AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಅಪ್ಪು ಕುಟುಂಬದವರನ್ನು ಭೇಟಿ ಮಾಡಲೆಂದೇ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತೇನೆ: ಅಲ್ಲು ಅರ್ಜುನ್

Puneeth Rajkumar: ಅಪ್ಪು ಕುಟುಂಬದವರನ್ನು ಭೇಟಿ ಮಾಡಲೆಂದೇ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತೇನೆ: ಅಲ್ಲು ಅರ್ಜುನ್

TV9 Web
| Updated By: shivaprasad.hs|

Updated on:Dec 15, 2021 | 3:59 PM

Share

Allu Arjun: ಟಾಲಿವುಡ್ ನಟ ಅಲ್ಲು ಅರ್ಜುನ್ ‘ಪುಷ್ಪ: ದಿ ರೈಸ್’ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಅವರು ನಟ ಪುನೀತ್ ರಾಜ್​ಕುಮಾರ್ ಕುರಿತು ಮಾತನಾಡಿದ್ದಾರೆ.

ಬೆಂಗಳೂರು: ‘ಪುಷ್ಪ: ದಿ ರೈಸ್’ (Pushpa The Rise) ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ನಟ ಅಲ್ಲು ಅರ್ಜುನ್ (Allu Arjun), ನಟಿ ರಶ್ಮಿಕಾ ಮಂದಣ್ಣ (Rashmika Mandanna), ಧನಂಜಯ್ (Dhananjay) ಮೊದಲಾದವರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಲು ಅರ್ಜುನ್ ಚಿತ್ರದ ಕುರಿತು ತಿಳಿಸಿದರು. ಅಂತಿಮವಾಗಿ ಅವರು ಪುನೀತ್ ರಾಜ್​ಕುಮಾರ್ (Puneeth Rajkumar) ಕುರಿತು ಮಾತನಾಡಿ, ನೆನಪುಗಳನ್ನು ಹಂಚಿಕೊಂಡರು. ಇದೇ ವೇಳೆ ಅವರು ಪುನೀತ್ ಕುಟುಂಬವನ್ನು ಭೇಟಿ ಮಾಡುವ ಕುರಿತು ತಿಳಿಸಿದರು.

‘‘ಪುಷ್ಪ ಚಿತ್ರದ ಕಾರ್ಯದೊತ್ತಡದಿಂದ ಪುನೀತ್ ರಾಜ್​ಕುಮಾರ್ ಕುಟುಂಬವನ್ನು ಭೇಟಿ ಮಾಡಲು ಅವಕಾಶವಾಗಲಿಲ್ಲ. ಚಿತ್ರದ ಪ್ರಚಾರಕ್ಕೆಂದು ಬಂದಾಗ ಅಪ್ಪು ಕುಟುಂಬವನ್ನು ಭೇಟಿಯಾಗುವುದೂ ಸರಿಯಲ್ಲ. ಆದ್ದರಿಂದ ‘ಪುಷ್ಪ’ ಬಿಡುಗಡೆಯ ನಂತರ ಪುನೀತ್ ಕುಟುಂಬವನ್ನು ಭೇಟಿ ಮಾಡಲೆಂದೇ ಬೆಂಗಳೂರಿಗೆ ಬರುತ್ತೇನೆ’’ ಎಂದು ಅಲ್ಲು ಅರ್ಜುನ್ ನುಡಿದಿದ್ದಾರೆ. ಆಗ ಅಭಿಮಾನಿಯೊಬ್ಬರು ‘ಸೂಪರ್’ ಎಂದು ಉದ್ಗರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಲ್ಲು ಅರ್ಜುಮ್ ‘ಇದು ಸೂಪರ್ ಅಲ್ಲ, ನನ್ನ ಕರ್ತವ್ಯ’ ಎಂದು ಹೇಳಿದರು.

‘ಪುಷ್ಪ’ ಚಿತ್ರ ಡಿಸೆಂಬರ್ 17ರಂದು ತೆರೆಗೆ ಬರಲಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಧನಂಜಯ್, ಫಹಾದ್ ಫಾಸಿಲ್ ಮೊದಲಾದ ತಾರೆಯರು ಬಣ್ಣಹಚ್ಚಿದ್ದಾರೆ.

ಇದನ್ನೂ ಓದಿ:

Puneeth Rajkumar: ಪುನೀತ್​ ಬಗ್ಗೆ ಅಲ್ಲು ಅರ್ಜುನ್​ ಭಾವುಕ ಮಾತು; ತೆಲುಗು ಸಿನಿಮಾ ವೇದಿಕೆಯಲ್ಲಿ ಮೌನಾಚರಣೆ

Pushpa: The Rise: ‘ಪುಷ್ಪ ಚಿತ್ರ ನಾಲ್ಕು ಸಿನಿಮಾಗಳಿಗೆ ಸರಿಸಮ’: ಅಲ್ಲು ಅರ್ಜುನ್ ಹೀಗೆ ಹೇಳಿದ್ದೇಕೆ?

Published on: Dec 15, 2021 03:59 PM