ಶಿವರಾಜ್ ಕೆ.ಆರ್ ಪೇಟೆ ಮೊದಲ ಸಂಬಳ ಎಷ್ಟು?; ಗೂಗಲ್​ನಲ್ಲಿ ಜನರು ಹುಡುಕಾಡಿದ ಪ್ರಶ್ನೆಗಳಿಗೆ ಸ್ವತಃ ಅವರೇ ಉತ್ತರಿಸಿದ್ದಾರೆ! ವಿಡಿಯೋ ನೋಡಿ

Shivaraj KR Pete: ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಚಿತ್ರಗಳಿಂದ ಶಿವರಾಜ್ ಕೆ.ಆರ್ ಪೇಟೆ ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರ ‘ಧಮಾಕ’ ಟೀಸರ್ ಬಿಡುಗಡೆಯಾಗಿ, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅವರ ವಿಶೇಷ ಸಂದರ್ಶನ ಇಲ್ಲಿದೆ.

Follow us
TV9 Web
| Updated By: shivaprasad.hs

Updated on: Dec 15, 2021 | 9:41 AM

ಸ್ಯಾಂಡಲ್​ವುಡ್ ಹಾಸ್ಯನಟ ಶಿವರಾಜ್ ಕೆ.ಆರ್ ಪೇಟೆ (Shivaraj KR Pete) ಅಭಿನಯದ ‘ಧಮಾಕ’ (Dhamaka) ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದಕ್ಕೆ ಯೋಗರಾಜ್ ಭಟ್ (Yogaraj Bhat) ಧ್ವನಿ ನೀಡಿದ್ದರು. ಟೀಸರ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಶಿವರಾಜ್ ಕೆ.ಆರ್ ಪೇಟೆ ಟಿವಿ9ನೊಂದಿಗೆ ಮಾತನಾಡಿದ್ದು, ಹಲವು ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಟಿವಿ9ನೊಂದಿಗೆ ಮಾತನಾಡಿದ ಶಿವರಾಜ್ ಕೆ.ಆರ್ ಪೇಟೆ ವೈಯಕ್ತಿಯ ಜೀವನದ ಹಲವು ಅಚ್ಚರಿಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಗೂಗಲ್ ನಲ್ಲಿ ಅವರ ಕುರಿತು ಜನರು ಏನನ್ನು ಹುಡುಕಾಟ ಮಾಡಿದ್ದರೋ ಅಂತಹ ಪ್ರಶ್ನೆಗಳಿಗೆ ಸ್ವತಃ ಅವರೇ ಉತ್ತರಿಸಿದ್ದು, ಜನರ ಕುತೂಹಲ ತಣಿಸಿದ್ದಾರೆ. ಎಲ್ಲಾ ಪ್ರಶ್ನೆಗಳಿಗೆ ತಮಾಷೆಯಾಗಿಯೇ ಉತ್ತರಿಸಿದ ಶಿವರಾಜ್, ವಯಸ್ಸಿನ‌ ಕುರಿತು ಕೇಳಿದಾಗ ‘ಯಂಗ್ ಏಜ್’ ಎಂದು ಉತ್ತರಿಸಿದರು. ಶಿವರಾಜ್ ನೆಟ್ ವರ್ತ್ ಎಷ್ಟು? ಎಂಬುದನ್ನು ಜನರು ಹೆಚ್ಚಾಗಿ ಗೂಗಲ್‌ನಲ್ಲಿ ಹುಡುಕಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, ‘ಜನರು ಪ್ರೀತಿಯಿಂದ ಕೊಟ್ಟಷ್ಟು, ಪ್ರೀತಿಯಿಂದ ತೆಗೆದುಕೊಂಡಷ್ಟು’ ಎಂದು ಉತ್ತರಿಸಿದ್ದಾರೆ. ವಿದ್ಯಾಭ್ಯಾಸದ ಕುರಿತ ಪ್ರಶ್ನೆಗೆ ಸಮಾಜಶಾಸ್ತ್ರದಲ್ಲಿ ಪದವಿ ವ್ಯಾಸಂಗ ಆಗಿದೆ ಎಂದಿದ್ದಾರೆ. ಮೂಲ ಊರು ಕೆ.ಆರ್ ಪೇಟೆ. ಆದರೆ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಗೊರೂರಿನಲ್ಲಿ ಎಂದು ಊರಿನ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಹಳಷ್ಟು ಜನರಿಗೆ ಕುತೂಹಲವಿರುವುದು ಶಿವರಾಜ್ ಕೆ.ಆರ್ ಪೇಟೆ ಅವರು ಮೊದಲು ಯಾವ ಕೆಲಸ ಮಾಡುತ್ತಿದ್ದರು ಎಂಬ ಕುರಿತು. ಅದಕ್ಕೆ ಉತ್ತರಿಸಿದ ಅವರು, ಮೊದಲು ಮಾಡಿದ ಕೆಲಸ ನೆನಪಿಲ್ಲ. ಆದರೆ ಗಾರೆ ಕೆಲಸ, ಕಲ್ಲು ಪ್ಯಾಕಿಂಗ್, ಸಪ್ಲೈಯರ್ ಮೊದಲಾದ ಕೆಲಸಗಳನ್ನು ಮಾಡಿದ್ದೇನೆ ಎಂದಿದ್ದಾರೆ. ಅಲ್ಲದೇ ಮೊದಲ ಸಂಬಳದ ಕುರಿತು ಮಾಹಿತಿ ಹಂಚಿಕೊಂಡ ಅವರು, ಗಾರೆ ಕೆಲಸದಲ್ಲಿ‌ ದಿನಕ್ಕೆ 20 ರೂ ಗಳಿಸುತ್ತಿದ್ದೆ. ಅದು ಮೊದಲ ಗಳಿಕೆ ಎಂದಿದ್ದಾರೆ. ಈಗ ಜಾಸ್ತಿ ಕೊಡುತ್ತಾರೆ, ಆದರೆ ಆಗೆಲ್ಲಾ ಅಷ್ಟೇ ಇತ್ತು. ಆ ಸಂಬಳದಲ್ಲೇ ಉಳಿಸಿ ಯಾವಾಗ್ಲೋ ಒಂದು 12- 15 ರೂ ಹವಾಯಿ ಚಪ್ಪಲಿ ತಗೊಂಡಿದ್ದರೆ ವರ್ಷವಿಡೀ ಕಳೆಯುತ್ತಿದ್ದೆವು ಎಂದಿದ್ದಾರೆ. ಮೊದಲ ಸಿನಿಮಾ ಸ್ಯಾಲರಿ ಕುರಿತ ಪ್ರಶ್ನೆಗೆ ಶಿವರಾಜ್, ಚಂದ್ರಶೇಖರ್ ಸರ್ ಕೊಟ್ಟಷ್ಟು ಎಂದು ಉತ್ತರಿಸಿದ್ದಾರೆ.

