AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕುಕ್ಕರ್​ನಲ್ಲಿ ಕಾಫಿ ಮಾಡೋದನ್ನು ನೋಡಿದ್ದೀರಾ?; ಬೀದಿ ವ್ಯಾಪಾರಿಯ ವಿಡಿಯೋ ವೈರಲ್

ಕುಕ್ಕರ್ ಬಳಸಿ ಕಾಫಿ ತಯಾರಿಸುವುದನ್ನು ನೀವು ನೋಡಿದ್ದೀರಾ?! ಬೀದಿ ವ್ಯಾಪಾರಿಯೊಬ್ಬರು ಕುಕ್ಕರ್​ ಬಳಸಿ ಬಿಸಿ ಬಿಸಿ ಕಾಫಿಯನ್ನು ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

Viral Video: ಕುಕ್ಕರ್​ನಲ್ಲಿ ಕಾಫಿ ಮಾಡೋದನ್ನು ನೋಡಿದ್ದೀರಾ?; ಬೀದಿ ವ್ಯಾಪಾರಿಯ ವಿಡಿಯೋ ವೈರಲ್
ಕಾಫಿ ಮಾಡುವ ವಿಡಿಯೋ
TV9 Web
| Edited By: |

Updated on:Dec 01, 2021 | 3:56 PM

Share

ನೀವು ಕಾಫಿ ಪ್ರಿಯರಾ? ಫಿಲ್ಟರ್ ಕಾಫಿ ಇಲ್ಲವೆಂದರೆ ನಿಮ್ಮ ದಿನ ಆರಂಭವಾಗುವುದೇ ಇಲ್ಲವಾ? ಮಧ್ಯರಾತ್ರಿ ಎಬ್ಬಿಸಿ ಕಾಫಿ ಕೊಟ್ಟರೂ ಕುಡಿಯುತ್ತೀರಾ? ಬೆಳಗ್ಗೆ ಎದ್ದ ಕೂಡಲೇ ನಿಮಗೆ ಬೆಡ್ ಕಾಫಿ ಬೇಕೇ ಬೇಕಾ? ಹಾಗಿದ್ದರೆ ಈ ವಿಚಿತ್ರವಾದ ಸುದ್ದಿಯನ್ನೊಮ್ಮೆ ಓದಿ ಬಿಡಿ. ಕಾಫಿಯನ್ನು ಇಷ್ಟಪಟ್ಟು ಕುಡಿಯುವವರೆಲ್ಲರಿಗೂ ಕಾಫಿ ಮಾಡಲು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾಫಿ ಮಾಡುವುದು ಕೂಡ ಒಂದು ಕಲೆ. ಇಲ್ಲೊಬ್ಬರು ವ್ಯಕ್ತಿ ಕುಕ್ಕರ್​ನಲ್ಲಿ ರುಚಿ ರುಚಿಯಾದ ಕಾಫಿ ಸಿದ್ಧಪಡಿಸಿಕೊಡುತ್ತಾರೆ. ಅನ್ನ ಮಾಡುವ ಕುಕ್ಕರ್​ನಲ್ಲಿ ಕಾಫಿ ಮಾಡೋದು ಹೇಗೆ ಅಂತ ಆಶ್ಚರ್ಯವಾಗುತ್ತಿದ್ದರೆ ನೀವೂ ಈ ವಿಡಿಯೋವನ್ನೊಮ್ಮೆ ನೋಡಿ.

