AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್​ ಕೆ.ಆರ್​.ಪೇಟೆ ನಟನೆಯ ‘ಧಮಾಕ’ ಟೀಸರ್​ಗೆ ಯೋಗರಾಜ್​ ಭಟ್​ ಕಾಮಿಡಿ ಪಂಚ್​

ಟೀಸರ್​ ಉದ್ದಕ್ಕೂ ಪಂಚಿಂಗ್ ಡೈಲಾಗ್, ಶಿವರಾಜ್ ಕೆ.ಆರ್. ಪೇಟೆ ಹ್ಯೂಮರ್ ಹೈಲೈಟ್​ ಆಗಿದೆ. ‘ಧಮಾಕ’ ಟೀಸರ್ ತುಂಬಾನೇ ಭಿನ್ನವಾಗಿ ಮೂಡಿ ಬಂದಿದೆ. ಹೊಸ ಪ್ರಯತ್ನಕ್ಕೆ ಯುವ ಪ್ರತಿಭೆಗಳು ಮುನ್ನುಡಿ ಬರೆದಿದ್ದಾರೆ.

ಶಿವರಾಜ್​ ಕೆ.ಆರ್​.ಪೇಟೆ ನಟನೆಯ ‘ಧಮಾಕ’ ಟೀಸರ್​ಗೆ ಯೋಗರಾಜ್​ ಭಟ್​ ಕಾಮಿಡಿ ಪಂಚ್​
ಶಿವರಾಜ್​ ಕೆ.ಆರ್​ ಪೇಟೆ-ಯೋಗರಾಜ್​ ಭಟ್​
TV9 Web
| Updated By: Digi Tech Desk|

Updated on:Dec 13, 2021 | 11:15 AM

Share

ನಿರ್ದೇಶಕ ಯೋಗರಾಜ್​ ಭಟ್​ ಯಾವುದಾದರೂ ಟ್ರೇಲರ್​ ಹಾಗೂ ಟೀಸರ್​ಗೆ ಧ್ವನಿ ಕೊಡುತ್ತಾರೆ ಎಂದರೆ ಅಲ್ಲೊಂದು ವಿಶೇಷತೆ ಇರುತ್ತದೆ. ಅವರ ಧ್ವನಿಯಲ್ಲಿ ಮೂಡಿ ಬರುವ ವಿಡಿಯೋ ನೋಡೋಕೆ ಸಖತ್​ ಫನ್ನಿ ಆಗಿರುತ್ತದೆ. ಈಗ ಹಾಸ್ಯ ನಟ ಶಿವರಾಜ್​ ಕೆ.ಆರ್​. ಪೇಟೆ ನಟನೆಯ ‘ಧಮಾಕ’ ಚಿತ್ರದ ಟೀಸರ್​ ರಿಲೀಸ್​ ಆಗಿದೆ. ಇದಕ್ಕೆ ಯೋಗರಾಜ್​ ಭಟ್​ ಧ್ವನಿ ನೀಡಿದ್ದಾರೆ. ಇಬ್ಬರ ಕಾಮಿಡಿ ಜುಗಲ್​​ಬಂದಿ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿದೆ.

ಟೀಸರ್​ ಉದ್ದಕ್ಕೂ ಪಂಚಿಂಗ್ ಡೈಲಾಗ್, ಶಿವರಾಜ್ ಕೆ.ಆರ್. ಪೇಟೆ ಹ್ಯೂಮರ್ ಹೈಲೈಟ್​ ಆಗಿದೆ. ‘ಧಮಾಕ’ ಟೀಸರ್ ತುಂಬಾನೇ ಭಿನ್ನವಾಗಿ ಮೂಡಿ ಬಂದಿದೆ. ಹೊಸ ಪ್ರಯತ್ನಕ್ಕೆ ಯುವ ಪ್ರತಿಭೆಗಳು ಮುನ್ನುಡಿ ಬರೆದಿದ್ದಾರೆ. ಈ ಹಿಂದೆ ಸಿಂಪಲ್ ಸುನಿ ಬಳಗದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀ ರಮೇಶ್ ‘ಧಮಾಕ’ಗೆ ಆಕ್ಷನ್​ಕಟ್ ಹೇಳುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.

‘ಕಾಮಿಡಿ ಕಿಲಾಡಿ ಶೋ’ ಮೂಲಕ ಗುರುತಿಸಿಕೊಂಡಿರುವ ನಯನಾ ಶರತ್ ಅವರು ಶಿವರಾಜ್ ಕೆ.ಆರ್. ಪೇಟೆಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಇವರ ಕೆಮಿಸ್ಟ್ರಿ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ. ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಪ್ರಕಾಶ್‌ ತುಂಬಿನಾಡ್, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಎಸ್‌.ಆರ್. ಮೀಡಿಯಾ ಪ್ರೊಡಕ್ಷನ್ಸ್‌ ಮತ್ತು ನಂದಿ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಸುನೀಲ್ ಎಸ್‌. ರಾಜ್ ಮತ್ತು ಅನ್ನಪೂರ್ಣ ಬಿ. ಪಾಟೀಲ್ ಬಂಡವಾಳ ಹೂಡಿದ್ದಾರೆ. ಹಾಲೇಶ್ ಕ್ಯಾಮೆರಾ, ವಿಕಾಸ್ ವಸಿಷ್ಠ ಮ್ಯೂಸಿಕ್, ವಿನಯ್ ಕೂರ್ಗ್ ಸಂಕಲನ ಧಮಾಕ ಸಿನಿಮಾದಲ್ಲಿರಲಿದೆ.

ಟೀಸರ್​ ನೋಡಿದ ನಂತರದಲ್ಲಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡಿದೆ. ಸಿನಿಮಾದಲ್ಲೂ ಇಷ್ಟೇ ಕಾಮಿಡಿ ಇರಲಿದೆಯೇ ಎನ್ನುವ ಕುತೂಹಲ ಇದೆ. ಸಿನಿಮಾದಲ್ಲಿ ಸಸ್ಪೆನ್ಸ್​, ಕಾಮಿಡಿ ಹೀಗೆ ನಾನಾ ವಿಚಾರಗಳನ್ನು ಹೇಳಲಾಗಿದೆ ಎಂಬುದನ್ನು ಟೀಸರ್​ನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: ‘ಗಾಳಿಪಟ 2’ ರಿಲೀಸ್​ಗೂ ಮುನ್ನ ಯೋಗರಾಜ್​ ಹೊಸ ಚಿತ್ರ ಶುರು; ‘ಗರಡಿ’ಯಲ್ಲಿ ಬಿ.ಸಿ. ಪಾಟೀಲ್​, ಯಶಸ್​ ಸೂರ್ಯ

ಯೋಗರಾಜ್​ ಭಟ್​ ಸಿನಿಮಾದಲ್ಲಿ ನಟಿಸೋ ಆಫರ್​ ಗಿಟ್ಟಿಸಿಕೊಂಡ ‘ಬಿಗ್​ ಬಾಸ್’​ ದಿವ್ಯಾ ಉರುಡುಗ

Published On - 8:01 pm, Sun, 12 December 21