‘ಆಡಿಷನ್​ ವೇಳೆ ಸೊಂಟ, ಎದೆ ಸೈಜ್​ ಬಗ್ಗೆ ಪ್ರಶ್ನೆ ಕೇಳಲಾಗಿತ್ತು’; ನಟಿಯ ಶಾಕಿಂಗ್​ ಹೇಳಿಕೆ

‘ಆಡಿಷನ್​ ವೇಳೆ ಸೊಂಟ, ಎದೆ ಸೈಜ್​ ಬಗ್ಗೆ ಪ್ರಶ್ನೆ ಕೇಳಲಾಗಿತ್ತು’; ನಟಿಯ ಶಾಕಿಂಗ್​ ಹೇಳಿಕೆ
ಸುರ್ವೀನ್​

Surveen Chawla: ಕಿರುತೆರೆಯಲ್ಲಿ ಗುರುತಿಸಿಕೊಂಡವರು ಸುರ್ವೀನ್​. ಅವರು ನಂತರ ಕನ್ನಡ ಚಿತ್ರದ ಮೂಲಕ ಹಿರಿತೆರೆಗೆ ಕಾಲಿಟ್ಟರು. ನಂತರ ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದರು.

TV9kannada Web Team

| Edited By: Apurva Kumar Balegere

Dec 15, 2021 | 2:34 PM

ಕಾಸ್ಟಿಂಗ್​ ಕೌಚ್​ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಹಲವು ನಟಿಯರು ತಮಗಾದ ಕಹಿ ಘಟನೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅನೇಕ ಹೀರೋ, ನಿರ್ಮಾಪಕರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕನ್ನಡದ ‘ಪರಮೇಶ ಪಾನ್​ವಾಲಾ’ ಚಿತ್ರದಲ್ಲಿ ನಟಿಸಿದ ಸುರ್ವೀನ್​ ಚಾವ್ಲಾ ಕೂಡ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಬಗ್ಗೆ ಮಾತನಾಡೋಕೆ ಬಂದಾಗ ಚಿತ್ರತಂಡದವರು ಅವರ ಎದೆಯ ಸೈಜ್​ ಕೇಳಿದ್ದರಂತೆ. ಈ ಬಗ್ಗೆ ತುಂಬಾನೇ ಬೇಸರದಿಂದ ಸುರ್ವೀನ್​ ಮಾತನಾಡಿದ್ದಾರೆ.

ಕಿರುತೆರೆಯಲ್ಲಿ ಗುರುತಿಸಿಕೊಂಡವರು ಸುರ್ವೀನ್​. ಅವರು ನಂತರ ಕನ್ನಡ ಚಿತ್ರದ ಮೂಲಕ ಹಿರಿತೆರೆಗೆ ಕಾಲಿಟ್ಟರು. ನಂತರ ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ಕಳೆದ ಕೆಲ ವರ್ಷಗಳಿಂದ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ಈಗ ಅವರು ಸಂದರ್ಶನದಲ್ಲಿ ಮಾತನಾಡುತ್ತಾ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಕಾಸ್ಟಿಂಗ್​ ಕೌಚ್​ ಸಮಸ್ಯೆ ಹೆಚ್ಚಿತ್ತು ಎಂಬುದು ಅವರ ಅಭಿಪ್ರಾಯ.

‘ಸಿನಿಮಾ ಬಗ್ಗೆ ಮಾತನಾಡೋಕೆ ಚಿತ್ರತಂಡದವರು ಮುಂಬೈಗೆ ಬಂದಿದ್ದರು. ನಾನು ಆ ಸಂದರ್ಭದಲ್ಲಿ ಕಿರುತೆರೆಯಲ್ಲಿ ನಟಿಸುತ್ತಿದ್ದೆ. ಮಹಿಳೆಯರು ಹಲವು ವಿಚಾರಗಳಲ್ಲಿ ಪ್ರಶ್ನೆಗೆ ಒಳಪಡುತ್ತಾರೆ. ಆಡಿಷನ್​ ವೇಳೆ ದೇಹದ ತೂಕ, ಸೊಂಟದ ಸೈಜ್​, ಎದೆಯ ಅಳತೆ ಕೇಳಿದ್ದರು. ಈ ಮೂಲಕ ನನ್ನ ಮೇಲೆ ನನಗೆ ಅನುಮಾನ ಬರುವಂತೆ ಮಾಡಿದ್ದರು. ಮಹಿಳೆಯರನ್ನು ಅಳೆಯುವ ವಿಧಾನ ಇದಲ್ಲ’ ಎಂದಿದ್ದಾರೆ ಸುರ್ವೀನ್​. ಈ ಅನುಭವ ತಮ್ಮ ಮೊದಲ ಸಿನಿಮಾ ಮೀಟಿಂಗ್​ನಲ್ಲಿ ಆಗಿತ್ತು ಎಂದು ಅವರು ಹೇಳಿದ್ದಾರೆ. ಆ ಚಿತ್ರವನ್ನು ಅವರು ಒಪ್ಪಿಕೊಂಡಿದ್ದರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಅವರು ಮಾಹಿತಿ ನೀಡಿಲ್ಲ.

‘ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​ ಅತಿಯಾಗಿತ್ತು. ಆದರೆ, ಕಾಲ ಬದಲಾದಂತೆ ಇದು ಕಡಿಮೆ ಆಗಿದೆ. ಬಾಡಿ ಶೇಮಿಂಗ್​ ಮಾಡುವುದು ಕೂಡ ತಗ್ಗಿದೆ’ ಎಂದು ಅವರು ಸಂತಸ ಹೊರ ಹಾಕಿದ್ದಾರೆ. ಸುರ್ವೀನ್​ ಅವರು 2003ರಲ್ಲಿ ಕಿರುತೆರೆಗೆ ಕಾಲಿಟ್ಟರು. ಅದಾದ ಬಳಿಕ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2008ರಲ್ಲಿ ತೆರೆಗೆ ಬಂದ ಶಿವರಾಜ್​ಕುಮಾರ್​ ನಟನೆಯ ‘ಪರಮೇಶ ಪಾನ್​ವಾಲಾ’ ಅವರ ಮೊದಲ ಚಿತ್ರ. ಇದಾದ ಬಳಿಕ ಹಿಂದಿ, ತಮಿಳು ಪಂಜಾಬಿ ಚಿತ್ರರಂಗದಲ್ಲಿ ಬಣ್ಣ ಹಚ್ಚಿದ್ದರು.

ಇದನ್ನೂ ಓದಿ: ‘ಪರಮೇಶ ಪಾನ್​ವಾಲ’ ನಟಿ ಸುರ್ವೀನ್​ ಚಾವ್ಲಾಗೆ ಹಲವು ಬಾರಿ ಕಾಸ್ಟಿಂಗ್​ ಕೌಚ್​ ಕಾಟ; ಕೆಟ್ಟ ಅನುಭವ ತೆರೆದಿಟ್ಟಿದ್ದ ನಟಿ

Follow us on

Related Stories

Most Read Stories

Click on your DTH Provider to Add TV9 Kannada