Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಅಭಿಮಾನಿಗಳು ದುಡುಕಬೇಡಿ, ನಿಮ್ಮ ಕುಟುಂಬ ನೋಡಿಕೊಳ್ಳಿ: ಶಿವರಾಜ್ ಕುಮಾರ್ ಕಿವಿಮಾತು

Puneeth Rajkumar: ಅಭಿಮಾನಿಗಳು ದುಡುಕಬೇಡಿ, ನಿಮ್ಮ ಕುಟುಂಬ ನೋಡಿಕೊಳ್ಳಿ: ಶಿವರಾಜ್ ಕುಮಾರ್ ಕಿವಿಮಾತು

TV9 Web
| Updated By: shivaprasad.hs

Updated on:Oct 31, 2021 | 10:57 AM

Shiva Rajkumar: ಪುನೀತ್ ಅಗಲುವಿಕೆಯ ನೋವಿನಲ್ಲಿ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವ ಅಭಿಮಾನಿಗಳಿಗೆ ಶಿವರಾಜ್ ಕುಮಾರ್ ಕಿವಿಮಾತು ಹೇಳಿದ್ದಾರೆ. ನಿಮ್ಮ ಕುಟುಂಬಕ್ಕೆ ಅವಶ್ಯಕತೆ ಇದೆ. ನೋವನ್ನು ನುಂಗಿ ಬದುಕಬೇಕು ಎಂದು ಅವರು ನುಡಿದಿದ್ದಾರೆ.

ಪುನೀತ್ ರಾಜಕುಮಾರ್ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸಹಕಾರ ನೀಡಿದ ಅಭಿಮಾನಿಗಳು ಹಾಗೂ ಸರ್ಕಾರಕ್ಕೆ ಶಿವರಾಜ್ ಕುಮಾರ್ ಧನ್ಯವಾದ ಸಲ್ಲಿಸಿದ್ದಾರೆ. ಇದೇ ವೇಳೆ ಅವರು ಅಭಿಮಾನಿಗಳು ನೋವಿನಿಂದ ಆತ್ಮಹತ್ಯೆ ಮೊದಲಾದ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ್ದು, ದಯವಿಟ್ಟು ಯಾರೂ ಆ ರೀತಿ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ‘‘ಅಪ್ಪು ಇದ್ದಿದ್ದರೆ ಇದನ್ನು ಇಷ್ಟಪಡುತ್ತಿರಲಿಲ್ಲ. ಅಭಿಮಾನಿಗಳು ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ. ನಿಮ್ಮ ಸಹಾಯ  ಕುಟುಂಬಕ್ಕೆ ಬೇಕಾಗಿದೆ. ಖಂಡಿತಾ ನೋವಾಗುತ್ತದೆ, ಆದರೆ ಆ ನೋವನ್ನು ನುಂಗಿ ಬದುಕಬೇಕು. ನಾವು ಸಹಾ ಅದನ್ನೇ ಮಾಡುತ್ತಿದ್ದೇವೆ. ಕುಟುಂಬದ ಜೊತೆ ಇರಬೇಕಾದದ್ದು ನಮ್ಮ ಜವಾಬ್ದಾರಿ. ಬೇರೆ ರೀತಿ ಕೋಪ ತೋರಿಸಬೇಡಿ. ಅಪ್ಪು, ಅಪ್ಪಾಜಿ ಕೂಡ ಇದನ್ನೇ ಹೇಳುತ್ತಿದ್ದರು. ಏನೇ ಸಮಸ್ಯೆಗಳು ಎದುರಾದರೂ ಜೀವನ ನಡೆಯಲೇಬೇಕು. ಶೋ ಮಸ್ಟ್ ಗೋ ಆನ್’’ ಎಂದು ಶಿವರಾಜ್ ಕುಮಾರ್ ಸದಾಶಿವನಗರ ನಿವಾಸದ ಬಳಿ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ಅಭಿಮಾನಿಗಳಿಂದಲೇ ಅಪ್ಪು. ಆದಷ್ಟು ಬೇಗ ಪುನೀತ್ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಇದೇ ವೇಳೆ ಶಿವರಾಜ್ ಕುಮಾರ್ ನುಡಿದಿದ್ದಾರೆ.

ಇದನ್ನೂ ಓದಿ:

Puneeth Rajkumar: ಎಂದೂ ಮರೆಯಾಗದ ಬೆಟ್ಟದ ಹೂವು; ಕಾಫಿನಾಡ ದಟ್ಟಕಾನನದಲ್ಲಿ ಪುನೀತ್ ಹೆಜ್ಜೆ ಗುರುತುಗಳು

Puneeth Rajkumar: ನನ್ನ ಮಗುವನ್ನೇ ಕಳೆದುಕೊಂಡಂತೆ ಅನ್ನಿಸುತ್ತಿದೆ; ಕಂಬನಿ ಮಿಡಿದ ಶಿವರಾಜ್ ಕುಮಾರ್

Published on: Oct 31, 2021 10:52 AM