AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushpa: The Rise: ‘ಪುಷ್ಪ ಚಿತ್ರ ನಾಲ್ಕು ಸಿನಿಮಾಗಳಿಗೆ ಸರಿಸಮ’: ಅಲ್ಲು ಅರ್ಜುನ್ ಹೀಗೆ ಹೇಳಿದ್ದೇಕೆ?

Allu Arjun: ನಟ ಅಲ್ಲು ಅರ್ಜುನ್ ‘ಪುಷ್ಪ’ ಚಿತ್ರದ ಕುರಿತು ಹಲವು ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಕ್ಯಾನ್ವಾಸ್, ಚಿತ್ರೀಕರಣದ ಸಮಯದಲ್ಲಿ ಎದುರಾದ ಸಂಕಷ್ಟ, ಪ್ಯಾನ್ ಇಂಡಿಯಾ ಸಿನಿಮಾವಾಗಿ ಬದಲಾದ ಪುಷ್ಪ.. ಹೀಗೆ ಹಲವು ವಿಚಾರಗಳು ಇಲ್ಲಿವೆ.

Pushpa: The Rise: ‘ಪುಷ್ಪ ಚಿತ್ರ ನಾಲ್ಕು ಸಿನಿಮಾಗಳಿಗೆ ಸರಿಸಮ’: ಅಲ್ಲು ಅರ್ಜುನ್ ಹೀಗೆ ಹೇಳಿದ್ದೇಕೆ?
‘ಪುಷ್ಪ: ದಿ ರೈಸ್’ ಚಿತ್ರದಲ್ಲಿಅಲ್ಲು ಅರ್ಜುನ್
TV9 Web
| Updated By: shivaprasad.hs|

Updated on: Dec 15, 2021 | 8:21 AM

Share

ಅಲ್ಲು ಅರ್ಜುನ್ ನಟನೆಯ ‘ಪುಷ್ಪ: ದಿ ರೈಸ್’ (Pushpa: The Rise) ಚಿತ್ರ ಈಗಾಗಲೇ ಸಿನಿಪ್ರಿಯರ ಕುತೂಹಲ ಕೆರಳಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ (Allu Arjun) ಪಾತ್ರ ಕುತೂಹಲ ಹುಟ್ಟಿಸಿದ್ದು, ಅವರು ರಕ್ತ ಚಂದನವನ್ನು ಕಳ್ಳಸಾಗಣೆ ಮಾಡುವ ಲಾರಿ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna), ಫಹಾದ್ ಫಾಸಿಲ್ (Fahad Fassil), ಧನಂಜಯ (Dhananjaya) ಸೇರಿದಂತೆ ಖ್ಯಾತನಾಮರು ಬಣ್ಣಹಚ್ಚಿದ್ದಾರೆ. ಅಲ್ಲದೇ ಸಮಂತಾ (Samantha) ಕೂಡ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ಚಿತ್ರದ ಕಾವು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಅಲ್ಲು ಅರ್ಜುನ್, ಸುಮಾರು 200 ದಿನಗಳ ಕಾಲ ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ಕಾಡುಗಳಲ್ಲಿ ಪ್ರಧಾನವಾಗಿ ಚಿತ್ರೀಕರಣಗೊಂಡಿರುವ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದರು.

“ಒಂದು ದಶಕದ ನಂತರ ನಿರ್ದೇಶಕ ಸುಕುಮಾರ್ ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಬಹಳ ಸಮಯದಿಂದ ನಮ್ಮಿಬ್ಬರ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ಬರುವುದು ಯಾವಾಗ ಎಂದು ಅವರನ್ನು ಕೇಳುತ್ತಿದ್ದೆ. ಆದರೆ ಸುಕುಮಾರ್ ಅವರಿಗೆ ನಮ್ಮೀರ್ವರ ಕಾಂಬಿನೇಷನ್​ನಲ್ಲಿ ಮೂಡಿಬರುವ ಚಿತ್ರದ ಕುರಿತು ಸ್ಪಷ್ಟತೆ ಇತ್ತು. ಅದು ದೊಡ್ಡ ಮಟ್ಟದಲ್ಲಿ ತಯಾರಾಗಬೇಕು ಎಂಬುದು ಅವರ ಬಯಕೆಯಾಗಿತ್ತು. ಈ ಪರಿಕಲ್ಪನೆಯಿಂದ ಪುಷ್ಪ ಚಿತ್ರ ಮೊದಲ್ಗೊಂಡಿತು. ಇದು ನನ್ನ ವೃತ್ತಿ ಜೀವನದ ಅತ್ಯಂತ ಸವಾಲಿನ ಪ್ರಾಜೆಕ್ಟ್​​ಗಳಲ್ಲಿ ಒಂದು’’ ಎಂದು ಅಲ್ಲು ಅರ್ಜುನ್ ನುಡಿದಿದ್ದಾರೆ.

