ಸಹೋದರನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಭೇಷ್ ಎಂದರು ಸಿದ್ದರಾಮಯ್ಯ

ಚನ್ನರಾಜ ಗೆಲುವು ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿ ಕೆ ಶಿವಕುಮಾರ ಅವರ ರಣತಂತ್ರದ ಫಲ ಅಂತಲೂ ಹೇಳಲಾಗುತ್ತಿದೆ. ಸಹೋದರನ ಪರ ಪ್ರಚಾರವನ್ನು ಲಕ್ಷ್ಮಿ ಆದ್ಭುತವಾಗಿ ಮಾಡಿದರು.

TV9kannada Web Team

| Edited By: Arun Belly

Dec 15, 2021 | 7:05 PM

ಬೆಳಗಾವಿಯ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೆಮ್ಮೆಯಿಂದ ಬೀಗುತ್ತಿದ್ದ್ದಾರೆ. ರಾಜ್ಯ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಅವರು ತಮ್ಮ ಸಹೋದರ ಚೆನ್ನರಾಜ ಅವರನ್ನು ಗೆಲ್ಲ್ಲಿಸುವಲ್ಲಿ ಅವರು ಪಟ್ಟ ಶ್ರಮ ಫಲ ನೀಡಿದೆ. ಚೆನ್ನರಾಜ ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ ಬೆಳಗಾವಿಯ ಬಿಜೆಪಿ ನಾಯಕರಿಗೆ ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ತೀವ್ರ ಮುಖಭಂಗವನ್ನುಂಟು ಮಾಡಿದ್ದಾರೆ. ಬುಧವಾರ ತಮ್ಮ ಸಹೋದರನನ್ನು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಗೆ ಕರದೊಯ್ದ ಲಕ್ಷ್ಮಿ ಅವರು ಕಾಂಗ್ರೆಸ್ ಹಿರಿಯ ನಾಯಕನಿಗೆ ಹೂಗುಚ್ಛ ನೀಡಿ, ನಂತರ ಅವರ ಕಾಲುಮುಟ್ಟಿ ನಮಸ್ಕರಿಸಿದರು. ಸಿದ್ದರಾಮಯ್ಯನವರು, ಲಕ್ಷ್ಮಿಯವರ ತಲೆ ನೇವರಿಸಿ ಶಹಬ್ಭಾಶ್ ಅಂತ ಹೊಗಳಿದರು.

ಅದಾದ ಮೇಲೆ ಚನ್ನರಾಜ ಅವರು ಕೆ ಪಿ ಸಿ ಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರಿಗೆ ಬೊಕೆ ನೀಡಿ ಕಾಲಿಗೆ ಬಿದ್ದರು. ಈ ಸಂದರ್ಭದಲ್ಲಿ, ಮಾಜಿ ಸಚಿವರಾದ ಜಿ ಪರಮೇಶ್ವರ್, ಎಸ್ ಅರ್ ಪಾಟೀಲ, ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಸಲೀಂ ಆಹ್ಮದ್, ಜೇವರ್ಗಿ ಶಾಸಕ ಅಜಯ ಸಿಂಗ್ ಮೊದಲಾದವರು ಹಾಜರಿದ್ದರು.

ಚನ್ನರಾಜ ಗೆಲುವು ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿ ಕೆ ಶಿವಕುಮಾರ ಅವರ ರಣತಂತ್ರದ ಫಲ ಅಂತಲೂ ಹೇಳಲಾಗುತ್ತಿದೆ. ಸಹೋದರನ ಪರ ಪ್ರಚಾರವನ್ನು ಲಕ್ಷ್ಮಿ ಆದ್ಭುತವಾಗಿ ಮಾಡಿದರು. ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ಮತ್ತು ಅಭ್ಯರ್ಥಿಯ ಬಗ್ಗೆ ಏನೆಲ್ಲ ಮಾತಾಡುತ್ತಿದ್ದಾರೆ ಮುಂತಾದ ವಿಷಯಗಳನ್ನು ಅವರು ಗಮನಿಸುವ ಗೋಜಿಗೂ ಹೋಗಲಿಲ್ಲ.

ಮಾಧ್ಯಮದವರು ಬಿಜೆಪಿ ನಾಯಕರು ಹೇಳಿದ್ದನ್ನು ಗಮನಕ್ಕೆ ತಂದರೂ ಲಕ್ಷ್ಮಿ ಪ್ರತಿಕ್ರಿಯಿಸಲಿಲ್ಲ. ಒಬ್ಬ ಪ್ರಬುದ್ಧ ರಾಜಕಾರಣಿಯಂತೆ ಪ್ರಚಾರ ನಡೆಸಿ ತನ್ನ ತಮ್ಮನನ್ನು ಗೆಲ್ಲಿಸಿದರು.

ಇದನ್ನೂ ಓದಿ:   ನಟ ಧ್ರುವ ಸರ್ಜಾರಿಂದ ಉಧೋ ಉಧೋ ಹುಲಿಗೆಮ್ಮ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ

Follow us on

Click on your DTH Provider to Add TV9 Kannada