ಯಾರು ಹೇಳಿದ್ದು ರಶ್ಮಿಕಾ ಮಂದಣ್ಣಗೆ ಕನ್ನಡ ಮರೆತುಹೋಗಿದೆ ಅಂತ, ಅವರು ಕನ್ನಡದಲ್ಲಿ ಚೆನ್ನಾಗಿ ಮಾತಾಡುತ್ತಾರೆ!

ಎಲ್ಲರಿಗೂ ನಮಸ್ಕಾರ ಅಂತ ಮಾತು ಆರಂಭಿಸಿದ ರಶ್ಮಿಕಾ, ಬೆಂಗಳೂರಿಗೆ ಬಂದು ಕನ್ನಡದವರ ಜೊತೆ ಮಾತಾಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದರು.

TV9kannada Web Team

| Edited By: Arun Belly

Dec 15, 2021 | 4:17 PM

ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ ತೆಲುಗು ಸಿನಿಮಾ ‘ಪುಷ್ಪ’ ಶುಕ್ರವಾರ ತೆರೆ ಕಾಣುತ್ತಿದೆ. ಈ ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಲಾಗಿದೆ. ಚಿತ್ರತಂಡವು ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಸುದ್ದಿಗೋಷ್ಟಿಗಳನ್ನು ನಡೆಸುತ್ತಿದೆ. ಸದರಿ ತಂಡವು ಬುಧವಾರ ಬೆಂಗಳೂರಿನಲ್ಲಿತ್ತು ಅದರ ಜೊತೆ ರಶ್ಮಿಕಾ ಕೂಡ ಆಗಮಿಸಿದ್ದರು. ನಿಮಗೆ ಗೊತ್ತಿರಬಹುದು, ಈ ಚಿತ್ರಕ್ಕಾಗಿ ರಶ್ಮಿಕಾ ಕಳೆದ ಒಂದೂವರೆ ವರ್ಷದಿಂದ ಬ್ಯೂಸಿಯಾಗಿದ್ದರು. ಈ ಸಂಗತಿಯನ್ನು ನಂತರ ಚರ್ಚಿಸೋಣ. ಬುಧವಾರದ ಪ್ರೆಸ್ಸರ್ನಲ್ಲಿ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ಅವರು ಕನ್ನಡದಲ್ಲಿ ಮಾತಾಡಿದರು. ಸುದ್ದಿಗೋಷ್ಟಿಗಳಲ್ಲಿ ಸಾಮಾನ್ಯವಾಗಿ ರಶ್ಮಿಕಾ ಇಂಗ್ಲಿಷ್ ಭಾಷೆಯಲ್ಲಿ ಮಾತಾಡುತ್ತಾರೆ.

ಎಲ್ಲರಿಗೂ ನಮಸ್ಕಾರ ಅಂತ ಮಾತು ಆರಂಭಿಸಿದ ರಶ್ಮಿಕಾ, ಬೆಂಗಳೂರಿಗೆ ಬಂದು ಕನ್ನಡದವರ ಜೊತೆ ಮಾತಾಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದರು. ಬಹಳ ದಿನಗಳಿಂದ ಮನೆಯಿಂದ ಹೊರಗಿರುವುದಾಗಿ ಅವರು ಇಲ್ಲಿ ಪುನರುಚ್ಛರಿಸಿದರು.

ಹೈದರಾಬಾದಿನಲ್ಲಿ ನಡೆದ ಪ್ರೆಸ್​ಮೀಟ್​​​​ ನಲ್ಲಿ ಅವರು ತನಗೆ ಮನೆ ಮರೆತು ಹೋಗಿದೆ, ತಂದೆತಾಯಿಗಳು ತನ್ನನ್ನು ಮನೆಯಿಂದ ಹೊರಹಾಕಿದ್ದಾರೆನೋ ಅಂತ ಭಾಸವಾಗುತ್ತದೆ ಅಂತ ಹೇಳಿದ್ದರು. ಮತ್ತೂ ಮುಂದುವರಿದು ಮಾತಾಡಿದ್ದ ರಶ್ಮಿಕಾ, ‘ಪುಷ್ಪ’ ಚಿತ್ರದ ಸುಕುಮಾರ್ ಅವರಿಗೆ ತನ್ನನ್ನು ದತ್ತು ತೆಗೆದುಕೊಂಡು ಬಿಡುವಂತೆ ಹೇಳಿ ಅದಕ್ಕೆ ಬೇಕಾದ ಫಾರ್ಮ್ ಗಳನ್ನು ತಾನೇ ತಂದುಕೊಡುವುದಾಗಿ ಹೇಳಿದ್ದರು!

‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಶ್ರೀವಲ್ಲಿಯ ಪಾತ್ರ ಮಾಡಿದ್ದಾರೆ. ಅಲ್ಲು ಅರ್ಜುನ್ ಅವರೊಂದಿಗೆ ನಟಿಸುವುದು ಅವರ ಕನಸಾಗಿತ್ತಂತೆ. ರಶ್ಮಿಕಾ ಅಭಿನಯದ ‘ಗೀತ ಗೋವಿಂದಂ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಅಲ್ಲು ಅರ್ಜುನ್ ಆಗಮಿಸಿದಾಗ ಅವರನ್ನು ಮೊದಲ ಬಾರಿಗೆ ನೋಡಿದ ಕನ್ನಡತಿಗೆ ಅವರ ಜೊತೆ ನಟಿಸಬೇಕೆಂಬ ಆಸೆ ಹುಟ್ಟಿಕೊಂಡಿತ್ತಂತೆ. ‘ಪುಷ್ಪ’ ಚಿತ್ರದಲ್ಲಿ ಒಟ್ಟಿಗೆ ನಟಿಸುವದರೊಂದಿಗೆ ಆ ಆಸೆ ನೆರವೇರಿದೆ ಎಂದು ಅವರು ಹೈದರಾಬಾದ್ನಲ್ಲಿ ಹೇಳಿದ್ದರು.

ಇದನ್ನೂ ಓದಿ:  ಫೇಸ್‌ಬುಕ್‌ನಲ್ಲಿ ಯುವತಿ ಬಗ್ಗೆ ಮಹಿಳೆಯಿಂದ ಅವಹೇಳನ ವಿಡಿಯೋ; ಯುವತಿ ಆತ್ಮಹತ್ಯೆ ಯತ್ನ, ಸಾಕ್ಷ್ಯ ನೀಡುವಂತೆ ನೋಟಿಸ್ ಜಾರಿ

Follow us on

Click on your DTH Provider to Add TV9 Kannada