ಒಂದೊಂದು ಪ್ರದೇಶದ ಕಾಫಿಗೂ ವಿಭಿನ್ನವಾದ ರುಚಿ, ಪರಿಮಳ ಇರುತ್ತದೆ. ಕಾಫಿ ನಮ್ಮ ಇಂದ್ರಿಯಗಳನ್ನು ಜಾಗೃತಗೊಳಿಸುತ್ತದೆ. ಈಗೀಗ ಕಾಫಿಯಲ್ಲಿ ಹಲವು ಹೊಸ ಆಯ್ಕೆಗಳಿದ್ದರೂ ಫಿಲ್ಟರ್​ ಕಾಫಿಗೆ ಬೇಡಿಕೆ ಇದ್ದೇ ಇದೆ. ಸಣ್ಣ ಸಣ್ಣ ಗೂಡಂಗಡಿಗಳಲ್ಲೂ ಫಿಲ್ಟರ್ ಕಾಫಿಯನ್ನು ಅತ್ಯಂತ ರುಚಿಯಾಗಿ ಮಾಡಿಕೊಡುತ್ತಾರೆ. ಆದರೆ, ಕುಕ್ಕರ್ ಬಳಸಿ ಕಾಫಿ ತಯಾರಿಸುವುದನ್ನು ನೀವು ನೋಡಿದ್ದೀರಾ?! ಬೀದಿ ವ್ಯಾಪಾರಿಯೊಬ್ಬರು ಕುಕ್ಕರ್​ ಬಳಸಿ ಬಿಸಿ ಬಿಸಿ ಕಾಫಿಯನ್ನು ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

View this post on Instagram

A post shared by Vansh?? (@eatthisagra)

ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿರುವ ಈ ವಿಡಿಯೋ ಭಾರೀ ವೈರಲ್ ಆಗಿದೆ. ಸೈಕಲ್​ನಲ್ಲಿ ಕಾಫಿ ಮಾರುತ್ತಿದ್ದ ವ್ಯಕ್ತಿ ಕುಕ್ಕರ್​ನಲ್ಲಿ ಕಾಫಿ ಮಾಡಿ ಕೊಡುತ್ತಿದ್ದಾರೆ. ಕಾಫಿ ಮಾಡುವ ಪಾತ್ರೆಯಲ್ಲಿ ಮೊದಲು ಹಾಲು ಮಿಕ್ಸ್​ ಮಾಡುವ ಆತ ನಂತರ ಕಾಫಿ ಡಿಕಾಕ್ಷನ್, ಸಕ್ಕರೆಯನ್ನು ಹಾಕುತ್ತಾನೆ. ನಂತರ ಆ ಕುಕ್ಕರ್​ನಿಂದ ಕಾಫಿ ಪಾತ್ರೆಯಲ್ಲಿ ನೊರೆ ಬರುವಂತೆ ಮಾಡಿ ಚೆನ್ನಾಗಿ ಮಿಕ್ಸ್​ ಮಾಡುತ್ತಾನೆ. ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಬಿಸಿಯಾದ, ನೊರೆಯುಕ್ತ ಕಾಫಿ ತಯಾರಾಗುತ್ತದೆ.

ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗಿನಿಂದ 2.2 ಮಿಲಿಯನ್ ಜನರು ವೀಕ್ಷಿಸಿದ್ದಾರೆ. 28.7 ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ಹೊಸ ಪ್ರಯೋಗ ಕಾಫಿ ತಯಾರಿಸುವ ಅನೇಕ ಜನರನ್ನು ವಿಸ್ಮಯಗೊಳಿಸಿದೆ. ಆತ ಮಾಡುವ ಕಾಫಿಗೆ ಸಾಕಷ್ಟು ಅಭಿಮಾನಿಗಳಿದ್ದು, ಸೈಕಲ್​ನಲ್ಲಿ ಕಾಫಿ ಮಾಡುವ ವ್ಯಕ್ತಿಯ ಸರಳತೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Shocking Video: ಪಟಾಕಿಗೆ ಬೆಂಕಿ ಹೊತ್ತಿಸಿ ಪೆಟ್ರೋಲ್ ಬಂಕ್​ ಮೇಲೆ ಎಸೆದ ಯುವಕರು; ಆಮೇಲೇನಾಯ್ತು?

Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?

Published On - 3:55 pm, Wed, 1 December 21

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್