Allu Arjun: ಕನ್ನಡ ಮಾಧ್ಯಮಗಳ ಎದುರು ಬಹಿರಂಗ ಕ್ಷಮೆಯಾಚಿಸಿದ ಅಲ್ಲು ಅರ್ಜುನ್
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಅಲ್ಲು ಅರ್ಜುನ್, ನಾಯಕಿ ರಶ್ಮಿಕಾ ಮಂದಣ್ಣ, ‘ಪುಷ್ಪ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಧನಂಜಯ ಕೂಡ ಆಗಮಿಸಿದ್ದರು. ಈ ವೇಳೆ ಚಿತ್ರತಂಡದಿಂದ ತಪ್ಪೊಂದು ನಡೆದಿತ್ತು.
ಅಲ್ಲು ಅರ್ಜುನ್ (Allu Arjun) ಟಾಲಿವುಡ್ನ ಸ್ಟಾರ್ ನಟ. ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರನ್ನು ಕಂಡರೆ ಇಷ್ಟಪಡುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇಂತಹ ಸ್ಟಾರ್ಡಮ್ ಇರುವ ನಟ ಇಂದು (ಡಿಸೆಂಬರ್ 15) ಕನ್ನಡ ಮಾಧ್ಯಮಗಳ ಎದುರು ಕ್ಷಮೆ ಕೇಳಿದ್ದಾರೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ, ಆಂಧ್ರ ಪ್ರದೇಶದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಆಗಿದ್ದೇನು? ಅಲ್ಲು ಅರ್ಜುನ್ ಮಾಡಿದ ತಪ್ಪೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಅಲ್ಲು ಅರ್ಜುನ್ ‘ಪುಷ್ಪ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ರಾಷ್ಟ್ರದ ಪ್ರಮುಖ ರಾಜ್ಯಗಳಿಗೆ ಅವರು ಪ್ರಯಾಣ ಬೆಳೆಸುತ್ತಿದ್ದಾರೆ. ಹೈದರಾಬಾದ್ನಲ್ಲಿ ಗ್ರ್ಯಾಂಡ್ ಆಗಿ ಪ್ರೀ-ರಿಲೀಸ್ ಕಾರ್ಯಕ್ರಮ ನಡೆದಿತ್ತು. ಚೆನ್ನೈನಲ್ಲೂ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಲಾಗಿತ್ತು. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ವೇಳೆ ಅಲ್ಲು ಅರ್ಜುನ್, ನಾಯಕಿ ರಶ್ಮಿಕಾ ಮಂದಣ್ಣ, ‘ಪುಷ್ಪ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಧನಂಜಯ ಕೂಡ ಆಗಮಿಸಿದ್ದರು. ಈ ವೇಳೆ ಚಿತ್ರತಂಡದಿಂದ ತಪ್ಪೊಂದು ನಡೆದಿತ್ತು.
ಬೆಳಗ್ಗೆ 11.15ಕ್ಕೆ ‘ಪುಷ್ಪ’ ತಂಡ ಸುದ್ದಿಗೋಷ್ಠಿ ಕರೆದಿತ್ತು. ಆದರೆ, ಇಡೀ ಟೀಂ ಬಂದಿದ್ದು, 1.15ಕ್ಕೆ! ಎರಡು ಗಂಟೆ ತಡವಾಗಿ ಚಿತ್ರತಂಡ ಆಗಮಿಸಿತ್ತು. ಅಷ್ಟೇ ಅಲ್ಲ, ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೂಡ ಕೇಳಲಿಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದವು. ‘ಸುದ್ದಿಗೋಷ್ಠಿ ಕರೆದಿದ್ದು 11.15ಕ್ಕೆ. ಇಷ್ಟು ವಿಳಂಬವಾಗಿ ಬಂದಿದ್ದೇಕೆ? ನಿಮಗೆ ಸಾರಿ ಕೇಳಬೇಕು ಎಂದು ಅನಿಸಲಿಲ್ಲವೇ’ ಎಂದು ಕೇಳಲಾಯಿತು. ಕನ್ನಡದಲ್ಲಿ ಕೇಳಲಾದ ಪ್ರಶ್ನೆಯನ್ನು ರಶ್ಮಿಕಾ ಅವರು ಅಲ್ಲು ಅರ್ಜುನ್ಗೆ ವಿವರಿಸಿದರು.
ಮೈಕ್ ತೆಗೆದುಕೊಂಡ ಅಲ್ಲು ಅರ್ಜುನ್ ಕ್ಷಮೆ ಯಾಚಿಸಿದರು. ‘ನಾನು ಪ್ರೈವೇಟ್ ಜೆಟ್ನಲ್ಲಿ ಬಂದೆ. ಫಾಗ್ ಇದ್ದಿದ್ದರಿಂದ ಅದು ಟೇಕ್ಆಫ್ ಆಗೋಕೆ ವಿಳಂಬವಾಯಿತು. ಕಾರ್ಯಕ್ರಮ ರೀ ಶ್ಯೆಡ್ಯೂಲ್ ಆಗಿದ್ದು ನನಗೆ ಗೊತ್ತಿರಲಿಲ್ಲ. ಅದನ್ನು ಈಗ ಹೇಳುತ್ತಿದ್ದಾರೆ. ತಡವಾಗಿ ಬಂದಿದ್ದಕ್ಕೆ ನಾನು ಎಲ್ಲರ ಬಳಿ ಕ್ಷಮೆ ಕೇಳುತ್ತಿದ್ದೇನೆ’ ಎಂದರು ಅವರು. ಈ ಮೂಲಕ ಎಲ್ಲ ಗೊಂದಲಕ್ಕೆ ತೆರೆ ಎಳೆದರು.
ಇದನ್ನೂ ಓದಿ: ಯಾರು ಹೇಳಿದ್ದು ರಶ್ಮಿಕಾ ಮಂದಣ್ಣಗೆ ಕನ್ನಡ ಮರೆತುಹೋಗಿದೆ ಅಂತ, ಅವರು ಕನ್ನಡದಲ್ಲಿ ಚೆನ್ನಾಗಿ ಮಾತಾಡುತ್ತಾರೆ!
‘ಈಗ ನಾನು ಪುನೀತ್ ಮನೆಗೆ ಹೋಗುತ್ತಿಲ್ಲ’; ಕಾರಣ ಸಮೇತ ವಿವರಿಸಿದ ಅಲ್ಲು ಅರ್ಜುನ್
Published On - 5:25 pm, Wed, 15 December 21