ನೆಚ್ಚಿನ ನಟ ನರಸಿಂಹರಾಜು ಎಂದು ಉತ್ತರಿಸಿದ್ದಾರೆ. ಇಷ್ಟದ ಆಹಾರ ಉಪ್ಪೆಸರು, ಮುದ್ದೆ ಎಂದಿದ್ದಾರೆ. ಇದೇ ವೇಳೆ ಅವರು ನಾಟಿಕೋಳಿ ಸಾರು ಹಾಗೂ ಉಪ್ಲೆಸರನ್ನು ಮಂಡ್ಯ ಭಾಗದಲ್ಲಿ ಹೇಗೆ ವಿಶೇಷವಾಗಿ ತಯಾರಿಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಶಿವರಾಜ್ ಕೆ.ಆರ್ ಪೇಟೆ ಸಂದರ್ಶನದ ವಿಡಿಯೋ ಇಲ್ಲಿದೆ:

‘ಧಮಾಕ’ಗೆ ಲಕ್ಷ್ಮಿ ರಮೇಶ್ ಆಕ್ಷನ್ ಕಟ್ ಹೇಳಿದ್ದು, ಎಸ್‌.ಆರ್. ಮೀಡಿಯಾ ಪ್ರೊಡಕ್ಷನ್ಸ್‌ ಮತ್ತು ನಂದಿ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ನಯನಾ ಶರತ್, ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಪ್ರಕಾಶ್‌ ತುಂಬಿನಾಡ್, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ಮೊದಲಾದವರು ಬಣ್ಣಹಚ್ಚಿದ್ದಾರೆ.

ಇದನ್ನೂ ಓದಿ:

‘ಧಮಾಕ’ ಮಾಡಲು ಬಂದ ಶಿವರಾಜ್​ ಕೆ.ಆರ್​. ಪೇಟೆ; ಈ ಸಿನಿಮಾದ ವಿಶೇಷತೆ ಏನು?

ನಿಮಗೆ ಗೊತ್ತಾ? ಜಾಗತಿಕ ಸುಂದರಿ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ತೊಟ್ಟ ಗೌನನ್ನು ವಿನ್ಯಾಸಗೊಳಿಸಿದ್ದು ಒಬ್ಬ ತೃತೀಯ ಲಿಂಗಿ!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