BR Ambedkar Death Anniversary: ಸಂವಿಧಾನ ಶಿಲ್ಪಿ ಡಾ. ಬಿಆರ್​ ಅಂಬೇಡ್ಕರ್​ ಮಹಾಪರಿನಿರ್ವಾಣ್ ದಿವಸ್​: ಇಲ್ಲಿವೆ ತಿಳಿದುಕೊಳ್ಳಬೇಕಾದ ಮುಖ್ಯ ಸಂಗತಿಗಳು

ಅಂಬೇಡ್ಕರ್​ ಅವರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರು. ಬೌದ್ಧ ದರ್ಮದಲ್ಲಿ ಮರಣಹೊಂದಿದ ದಿನವನ್ನು ಪರಿನಿರ್ವಾಣ ಎಂದು ಕರೆಯುತ್ತಾರೆ. ಆದ್ದರಿಂದ ಡಾ. ಬಿ ಆರ್​ ಅಂಬೇಡ್ಕರ್​ ಅವರು ನಿಧನರಾದ ದಿನವನ್ನು ಪರಿನಿರ್ವಾಣ್​ ದಿವಸ್​ ಎಂದು ಆಚರಿಸಲಾಗುತ್ತಿದೆ.

BR Ambedkar Death Anniversary: ಸಂವಿಧಾನ ಶಿಲ್ಪಿ ಡಾ. ಬಿಆರ್​ ಅಂಬೇಡ್ಕರ್​ ಮಹಾಪರಿನಿರ್ವಾಣ್ ದಿವಸ್​: ಇಲ್ಲಿವೆ ತಿಳಿದುಕೊಳ್ಳಬೇಕಾದ ಮುಖ್ಯ ಸಂಗತಿಗಳು
ಡಾ.ಬಿಆರ್​ ಅಂಬೇಡ್ಕರ್​
Follow us
| Updated By: Digi Tech Desk

Updated on:Dec 06, 2021 | 12:11 PM

ಇಂದು (ಡಿ 6) ಭಾರತೀಯ ಸಂವಿಧಾನ ಶಿಲ್ಪಿ ಡಾ. ಬಿ ಆರ್​ ಅಂಬೇಡ್ಕರ್​ ಆವರ 66ನೇ ಪುಣ್ಯತಿಥಿ. ಈ ಹಿನ್ನಲೆಯಲ್ಲಿ ಪ್ರತೀ ವರ್ಷ ಡಿಸೆಂಬರ್​ 6ರಂದು ಮಹಾಪರಿನಿರ್ವಾಣ್ ದಿವಸ್​ ಎಂದು ಆಚರಿಸಲಾಗುತ್ತದೆ. ಮಧ್ಯಪ್ರದೇಶದ ಮೋವ್​ ಜಿಲ್ಲೆಯಲ್ಲಿ 1891ರ ಎಪ್ರಿಲ್​ 14ರಂದು  ದಲಿತ ಕುಟುಂಬದಲ್ಲಿ ಹುಟ್ಟಿದ ಅಂಬೇಡ್ಕರ್. ಚಿಕ್ಕಂದಿನಿಂದಲೂ ಅವಮಾನವನ್ನೇ ಎದುರಿಸಿದವರು. ಬಾಬಾ ಸಾಹೇಬ್​ ಅಂಬೇಡ್ಕರ್​ ಅವರ ಮೂಲ ಹೆಸರು ಅಂಬಾವಾಡ್ಕರ್​. ಶಾಲಾದಿನಗಳಲ್ಲಿ ದಾಖಲಾತಿಗಾಗಿ ಅವರ ಶಿಕ್ಷಕಿ ಅಂಬೇಡ್ಕರ್ ಎಂದು ನಾಮಕರಣ ಮಾಡಿದ್ದರು. ದಲಿತರ ಶಿಕ್ಷಣ, ಮಹಿಳೆಯರ ಸಬಲೀಕರಣ, ಅವರ ಏಳಿಗೆ ಹಾಗೂ ಬಡಜನರ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟವರು ಡಾ. ಭೀಮ್​ರಾವ್ ರಾಮ್​ಜಿ ಅಂಬೇಡ್ಕರ್​.