‘ಪುಷ್ಪ’ ನಾಲ್ಕು ಚಿತ್ರಗಳಿಗೆ ಸಮ: ಅಲ್ಲು ಅರ್ಜುನ್: ‘ಪುಷ್ಪ’ದಲ್ಲಿ ಕೆಲಸ ಮಾಡುವಾಗಿನ ಸವಾಲಿನ ಸಂಗತಿಗಳನ್ನು ವಿವರಿಸಿದ ಅಲ್ಲು ಅರ್ಜುನ್, “ಇದು ಸಂಪೂರ್ಣವಾಗಿ ಅರಣ್ಯದಲ್ಲಿ ಚಿತ್ರೀಕರಿಸಲಾದ ಚಿತ್ರ. ಅಲ್ಲದೇ ಹೊರಾಂಗಣದಲ್ಲಿಯೇ ಚಿತ್ರೀಕರಿಸಲಾಗಿದೆ. ಕೊವಿಡ್ ಸಂದರ್ಭದಲ್ಲಿ ನಾವು ಶೂಟಿಂಗ್ ಮಾಡಬೇಕಾಯಿತು. ಒಂದು ಹಂತದಲ್ಲಿ ನಮ್ಮ ತಂಡದ ಹಲವರಿಗೆ ಕೊವಿಡ್ ಪಾಸಿಟಿವ್ ವರದಿ ಬಂದಿತು. ಆಗ ಶೂಟಿಂಗ್ ರದ್ದು ಮಾಡಬೇಕಾಯಿತು. ಆದರೆ ನಾವು ಒಂದೆರಡು ತಿಂಗಳ ನಂತರ ಸೆಟ್‌ಗೆ ಹಿಂತಿರುಗಿ, ಡೇಟ್ ಹೊಂದಿಸಿ ಶೂಟ್ ಮಾಡಿದೆವು’’ ಎಂದಿದ್ದಾರೆ.

ಸಿನಿಮಾದ ಕ್ಯಾನ್ವಾಸ್ ಬಗ್ಗೆ ಹಾಗೂ ಚಿತ್ರೀಕರಣದ ಸವಾಲಿನ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್, ‘ಪುಷ್ಪ’ ಮಾಡುವಾಗ ಈ ಚಿತ್ರ ನಾಲ್ಕು ಚಿತ್ರಕ್ಕೆ ಸಮ ಎಂದು ಅನ್ನಿಸಿತು ಎಂದಿದ್ದಾರೆ. “ನಾವು ಎರಡನೇ ಕೊವಿಡ್ ಅಲೆಯ ಸಮಯದಲ್ಲಿ ಶೂಟಿಂಗ್‌ನ ಪ್ರಮುಖ ಭಾಗವನ್ನು ಮಾಡಿದ್ದರಿಂದ, ನಾವು ಸೆಟ್‌ಗಳಲ್ಲಿ ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕಾಗಿತ್ತು. ಚಿತ್ರೀಕರಣದ ಸ್ಥಳಕ್ಕೆ ಕಾರಿನಲ್ಲಿ ಮೂರಕ್ಕಿಂತ ಹೆಚ್ಚು ಜನರು ಪ್ರಯಾಣಿಸಲು ಅವಕಾಶವಿರಲಿಲ್ಲ. ಹೀಗಾಗಿಯೇ ಚಿತ್ರೀಕರಣದ ಸಮಯದಲ್ಲಿ ನಾವು 400 ಕ್ಕೂ ಹೆಚ್ಚು ಕಾರುಗಳನ್ನು ಬಳಸಬೇಕಾಯ್ತು. ಕಾಡಿನಲ್ಲಿ ಶೂಟಿಂಗ್ ಎಂದರೆ ನಾವು ನೈಸರ್ಗಿಕ ಬೆಳಕನ್ನು ಅವಲಂಬಿಸಬೇಕಾಗಿತ್ತು. ಆದರೆ ಹೆಚ್ಚಿನ ಸಂಜೆ 4.30 ರ ಹೊತ್ತಿಗೆ ಕತ್ತಲೆಯಾಗುತ್ತಿತ್ತು. ಆದ್ದರಿಂದ, ನಾವು ನಮ್ಮ ಚಿತ್ರೀಕರಣವನ್ನು ಸರಿಯಾಗಿ ಪ್ಲಾನ್ ಮಾಡಬೇಕಾಗಿತ್ತು. ನನ್ನ ಕೇಶ ವಿನ್ಯಾಸ ಮತ್ತು ಮೇಕ್ಅಪ್​ಗೆ ಎರಡು ಗಂಟೆಗಳು ಬೇಕಾಗುವ ಕಾರಣ ನಾನು ಬಹಳ ಮೊದಲೇ ಸೆಟ್​ನಲ್ಲಿ ಇರಬೇಕಾಗಿತ್ತು’’ ಎಂದು ಅರ್ಜುನ್ ವಿವರಿಸಿದ್ದಾರೆ.

