ಪುನೀತ್​ ರಾಜ್​ಕುಮಾರ್​ಗಾಗಿ ಫ್ಯಾನ್ಸ್​ ನಿರ್ಮಿಸಿದ ಮಿನಿ ಸ್ಮಾರಕ; ಹೊಸೂರು ಗ್ರಾಮಸ್ಥರ ಅಭಿಮಾನದ ಕಾರ್ಯ

Puneeth Rajkumar: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೊಸೂರು ಗ್ರಾಮದ ಅಭಿಮಾನಿಗಳು ಅಪ್ಪುಗಾಗಿ ಮಿನಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಅಲ್ಲಿನ ಮಾರುಕಟ್ಟೆಗೂ ಪುನೀತ್ ರಾಜ್​ಕುಮಾರ್​ ಹೆಸರು ಇಡಲಾಗಿದೆ.

TV9kannada Web Team

| Edited By: Madan Kumar

Dec 16, 2021 | 10:05 AM

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಬಗ್ಗೆ ಜನರು ಇಟ್ಟುಕೊಂಡಂತಹ ಪ್ರೀತಿ ಅಪಾರ. ಇಂದು ಪುನೀತ್​ ನಮ್ಮೊಂದಿಗೆ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ಪ್ರತಿ ದಿನ ಅಭಿಮಾನಿಗಳು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಹಲವಾರು ರೀತಿಯಲ್ಲಿ ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್​ ಅವರ ಸಮಾಧಿ (Puneeth Rajkumar Samadhi) ಇದೆ. ವಿಶೇಷ ಎಂದರೆ, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೊಸೂರು ಗ್ರಾಮದ ಅಭಿಮಾನಿಗಳು ಅಪ್ಪುಗಾಗಿ ಮಿನಿ ಸ್ಮಾರಕ (Puneeth Rajkumar Mini Smaraka) ನಿರ್ಮಾಣ ಮಾಡಿದ್ದಾರೆ. ಅಲ್ಲಿನ ಸಂತೆ ಮಾರುಕಟ್ಟಗೆ ಈಗ ‘ಪುನೀತ್​ ರಾಜ್​ಕುಮಾರ್​ ಸಂತೆ ಮಾರ್ಕೆಟ್​’ ಎಂದು ಹೆಸರು ಇಡಲಾಗಿದೆ. ಗ್ರಾಮಸ್ಥರಿಂದ ಈ ಕಾರ್ಯ ನೆರವೇರಿದೆ. ಅಪ್ಪು ಮೇಲಿನ ಅಭಿಮಾನವನ್ನು ಜನರು ಈ ರೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಪುನೀತ್​ ಅವರ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿದ ಶಿವಣ್ಣ; ಊರಿಗೆ ಕ್ಷೇಮವಾಗಿ ತಲುಪುವಂತೆ ಸಲಹೆ

ಸದನದಲ್ಲೂ ಪುನೀತ್​ ಬಗ್ಗೆ ಮಾತು; ಕರ್ನಾಟಕ ರತ್ನ, ಪದ್ಮಶ್ರೀ ಪ್ರಶಸ್ತಿ ಬಗ್ಗೆ ಸಿಎಂ ಹೇಳಿದ್ದೇನು?

Follow us on

Click on your DTH Provider to Add TV9 Kannada