ಅಂಬೇಡ್ಕರ್​ ಅವರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರು. ಬೌದ್ಧ ಧರ್ಮದಲ್ಲಿ ಮರಣಹೊಂದಿದ ದಿನವನ್ನು ಪರಿನಿರ್ವಾಣ ಎಂದು ಕರೆಯುತ್ತಾರೆ. ಆದ್ದರಿಂದ ಡಾ. ಬಿ ಆರ್​ ಅಂಬೇಡ್ಕರ್​ ಅವರು ನಿಧನರಾದ ದಿನವನ್ನು ಪರಿನಿರ್ವಾಣ್​ ದಿವಸ್​ ಎಂದು ಆಚರಿಸಲಾಗುತ್ತಿದೆ.

ಬಹುಮುಖ ವ್ಯಕ್ತಿತ್ವ ಹೊಂದಿದ್ದ ಅಂಬೇಡ್ಕರ್​ ಅವರು, ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲದೆ ಉತ್ತಮ ನ್ಯಾಯವಾದಿ, ಶಿಕ್ಷಣತಜ್ಞ, ಪತ್ರಕರ್ತ, ರಾಜಕಾರಣಿ, ಸಮಾಜಶಾಸ್ತ್ರಜ್ಞ ಹಾಗೂ ಆರ್ಥಿಕತಜ್ಞರೂ ಆಗಿದ್ದರು. ಸಮಾಜದಲ್ಲಿ ಪಿಡುಗಾಗಿದ್ದ ಅಸ್ಪೃಶ್ಯತೆ ತೊಡೆದುಹಾಕುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಜತೆಗೆ ದಲಿತರ ಸರ್ವಾಂಗೀಣ ಏಳಿಗೆಗಾಗಿ ಪಣತೊಟ್ಟಿದ್ದರು. ಲಿಂಗ ಸಮಾನತೆಯ ಜತೆಗೆ ದಲಿತರ ಜೀವನದಲ್ಲೂ ಶಿಕ್ಷಣದ ಬೆಳಕು ಮೂಡಬೇಕು ಎಂದು ಹೋರಾಡಿದವರು ಡಾ. ಬಿ ಆರ್​ ಅಂಬೇಡ್ಕರ್​.

ಯುಎಸ್​ನ ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್​ ಸ್ಕೂಲ್​ ಆಫ್​ ಎಕನಾಮಿಕ್ಸ್​ನಲ್ಲಿ ಸಾರ್ಕಾರದ ವಿದ್ಯಾರ್ಥಿ ವೇತನ ಪಡೆಯುವ ಮೂಲಕ ಶಿಕ್ಷಣವನ್ನು ಪಡೆದರು. ಲಂಡನ್​ ಸ್ಕೂಲ್​ ಆಫ್​ ಎಕನಾಮಿಕ್ಸ್​ನಿಂದ ಡಾಕ್ಟರ್​ ಆಲ್​ ಸೈನ್ಸ್ ಎಂಬ ಅಪರೂಪದ ಡಾಕ್ಟರೇಟ್ ಪದವಿಯನ್ನು ಪಡೆದ ಜಗತ್ತಿನ ಮೊದಲ ವ್ಯಕ್ತಿ ಎನಿಸಿಕೊಂಡರು.

