ಕನ್ನಡ ಧ್ವಜ ಸುಟ್ಟವರ ವಿರುದ್ಧ ಶಿವಣ್ಣ, ಜಗ್ಗೇಶ್​ ಆಕ್ರೋಶ; ಕಿಡಿಗೇಡಿಗಳ ಕೃತ್ಯಕ್ಕೆ ಸ್ಯಾಂಡಲ್​ವುಡ್​ ಖಂಡನೆ

ಕನ್ನಡ ಧ್ವಜ ಸುಟ್ಟವರ ವಿರುದ್ಧ ಶಿವಣ್ಣ, ಜಗ್ಗೇಶ್​ ಆಕ್ರೋಶ; ಕಿಡಿಗೇಡಿಗಳ ಕೃತ್ಯಕ್ಕೆ ಸ್ಯಾಂಡಲ್​ವುಡ್​ ಖಂಡನೆ
ಶಿವರಾಜ್​ಕುಮಾರ್​, ಜಗ್ಗೇಶ್

Kannada Flag: ಕರುನಾಡಿನ ಧ್ವಜ ಸುಟ್ಟುಹಾಕಿರುವ ಮಹಾರಾಷ್ಟ್ರದ ಕಿಡಿಗೇಡಿಗಳ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ನಟರಾದ ಜಗ್ಗೇಶ್​, ಶಿವರಾಜ್​ಕುಮಾರ್​ ಮುಂತಾದವರು ಈ ಬಗ್ಗೆ ಧ್ವನಿ ಎತ್ತಿದ್ದಾರೆ.

TV9kannada Web Team

| Edited By: Madan Kumar

Dec 16, 2021 | 9:09 AM

ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡು ನಟ ಶಿವರಾಜ್​ಕುಮಾರ್​ (Shivarajkumar) ಅವರು ತೀವ್ರ ನೋವಿನಲ್ಲಿದ್ದಾರೆ. ಅದರ ನಡುವೆಯೂ ಅವರು ಕನ್ನಡ ನಾಡು-ನುಡಿಯ ಬಗ್ಗೆ ಧ್ವನಿ ಎತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಧ್ವಜ (Karnataka Flag) ಸುಟ್ಟು ಹಾಕಿದ ಘಟನೆ ನಡೆದಿದೆ. ಅದನ್ನು ಶಿವರಾಜ್​ಕುಮಾರ್​ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದ್ದಾರೆ. ಅದೇ ರೀತಿ ಜಗ್ಗೇಶ್​ (Jaggesh), ಸಂತೋಷ್​ ಆನಂದ್​ರಾಮ್​ ಸೇರಿದಂತೆ ಕನ್ನಡದ ಅನೇಕ ಸೆಲೆಬ್ರಿಟಿಗಳು ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಲಾಗುತ್ತಿದೆ.

ಶಿವರಾಜ್​ಕುಮಾರ್​ ಹೇಳಿದ್ದೇನು?

ಕನ್ನಡ ಭಾಷೆ, ನೆಲೆ, ಜಲದ ವಿಷಯ ಬಂದಾಗ ಡಾ. ರಾಜ್​ಕುಮಾರ್​ ಕುಟುಂಬ ಸದಾ ಮುಂದಿರುತ್ತದೆ. ಗೋಕಾಕ್​ ಚಳುವಳಿ ಕಾಲದಿಂದಲೂ ಈ ಮಾತು ಸಾಬೀತಾಗಿದೆ. ಈಗ ಕರುನಾಡಿದ ಧ್ವಜ ಸುಟ್ಟು ಹಾಕಿದ ಕಿಡಿಗೇಡಿಗಳ ವಿರುದ್ಧ ಶಿವಣ್ಣ ಗರಂ ಆಗಿದ್ದಾರೆ. ‘ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ’ ಎಂದು ಶಿವಣ್ಣ ಟ್ವೀಟ್​ ಮಾಡಿದ್ದಾರೆ.

ಕರುನಾಡಿನ ಧ್ವಜ ಸುಟ್ಟ ಘಟನೆಯನ್ನು ನಟ ಜಗ್ಗೇಶ್​ ಕೂಡ ತೀವ್ರವಾಗಿ ಖಂಡಿಸಿದ್ದಾರೆ. ‘ಕನ್ನಡ ಬಾವುಟ ಅಪಮಾನಿಸಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ. ಕನ್ನಡಪರ ಈ ವಿಷಯಕ್ಕೆ ಹೋರಾಟ ಮಾಡಿದ ಕನ್ನಡ ಸೈನಿಕರ ದಯಮಾಡಿ ಬಿಡುಗಡೆಗೊಳಿಸಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಜಗ್ಗೇಶ್​ ಒತ್ತಾಯಿಸಿದ್ದಾರೆ. ‘ಕರ್ನಾಟಕದಲ್ಲಿ ಕನ್ನಡ ಭಾಷೆ ಸಾರ್ವಭೌಮ’ ಎಂದು ಅವರು ಬರೆದುಕೊಂಡಿದ್ದಾರೆ.

ನಿರ್ಮಾಪಕ ಕಾರ್ತಿಕ್​ ಗೌಡ, ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಕೂಡ ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ. ‘ಕನ್ನಡ ಕಲಿಗಳನ್ನ ಬಿಡುಗಡೆ ಮಾಡಿ. ನಮ್ಮ ಭಾಷೆ, ನಾಡು, ನೀರಿನ ಪರ ಧ್ವನಿಯಾಗುವುದು ನಮ್ಮ ಕರ್ತವ್ಯ. ಗಡಿಭಾಗದ ಕನ್ನಡಿಗರು ಹುಲಿಗಳು. ಜೈ ಹಿಂದ್ ಜೈ ಕರ್ನಾಟಕ ಮಾತೆ. ಬೆಳಗಾವಿ ಕರ್ನಾಟಕದ ಕಳಶ’ ಎಂದು ಸಂತೋಷ್​ ಆನಂದ್​ರಾಮ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

ಅಪ್ಪು​ ಜತೆಗಿನ ಕೊನೆಯ ಭೇಟಿ ಬಗ್ಗೆ ‘ಪುನೀತ ನಮನ’ ವೇದಿಕೆಯಲ್ಲಿ ಜಗ್ಗೇಶ್​ ಹೇಳಿದ್ದೇನು?

ಪುನೀತ್​ ಅವರ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿದ ಶಿವಣ್ಣ; ಊರಿಗೆ ಕ್ಷೇಮವಾಗಿ ತಲುಪುವಂತೆ ಸಲಹೆ

Follow us on

Related Stories

Most Read Stories

Click on your DTH Provider to Add TV9 Kannada