ದಾಕ್ಷಾಯಿಣಿ ಮತ್ತು ಅವರ ಕುಟುಂಬದವರನ್ನು ಶಿವಣ್ಣ ಇಂದು (ಡಿ.14) ಸಂಜೆ ಭೇಟಿ ಮಾಡಿದರು. ಒಂದಷ್ಟು ಸಮಯ ಮಾತನಾಡಿ ಕುಶಲೋಪರಿ ವಿಚಾರಿಸಿದರು. ನಾಗವಾರದ ನಿವಾಸದಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಕೂಡ ಇದ್ದರು. ಆರೋಗ್ಯ ವಿಚಾರಿಸಿದ ಬಳಿಕ ಕ್ಷೇಮವಾಗಿ ವಾಪಸ್ ಊರಿಗೆ ತಲುಪುವಂತೆ ಶಿವಣ್ಣ ಸಲಹೆ ನೀಡಿದರು.
ಧಾರವಾಡದಿಂದ ಬೆಂಗಳೂರಿಗೆ ಓಡುತ್ತಾ ಬರುವುದು ಎಂದರೆ ತಮಾಷೆಯ ಮಾತಲ್ಲ. ದಾಕ್ಷಾಯಿಣಿ ಅವರನ್ನು ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವ ರಾಜ್ಕುಮಾರ್ ಅವರು ಬೆಳಗ್ಗೆ ಸಮಾಧಿಯ ಬಳಿ ಬರಮಾಡಿಕೊಂಡರು. ಅದು ದಾಕ್ಷಾಯಿಣಿ ಕುಟುಂಬದವರಿಗೆ ಸಂತಸ ತಂದಿತು. ಅಪ್ಪು ಸಮಾಧಿಗೆ ನಮಿಸಿದ ಬಳಿಕ ದಾಕ್ಷಾಯಿಣಿ ತುಂಬ ಭಾವುಕರಾದರು. ‘ಮಾರ್ಗಮಧ್ಯೆ ನೇತ್ರದಾನ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತ ಬಂದೆವು. ನಮಗೆ ಅಭಿಮಾನಿ ಸಂಘಗಳು ಬಹಳ ಸಹಕಾರ ನೀಡಿವೆ. ಕುಟುಂಬದ ಬೆಂಬಲ ಕೂಡ ದೊಡ್ಡದು. ಇನ್ನೂ ಎರಡು ವರ್ಷ ಇದೇ ರೀತಿ ಮ್ಯಾರಥಾನ್ ಮಾಡಿಕೊಂಡು ಸಮಾಧಿಗೆ ಬರುತ್ತೇನೆ. ಅಶ್ವಿನಿ ಮೇಡಂ ಅವರನ್ನು ನೋಡಬೇಕು ಎಂಬ ಆಸೆ ಇತ್ತು. ರಾಘಣ್ಣ ಅವರನ್ನು ಮಾತನಾಡಿಸಬೇಕು ಎಂದುಕೊಂಡಿದ್ದೆ. ಅವರಿಗೆ ಅನಾರೋಗ್ಯ ಆದ ಕಾರಣ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ದಾಕ್ಷಾಯಿಣಿ ಹೇಳಿದ್ದಾರೆ.
ಇದನ್ನೂ ಓದಿ:
ಪುನೀತ್ ರಾಜ್ಕುಮಾರ್ ಸಾಧನೆಗಳನ್ನು ಸದನದಲ್ಲಿ ಸಾರಿ ಸಾರಿ ಹೇಳಿದ ಸ್ಪೀಕರ್ ಕಾಗೇರಿ
ಸದನದಲ್ಲೂ ಪುನೀತ್ ಬಗ್ಗೆ ಮಾತು; ಕರ್ನಾಟಕ ರತ್ನ, ಪದ್ಮಶ್ರೀ ಪ್ರಶಸ್ತಿ ಬಗ್ಗೆ ಸಿಎಂ ಹೇಳಿದ್ದೇನು?