1927ರ ಮಾರ್ಚ್ 20ರಂದು ಸುಮಾರು 5 ಸಾವಿರ ಪರುಷರು ಹಾಗೂ ಮಹಿಳೆಯರನ್ನು ಸೇರಿಸಿಕೊಂಡು ಮಹಾದ್​ ಸತ್ಯಾಗ್ರಹ ಅಥವಾ ಚಾವ್​ದಾರ್ ಟೇಲ್​ ಸತ್ಯಾಗ್ರಹದ ಮೂಲಕ ಮಹಾರಾಷ್ಟ್ರದ ರಾಯ್​ಗಡ್​ನಲ್ಲಿ ದಲಿತರ ಮೇಲಾಗುತ್ತಿದ್ದ ದೌರ್ಜನ್ಯದ ವಿರುದ್ದ ತಿರುಗಿಬಿದ್ದು, ಸಾರ್ವಜನಿಕ ಟ್ಯಾಂಕ್​ನಲ್ಲಿ ನೀರನ್ನುತೆಗೆದುಕೊಂಡು ಕೈತೊಳೆದರು. ಈ ಮೂಲಕ ಅಸ್ಪಶ್ಯತೆ ಎನ್ನುವ ಸಾಮಾಜಿಕ ಪಿಡುಗಿಗೆ ಅಂತ್ಯ ಹಾಡಿದ್ದರು. ಜಾತ್ಯಾತೀತ, ಸಮಾಜವಾದಿ, ಪ್ರಜಾಪ್ರಭುತ್ವದಲ್ಲಿ  ಅಪಾರ ವಿಶ್ವಾಸ ಹೊಂದಿದ್ದ ಅವರು, ಮಾನವ ಕುಲದ ಹಕ್ಕುಗಳು, ಸ್ವಾತಂತ್ರ್ಯ, ಸಮಾನತೆಯ ಸ್ಥಾಪನೆಗಾಗಿ ಹೋರಾಡಿದ ಮಹಾನ್​ ನಾಯಕ. 1935ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್​ ಸ್ಥಾಪನೆಯಲ್ಲಿ ಕೂಡ ಮಹತ್ತರ ಪಾತ್ರ ವಹಿಸಿದ್ದರು. ಸಮಾಜದಲ್ಲಿದ್ದ ಕೆಲವು ಮೌಢ್ಯಗಳನ್ನು, ಸಂಪ್ರದಾಯಗಳನ್ನು ಬಹಿರಂಗವಾಗಿಯೇ ವಿರೋಧಿಸುತ್ತಿದ್ದ ಅವರು ವಿದ್ಯೆಯಿಂದ ಹಕ್ಕು ಮತ್ತು ಸಾಮಾಜಿಕ ಸಮಾನತೆಯನ್ನು ಪಡೆದುಕೊಳ್ಳುಬಹುದು ಎನ್ನುತ್ತಿದ್ದರು. ಈ ರೀತಿಯಾಗಿ ಜನರು ವಿದ್ಯೆಯೆಡೆಗೆ ಒಲವು ತೋರುವಂತೆ ಮಾಡಿದ್ದರು. ಅಂಬೇಡ್ಕರ್​ ಅವರಿಗೆ  ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ಪ್ರಶಸ್ತಿ ನೀಡಲಾಗಿದೆ. ಇನ್ನೊಂದು ಮಹತ್ತರ ಸಂಗತಿಯೆಂದರೆ ಜಗತ್ತಿನಲ್ಲಿ  ಕುಡಿಯುವ ನೀರಿಗಾಗಿ ಸತ್ಯಾಗ್ರಹ ನಡೆಸಿದ ಏಕೈಕ ವ್ಯಕ್ತಿ ಡಾ.ಬಿಆರ್​ ಅಂಬೇಡ್ಕರ್​. ಡಾ.ಬಿಆರ್​ ಅಂಬೇಡ್ಕರ್​ ಅವರು ಅನಾರೋಗ್ಯದಿಂದ 1956ರ ಡಿ.6ರಂದು  ನಿಧನಾರದರು. ಬದುಕಿನುದ್ದಕ್ಕೂ ಕೆಳಜಾತಿ, ದಲಿತ ಎಂದು ಅವಮಾನಿಸಿದರೂ ಜಗತ್ತೇ ತಿರುಗಿ ನೋಡುವಂತೆ ಸಾಧಿಸಿದ ಅಪ್ರತಿಮ ನಾಯಕನ ಜೀವನದ ಆದರ್ಶಗಳು ಇಂದಿಗೂ ಯುವಜನತೆಗೆ ಸ್ಫೂರ್ತಿಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾನ್ ಕಾರ್ಡ್, ಆಧಾರ್ ಕಾರ್ಡ್ ಪಡೆದು ವಂಚಿಸುವ ಜಾಲ ಪತ್ತೆ

Published On - 12:05 pm, Mon, 6 December 21

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು