Puneeth Rajkumar: ಪುನೀತ್​ ಬಗ್ಗೆ ಅಲ್ಲು ಅರ್ಜುನ್​ ಭಾವುಕ ಮಾತು; ತೆಲುಗು ಸಿನಿಮಾ ವೇದಿಕೆಯಲ್ಲಿ ಮೌನಾಚರಣೆ

Puneeth Rajkumar: ಪುನೀತ್​ ಬಗ್ಗೆ ಅಲ್ಲು ಅರ್ಜುನ್​ ಭಾವುಕ ಮಾತು; ತೆಲುಗು ಸಿನಿಮಾ ವೇದಿಕೆಯಲ್ಲಿ ಮೌನಾಚರಣೆ
ಅಲ್ಲು ಅರ್ಜುನ್​, ಪುನೀತ್​ ರಾಜ್​ಕುಮಾರ್​

Allu Arjun: ‘ಪುಷ್ಪಕ ವಿಮಾನಂ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅಲ್ಲು ಅರ್ಜುನ್​ ಭಾಗವಹಿಸಿದ್ದರು. ಆಗ ವೇದಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಬಗ್ಗೆ ಅವರು ಭಾವುಕವಾಗಿ ಮಾತನಾಡಿದರು.

TV9kannada Web Team

| Edited By: Madan Kumar

Oct 31, 2021 | 12:52 PM


ಅಜಾತಶತ್ರು ರೀತಿಯಲ್ಲಿ ಬದುಕಿದ್ದವರು ಪುನೀತ್​ ರಾಜ್​ಕುಮಾರ್​. ಅಂಥವರನ್ನು ದೇವರು ಇಷ್ಟು ಬೇಗ ಕರೆದುಕೊಂಡಿದ್ದನ್ನು ಯಾರಿಂದಲೂ ಸಹಿಸಲಾಗುತ್ತಿಲ್ಲ. ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯಗಳಲ್ಲೂ ಪುನೀತ್​ಗೆ ಅಪಾರ ಅಭಿಮಾನಿಗಳಿದ್ದರು. ಪರಭಾಷೆಯ ಸಿನಿಮಾರಂಗದಲ್ಲಿ ಅವರು ಬಹಳಷ್ಟು ಸ್ನೇಹಿತರನ್ನು ಸಂಪಾದಿಸಿದ್ದರು. ಅಪ್ಪು ನಿಧನಕ್ಕೆ ಇಡೀ ತೆಲುಗು ಚಿತ್ರರಂಗ ಮರುಗಿದೆ. ಚಿರಂಜೀವಿ, ಜ್ಯೂ. ಎನ್​ಟಿಆರ್​, ವಿಕ್ಟರಿ ವೆಂಕಟೇಶ್​ ಮುಂತಾದ ಘಟಾನುಘಟಿ ಸ್ಟಾರ್​ ಕಲಾವಿದರೆಲ್ಲ ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ನಟ ಅಲ್ಲು ಅರ್ಜುನ್​ ಅವರು ಪುನೀತ್​ ಬಗ್ಗೆ ತೆಲುಗಿನ ಸಿನಿಮಾ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮಾತನಾಡಿದ್ದಾರೆ.

‘ಪುನೀತ್​ ರಾಜ್​ಕುಮಾರ್​ ಅವರು ನನಗೆ ಬಹಳ ಕಾಲದಿಂದ ಪರಿಚಯ. ನಮ್ಮ ಮನೆಗೆ ಬರುತ್ತಿದ್ದರು. ಎಷ್ಟೋ ಬಾರಿ ಜೊತೆಯಲ್ಲಿ ಕುಳಿತು ಊಟ ಮಾಡಿದ್ದೆವು. ನಮ್ಮಿಬ್ಬರ ನಡುವೆ ಪರಸ್ಪರ ಪ್ರೀತಿ-ವಿಶ್ವಾಸ ಇತ್ತು. ಒಂದು ಡ್ಯಾನ್ಸ್​ ಕಾರ್ಯಕ್ರಮದಲ್ಲಿ ನಾವು ಜಡ್ಜ್​ ಆಗಿದ್ದೆವು. ಯಾವಾಗ ಮಾತನಾಡಿದರೂ ಬೆಂಗಳೂರಿಗೆ ಬನ್ನಿ ಎಂದು ಕರೆಯುತ್ತಿದ್ದರು. ಆದರೆ ಇಂದು ಸಡನ್​ ಆಗಿ ಅವರು ಇಲ್ಲ ಎಂಬುದನ್ನು ನಂಬಲಾಗುತ್ತಿಲ್ಲ’ ಎಂದು ಅಲ್ಲು ಅರ್ಜುನ್​ ಹೇಳಿದ್ದಾರೆ.

‘ಮೊದಲ ಬಾರಿಗೆ ಈ ಸುದ್ದಿ ಕೇಳಿದಾಗ ತುಂಬ ಶಾಕ್​ ಆಯಿತು. ಬದುಕು ತೀರಾ ಅನಿಶ್ಚಿತ. ಒಂದು ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಬದುಕಿನಲ್ಲಿ ಯಾವಾಗಲೂ ಖುಷಿಯಾಗಿರಿ. ಎಂಥ ದೊಡ್ಡ ಸೂಪರ್​ ಸ್ಟಾರ್​ ಆಗಿದ್ದರು ಪುನೀತ್​ ರಾಜ್​ಕುಮಾರ್​. ತುಂಬ ಒಳ್ಳೆಯ ವ್ಯಕ್ತಿ. ಕನ್ನಡ ಚಿತ್ರರಂಗಕ್ಕಾಗಿ ಅವರು ತುಂಬ ಕೊಡುಗೆ ನೀಡಿದ್ದರು. ನಮ್ಮ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಆಗಿದ್ದರು’ ಎಂದು ಅಲ್ಲು ಅರ್ಜುನ್​ ಭಾವುಕರಾದರು.

ವಿಜಯ್​ ದೇವಕೊಂಡ ಸಹೋದರ ಆನಂದ್​ ದೇವರಕೊಂಡ ನಟನೆಯ ‘ಪುಷ್ಪಕ ವಿಮಾನಂ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅಲ್ಲು ಅರ್ಜುನ್​ ಭಾಗವಹಿಸಿದ್ದರು. ಆಗ ವೇದಿಕೆಯಲ್ಲಿ ಅಪ್ಪು ಬಗ್ಗೆ ಅವರು ಮಾತನಾಡಿದರು. ‘ಎಲ್ಲರೂ ಎರಡು ನಿಮಿಷ ಎದ್ದು ನಿಂತು ಪುನೀತ್​ ರಾಜ್​ಕುಮಾರ್​ ಅವರಿಗಾಗಿ ಮೌನಾಚರಣೆ ಮಾಡೋಣ’ ಎನ್ನುವ ಮೂಲಕ ಅಪ್ಪು ಆತ್ಮಕ್ಕೆ ಅವರು ಶಾಂತಿ ಕೋರಿದರು.

ಇದನ್ನೂ ಓದಿ:

Puneeth Rajkumar: ‘ಡಾ. ರಾಜ್​ ಸಮಾಧಿ ಮಣ್ಣನ್ನು ಫ್ಯಾನ್ಸ್​ ತೋಡಿದ್ದರು; ಅಂಥ ಸ್ಥಿತಿ ಪುನೀತ್​ಗೆ ಬರಬಾರದು’; ರಾಘಣ್ಣ ಮನವಿ

Puneeth Rajkumar Funeral: ಅಪ್ಪನ ಸಮಾಧಿಗೆ ಪುನೀತ್ ಪುತ್ರಿಯರಿಂದ ಪೂಜೆ; ಕಂಠೀರವ ಸ್ಟುಡಿಯೋದಲ್ಲಿ ಕಣ್ಣೀರ ವಿದಾಯ

Follow us on

Related Stories

Most Read Stories

Click on your DTH Provider to Add TV9 Kannada