‘ಧಮಾಕ’ ಮಾಡಲು ಬಂದ ಶಿವರಾಜ್​ ಕೆ.ಆರ್​. ಪೇಟೆ; ಈ ಸಿನಿಮಾದ ವಿಶೇಷತೆ ಏನು?

Shivaraj KR Pete: ಶಿವರಾಜ್​ ಕೆ.ಆರ್​. ಪೇಟೆ ನಟನೆಯ ‘ಧಮಾಕ’ ಚಿತ್ರದ ಟೀಸರ್​ ಬಿಡುಗಡೆ ಆಗಿದೆ. ಆ ಚಿತ್ರದ ಬಗ್ಗೆ ಅನೇಕ ವಿಚಾರಗಳನ್ನು ಶಿವರಾಜ್​ ಕೆ.ಆರ್​. ಪೇಟೆ ಅವರು ಹಂಚಿಕೊಂಡಿದ್ದಾರೆ.

TV9kannada Web Team

| Edited By: Madan Kumar

Dec 14, 2021 | 7:58 PM

‘ಕಾಮಿಡಿ ಕಿಲಾಡಿಗಳು’ (Comedy Khiladigalu) ಖ್ಯಾತಿಯ ನಟ ಶಿವರಾಜ್​ ಕೆ.ಆರ್​. ಪೇಟೆ ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಧಮಾಕ’ ಚಿತ್ರದ (Dhamaka Kannada Movie) ಟೀಸರ್​ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಟೀಸರ್​ನಲ್ಲಿ ನಿರ್ದೇಶಕ ಯೋಗರಾಜ್​ ಭಟ್​ ಅವರ ಹಿನ್ನೆಲೆ ಧ್ವನಿ ಹೈಲೈಟ್​ ಆಗಿದೆ. ಈ ಸಿನಿಮಾದಲ್ಲಿ ಹಾಸ್ಯದ ಧಮಾಕಾ ಇದೆ ಎಂದು ಶಿವರಾಜ್​ ಕೆ.ಆರ್​. ಪೇಟೆ (Shivaraj KR Pete) ಹೇಳಿದ್ದಾರೆ. ಈ ಚಿತ್ರದ ವಿಶೇಷತೆ ಏನು? ಯಾವೆಲ್ಲ ಅಂಶಗಳು ಪ್ರೇಕ್ಷಕರಿಗೆ ಸಿಗಲಿದೆ? ಯೋಗರಾಜ್​ ಭಟ್​ ಅವರು ಧ್ವನಿ ನೀಡಿದ್ದರಿಂದ ಚಿತ್ರತಂಡಕ್ಕೆ ಎಷ್ಟು ಅನುಕೂಲ ಆಗಿದೆ? ಈ ಎಲ್ಲ ವಿಚಾರಗಳ ಬಗ್ಗೆ ಅವರು ಒಂದಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮತ್ತೋರ್ವ ಪ್ರತಿಭೆ ನಯನಾ ಕೂಡ ಅಭಿನಯಿಸಿದ್ದಾರೆ. ಲಕ್ಷ್ಮೀ ರಮೇಶ್​ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

ಶಿವರಾಜ್​ ಕೆ.ಆರ್​.ಪೇಟೆ ನಟನೆಯ ‘ಧಮಾಕ’ ಟೀಸರ್​ಗೆ ಯೋಗರಾಜ್​ ಭಟ್​ ಕಾಮಿಡಿ ಪಂಚ್​

ಸಮಂತಾ ಹಾಡಿನಲ್ಲಿ ಗಂಡಸರಿಗೆ ಅವಮಾನ; ‘ಪುಷ್ಪ’ ಚಿತ್ರದ ವಿರುದ್ಧ ದೂರು ನೀಡಿದ ಪುರುಷರ ಸಂಘಟನೆ

Follow us on

Click on your DTH Provider to Add TV9 Kannada