‘ಪುಷ್ಪ’ದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಮಾದರಿಯ ಸಿನಿಮಾಗಳಿಗೆ ಪರಿಚಿತವಾಗಲಿದ್ದಾರೆ. ಈ ಕುರಿತು ಮಾತನಾಡಿದ ಅವರು, ಇದು ಕೆಲ ಕಾಲದಿಂದ ತನ್ನ ಮನಸ್ಸಿನಲ್ಲಿತ್ತು ಎಂದು ಹೇಳಿದ್ದಾರೆ. “ನಾನು ಪ್ಯಾನ್-ಇಂಡಿಯಾಕ್ಕೆ ಹೋಗಲು ಸರಿಯಾದ ಕಥೆಗಾಗಿ ಕಾಯುತ್ತಿದ್ದೆ. ಆಂಧ್ರ ಮತ್ತು ತಮಿಳುನಾಡಿನ ಗಡಿಭಾಗವಾದ ತಿರುಪತಿಯ ಕಾಡುಗಳಲ್ಲಿ ‘ಪುಷ್ಪ’ದ ಕಥೆ ನಡೆಯುತ್ತದೆ. ಆದ್ದರಿಂದ ತಮಿಳಿನಲ್ಲೂ ಬಿಡುಗಡೆ ಮಾಡುವುದು ಅರ್ಥಪೂರ್ಣ ಎಂದು ನಾವು ಭಾವಿಸಿದೆವು. ಕೊನೆಗೆ ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡುವ ಯೋಜನೆ ಜಾರಿಗೊಂಡಿತು’ ಎಂದು ಹೇಳಿದರು.

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತವಿದೆ. ಇದರಲ್ಲಿ ಫಹದ್ ಫಾಸಿಲ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಶುಕ್ರವಾರ (ಡಿಸೆಂಬರ್ 17) ಚಿತ್ರಮಂದಿರಗಳಲ್ಲಿ ‘ಪುಷ್ಪ’ ಬಿಡುಗಡೆಯಾಗುತ್ತಿದೆ. ಮೂಲತಃ ತೆಲುಗಿನಲ್ಲಿ ತಯಾರಾದ ಚಿತ್ರವನ್ನು ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:

Akhanda: ಅಪರೂಪದ ದಾಖಲೆ ಬರೆದ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ’; ಏನದು?

ನಾಲ್ಕೇ ದಿನಕ್ಕೆ ಹನಿಮೂನ್​ ಮುಗಿಸಿ ವಾಪಸ್​ ಬಂದ ವಿಕ್ಕಿ ಕೌಶಲ್​-ಕತ್ರಿನಾ ಕೈಫ್​; ಕಾರಣ ಏನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