲಿ ದೊಡ್ಡದಾದ ಗಂಟೊಂದು ಇರುವುದು ಗೊತ್ತಾಯಿತು. ಹೊಟ್ಟೆಯಲ್ಲಿ ಯಾವುದೋ ಗೆಡ್ಡೆ ಬೆಳೆದಿರಬಹುದು ಎಂಬ ಅನುಮಾನದಿಂದ ಆಪರೇಷನ್ ಮಾಡಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಆಕೆಯ ಹೊಟ್ಟೆಯಲ್ಲಿ 1.5 ಕೆಜಿ ತೂಕದ ಕೂದಲಿನ ಉಂಡೆಯೊಂದಿತ್ತು!

ಮಡಿಕೇರಿಯ ಕೊಡಗು ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ (KoIMS)ನಲ್ಲಿ ಈ ಘಟನೆ ನಡೆದಿದೆ. ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಹೊಟ್ಟೆಯಲ್ಲಿ ದೊಡ್ಡ ವಸ್ತು ಇರುವುದು ಸ್ಕ್ಯಾನಿಂಗ್​ನಲ್ಲಿ ಕಂಡುಬಂದಿತ್ತು. ಮೂರೂವರೆ ಗಂಟೆಗಳ ಕಾಲ ಆಪರೇಷನ್ ಮಾಡಿದ ನಂತರ ಡಾ. ಅಜಿತ್ ಕುಮಾರ್ ನೇತೃತ್ವದ ವೈದ್ಯರ ತಂಡ ಆ ರೋಗಿಯ ಹೊಟ್ಟೆಯಿಂದ 1.5 ಕೆಜಿ ತೂಕದ ಕೂದಲನ್ನು ಹೊರಗೆ ತೆಗೆದಿದ್ದಾರೆ.

ಭಾನುವಾರ ಈ ಆಪರೇಷನ್ ನಡೆದಿದ್ದು, ರೋಗಿಯ ಆರೋಗ್ಯ ಸ್ಥಿತಿ ಈಗ ಸುಧಾರಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಆ ಮಹಿಳೆ ತನ್ನ ಕೂದಲನ್ನು ತಾನೇ ತಿನ್ನುವ ವಿಚಿತ್ರವಾದ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು. ಹೀಗಾಗಿ, ಹೊಟ್ಟೆಯೊಳಗೆ ಹೋದ ಕೂದಲು ಅಲ್ಲೇ ಉಂಡೆಯಾಗಿ ಶೇಖರಣೆಯಾಗಿತ್ತು. ಅದರಿಂದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಇದೇ ರೀತಿಯ ಘಟನೆ 2018ರಲ್ಲಿ ಇಂದೋರ್​ನಲ್ಲಿ ಕೂಡ ನಡೆದಿತ್ತು. 25 ವರ್ಷ ವಯಸ್ಸಿನ ಮಹಿಳೆ ತನ್ನ ತಲೆ ಕೂದಲನ್ನು ಕಿತ್ತು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದಳು. ಆಕೆಯ ಹೊಟ್ಟೆಯಿಂದ ಮಹಾರಾಜ ಯಶ್ವಂತ್ ರಾವ್ ಆಸ್ಪತ್ರೆಯ ವೈದ್ಯರು ಮಹಿಳೆಯ ಹೊಟ್ಟೆಯಿಂದ ಕೂದಲಿನ ಉಂಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದರು. ಆ ಮಹಿಳೆಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ ತನ್ನ ತಲೆಯಿಂದ ಕೂದಲನ್ನು ಕಿತ್ತು ತಿನ್ನುತ್ತಿದ್ದಳು. ಹೊಟ್ಟೆಯೊಳಗೆ ಶೇಖರಣೆಗೊಂಡ ಕೂದಲು ಒಂದು ಗಡ್ಡೆಯನ್ನೇ ರೂಪಿಸಿತ್ತು.

ಇದನ್ನೂ ಓದಿ: Shocking News: ಹಂದಿಯಂತೆ ಕಾಣುವ ಎರಡು ತಲೆಯ ಕರು ಜನನ; ಈ ವಿಚಿತ್ರ ಪ್ರಾಣಿಯ ಫೋಟೋ ವೈರಲ್

Shocking News: ಮೊಬೈಲ್ ನುಂಗಿದ ಮಹರಾಯ; 6 ತಿಂಗಳ ಬಳಿಕ ಆಪರೇಷನ್ ಮೂಲಕ ಹೊರತೆಗೆದ ವೈದ್ಯರು