AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮ್ಯಾಜಿಕ್ ಕಾರ್ಪೆಟ್ ಮೇಲೆ ತೇಲಿ ಮಂತ್ರಮುಗ್ಧಗೊಳಿಸಿದ ಜಾದೂಗಾರ; ಶಾಕಿಂಗ್ ವಿಡಿಯೋ ಇಲ್ಲಿದೆ

Shocking Video: RhyzOrDie ಎಂಬ ಹೆಸರಿನ ಯೂಟ್ಯೂಬರ್ ಇತ್ತೀಚೆಗೆ ತನ್ನ ಚಾನಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, ಅದು ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದೆ.

Viral Video: ಮ್ಯಾಜಿಕ್ ಕಾರ್ಪೆಟ್ ಮೇಲೆ ತೇಲಿ ಮಂತ್ರಮುಗ್ಧಗೊಳಿಸಿದ ಜಾದೂಗಾರ; ಶಾಕಿಂಗ್ ವಿಡಿಯೋ ಇಲ್ಲಿದೆ
ಮ್ಯಾಜಿಕ್ ಮಾಡಿದ ವಿಡಿಯೋ
TV9 Web
| Updated By: ಸುಷ್ಮಾ ಚಕ್ರೆ|

Updated on: Dec 06, 2021 | 7:42 PM

Share

ಜಾದೂಗಾರರು ಮ್ಯಾಜಿಕ್ ಮೂಲಕ ನಮ್ಮ ಕಣ್ಮುಂದೆ ಅದ್ಭುತವನ್ನೇ ಸೃಷ್ಟಿಸುತ್ತಾರೆ. ಅದನ್ನು ನೋಡಿದ ಸಾಮಾನ್ಯ ಜನರು ಗೊಂದಲಕ್ಕೀಡಾಗುತ್ತಾರೆ, ಆಶ್ಚರ್ಯಚಕಿತರಾಗುತ್ತಾರೆ. ಇಂದಿನ ಆಧುನಿಕ ಯುಗದಲ್ಲೂ ಈ ಮ್ಯಾಜಿಕ್​ಗೆ ಮರುಳಾಗದವರೇ ಇಲ್ಲ. ಅದೇ ರೀತಿ ಯೂಟ್ಯೂಬರ್ ಒಬ್ಬರು ಇತ್ತೀಚೆಗೆ ಸೃಷ್ಟಿಸಿದ ಜಾದೂವೊಂದು ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. RhyzOrDie ಎಂಬ ಹೆಸರಿನ ಯೂಟ್ಯೂಬರ್ ಇತ್ತೀಚೆಗೆ ತನ್ನ ಚಾನಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, ಅದು ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದೆ. ‘ಅರೇಬಿಯನ್ ನೈಟ್ಸ್’ ಥೀಮ್ ಅನ್ನು ಅನುಸರಿಸಿ, ಕಂಟೆಂಟ್ ಕ್ರಿಯೇಟರ್ ಮ್ಯಾಜಿಕ್ ಕಾರ್ಪೆಟ್ ಮೇಲೆ ತೇಲುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು!

ಅವರ ವೀಡಿಯೊದಲ್ಲಿ, ಬಿಳಿ ಮತ್ತು ಚಿನ್ನದ ಪೇಟ ಮತ್ತು ಗೌನ್‌ನೊಂದಿಗೆ ಸಂಪೂರ್ಣವಾದ ಅಲ್ಲಾದೀನ್‌ನಂತೆಯೇ ಉಡುಪನ್ನು ಧರಿಸಿರುವ ವ್ಯಕ್ತಿಯನ್ನು ಕಾಣಬಹುದು. ಆ ವ್ಯಕ್ತಿ ನೀರಿನ ಮೇಲೆ, ರಸ್ತೆಯಲ್ಲಿ ಮ್ಯಾಜಿಕ್ ಕಾರ್ಪೆಟ್ ಹಾಸಿಕೊಂಡು ಅದರ ಮೇಲೆ ನಿಂತುಕೊಂಡು ಜಾರಿ ಹೋಗುತ್ತಿರುವ (ತೇಲುತ್ತಾ ಹೋಗುತ್ತಿರುವ) ವಿಡಿಯೋ ವೈರಲ್ ಆಗಿದೆ. ತೇಲುತ್ತಿರುವ ಕಾರ್ಪೆಟ್ ಮೇಲೆ ನಿಂತುಕೊಂಡ ಜಾದೂಗಾರ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾನೆ.

RhyzOrDie ಅವರು ಎಲೆಕ್ಟ್ರಾನಿಕ್ ಲಾಂಗ್‌ಬೋರ್ಡ್‌ನ ಸುತ್ತಲೂ ಪಿವಿಸಿ ಪೈಪ್ ಫ್ರೇಮ್ ಅನ್ನು ರಚಿಸಿದ್ದರು. ಅದರ ಮೇಲೆ ಕಾರ್ಪೆಟ್ ಅನ್ನು ಹಾಸಿ, ಅದರ ಮೇಲೆ ತೇಲಿ ತೋರಿಸಿದರು. ಇದು ದುಬೈನ ಬೀದಿಗಳಲ್ಲಿ ಮ್ಯಾಜಿಕ್ ಕಾರ್ಪೆಟ್‌ನ ಆಪ್ಟಿಕಲ್ ಭ್ರಮೆಯನ್ನು ಸೃಷ್ಟಿಸಿತು.ಈ ರೀತಿಯ ಮ್ಯಾಜಿಕ್​ಗಾಗಿ ಯೂಟ್ಯೂಬರ್ ‘eFoil ಬೋರ್ಡ್’ ಅನ್ನು ಬಳಸಿದ್ದರು. ಈ ವಿಡಿಯೋ ವೈರಲ್ ಆಗಿದ್ದು, ಸುಮಾರು ಒಂದು ಲಕ್ಷ ವೀಕ್ಷಣೆಗಳನ್ನು ಹೊಂದಿದೆ.

ಇದನ್ನೂ ಓದಿ: Viral Video: ಮದುವೆ ಮಂಟಪಕ್ಕೆ ನುಗ್ಗಿ ಪ್ರೇಯಸಿಯ ಹಣೆಗೆ ಸಿಂಧೂರವಿಟ್ಟ ಯುವಕ; ತಾಳಿ ಕಟ್ಟಲು ರೆಡಿಯಾಗಿದ್ದ ವರ ಶಾಕ್!

Viral Video: ಕೆರಳಿದ ಆನೆಯಿಂದ ಸಫಾರಿ ಜೀಪ್ ಮೇಲೆ ದಾಳಿ; ಕಂಗಾಲಾಗಿ ಓಡಿದ ಪ್ರವಾಸಿಗರು