Shocking News: ಹಂದಿಯಂತೆ ಕಾಣುವ ಎರಡು ತಲೆಯ ಕರು ಜನನ; ಈ ವಿಚಿತ್ರ ಪ್ರಾಣಿಯ ಫೋಟೋ ವೈರಲ್

Viral News: ಈ ಕರು ಹುಟ್ಟಿದ ಎರಡೇ ದಿನದಲ್ಲಿ ಸಾವನ್ನಪ್ಪಿದೆ. ಈ ವಿಚಿತ್ರವಾದ ಕರು ಹುಟ್ಟಿದ ಕೆಲವು ದಿನಗಳ ನಂತರ ಹಸುವೂ ತೀರಿಕೊಂಡಿತು.

Shocking News: ಹಂದಿಯಂತೆ ಕಾಣುವ ಎರಡು ತಲೆಯ ಕರು ಜನನ; ಈ ವಿಚಿತ್ರ ಪ್ರಾಣಿಯ ಫೋಟೋ ವೈರಲ್
ಹಂದಿಯ ದೇಹವಿರುವ ವಿಚಿತ್ರವಾದ ಕರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 27, 2021 | 3:52 PM

ನವದೆಹಲಿ: ಕೆಲವು ದಿನಗಳ ಹಿಂದೆ ಒರಿಸ್ಸಾದಲ್ಲಿ ಎರಡು ತಲೆ, ಮೂರು ಕಣ್ಣುಗಳಿರುವ ಕರುವೊಂದು ಹುಟ್ಟಿತ್ತು. ಅದೇ ರೀತಿ ರಷ್ಯಾದಲ್ಲಿ ವಿಚಿತ್ರವಾದ ಕರುವೊಂದು ಜನಿಸಿದ್ದು, ಹಂದಿಯ ದೇಹವನ್ನು ಹೊಂದಿರುವ ಎರಡು ತಲೆಯಿದೆ. ರಷ್ಯಾದಲ್ಲಿ ಹಸುವಿಗೆ ಈ ವಿಚಿತ್ರ ರೀತಿಯ ಕರು ಜನಿಸಿದೆ. ಈ ಕರುವನ್ನು ನೋಡಿದವರು ಎರಡು ಹಂದಿಯಂತೆ ಕಾಣುತ್ತಿದೆ ಎನ್ನುತ್ತಿದ್ದಾರೆ.

ಖಕಾಸ್ಸಿಯಾದ ಮಟ್ಕೆಚಿಕ್ ಗ್ರಾಮದಲ್ಲಿ ಜನಿಸಿದ ಈ ವಿಚಿತ್ರವಾದ ಕರುವನ್ನು ವೆಟರ್ನರಿ ವೈದ್ಯರು ಅಧ್ಯಯನ ಮಾಡಿದ್ದಾರೆ. ಈ ಹಸುವನ್ನು ಹೊಂದಿದ್ದ ರೈತ ಈ ತಿಂಗಳ ಆರಂಭದಲ್ಲಿ ಕರುವಿನ ಹುಟ್ಟಿನ ಬಗ್ಗೆ ವರದಿ ಮಾಡಿದ್ದಾರೆ. ಆದರೆ, ಈ ಕರು ಹುಟ್ಟಿದ ಎರಡೇ ದಿನದಲ್ಲಿ ಸಾವನ್ನಪ್ಪಿದೆ. ಈ ವಿಚಿತ್ರವಾದ ಕರು ಹುಟ್ಟಿದ ಕೆಲವು ದಿನಗಳ ನಂತರ ಹಸುವೂ ತೀರಿಕೊಂಡಿತು.

ಇಂತಹ ವಿಚಿತ್ರ ಪ್ರಕರಣವು ಬೇಸ್ಕಿ ಜಿಲ್ಲೆಯ ಮಟ್ಕೆಚಿಕ್ ಗ್ರಾಮದಲ್ಲಿ ಖಾಸಗಿ ಫಾರ್ಮ್‌ಸ್ಟೆಡ್‌ಗಳಲ್ಲಿ ಒಂದರಲ್ಲಿ ನಡೆದಿದೆ. ಆ ಹಸುವಿಗೆ ಇದು ಮೊದಲ ಕರುವಾಗಿದ್ದು, ಕರು ಹುಟ್ಟಿದ ಎರಡೇ ದಿನಕ್ಕೆ ಹಸು ಕೂಡ ಸಾವನ್ನಪ್ಪಿದೆ. ಪ್ರಾಣಿಗಳಲ್ಲಿನ ರೂಪಾಂತರಗಳಿಗೆ ಅವುಗಳ ಬಾಹ್ಯ ಮತ್ತು ಆಂತರಿಕ ಪರಿಸರ ಕೂಡ ಕಾರಣವಾಗುತ್ತದೆ. ಹಾಗೇ, ಕ್ರಾಸ್​ ಬ್ರೀಡಿಂಗ್ ಸಮಯದಲ್ಲಿ ಕೂಡ ಈ ರೀತಿಯ ರೂಪಾಂತರಿ ಪ್ರಾಣಿಗಳು ಹುಟ್ಟುತ್ತವೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಕಳೆದ ತಿಂಗಳು ನವರಾತ್ರಿ ವೇಳೆ, ಒರಿಸ್ಸಾದ ನಬ್ರಂಗ್​ಪುರದ ಧನಿರಾಂ ಎಂಬ ರೈತನ ಕೊಟ್ಟಿಗೆಯಲ್ಲಿರುವ ಹಸುವಿಗೆ ಈ ಅಪರೂಪದ ಮತ್ತು ವಿಶೇಷವಾದ ಕರು ಹುಟ್ಟಿತ್ತು. ಎರಡು ತಲೆ, ಮೂರು ಕಣ್ಣುಗಳಿರುವ ಈ ಕರುವನ್ನು ನೋಡಿದ ಹಸುವಿನ ಮಾಲೀಕ ಕೂಡ ಅಚ್ಚರಿ ಪಟ್ಟಿದ್ದರು. ಎರಡು ವರ್ಷಗಳ ಹಿಂದೆ ಧನಿರಾಂ ಈ ಹಸುವನ್ನು ಖರೀದಿಸಿದ್ದರು. ನವರಾತ್ರಿಯ ದಿನವೇ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಎರಡು ತಲೆಯ ಆ ಕರು ಎಲ್ಲರ ಗಮನ ಸೆಳೆದಿತ್ತು.

ಇದನ್ನೂ ಓದಿ: Viral Video: ನವರಾತ್ರಿ ದಿನವೇ 2 ತಲೆ, 3 ಕಣ್ಣುಗಳಿರುವ ಕರು ಜನನ; ದುರ್ಗೆಯ ಅವತಾರವೆಂದು ಪೂಜಿಸಿದ ಜನರು!

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?