AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆನಿಲಿಯಾ ರಿತೇಶ್​ ದಂಪತಿಗೆ ಸುದೀಪ್​ ಪ್ರೀತಿಯ ವಿಶ್​; ಹೊಸ ಕಾರ್ಯಕ್ಕೆ ಕಿಚ್ಚನ ಪ್ರೋತ್ಸಾಹ

Kichcha Sudeep: ಕಿಚ್ಚ ಸುದೀಪ್​ ಮತ್ತು ರಿತೇಶ್​ ದೇಶಮುಖ್​ ನಡುವೆ ಉತ್ತಮ ಗೆಳೆತನ ಇದೆ. ತಮ್ಮ ಗೆಳೆಯನ ಹೊಸ ಪ್ರಯತ್ನಕ್ಕೆ ಕಿಚ್ಚ ಮನಸಾರೆ ಹಾರೈಸಿದ್ದಾರೆ.

ಜೆನಿಲಿಯಾ ರಿತೇಶ್​ ದಂಪತಿಗೆ ಸುದೀಪ್​ ಪ್ರೀತಿಯ ವಿಶ್​; ಹೊಸ ಕಾರ್ಯಕ್ಕೆ ಕಿಚ್ಚನ ಪ್ರೋತ್ಸಾಹ
ರಿತೇಶ್ ದೇಶಮುಖ್, ಜೆನಿಲಿಯಾ ಡಿಸೋಜಾ, ಕಿಚ್ಚ ಸುದೀಪ್
TV9 Web
| Edited By: |

Updated on:Dec 13, 2021 | 11:15 AM

Share

ಕಿಚ್ಚ ಸುದೀಪ್​ (Kichcha Sudeep) ಅವರು ಕೇವಲ ಕರುನಾಡಿಗೆ ಸೀಮಿತವಾದ ನಟ ಅಲ್ಲ. ಪರಭಾಷೆಯ ಅನೇಕ ಸಿನಿಮಾಗಳಲ್ಲಿ ಕೂಡ ಅವರು ನಟಿಸಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ ಕಾರಣದಿಂದಲೂ ಅವರು ಬೇರೆ ಭಾಷೆಯ ಕಲಾವಿದರ ಜತೆ ನಂಟು ಹೊಂದಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ಬಾಲಿವುಡ್​ ನಟ ರಿತೇಶ್​ ದೇಶಮುಖ್​ (Riteish Deshmukh) ಜೊತೆಗೆ ಒಳ್ಳೆಯ ಸ್ನೇಹ ಇದೆ. ಇತ್ತೀಚೆಗೆ ರಿತೇಶ್​ ಅವರು ಒಂದು ಹೊಸ ಸುದ್ದಿ ನೀಡಿದರು. ಇದೇ ಮೊದಲ ಬಾರಿಗೆ ತಾವು ನಿರ್ದೇಶನ ಮಾಡುವುದಾಗಿ ತಿಳಿಸಿದರು. ಆ ಚಿತ್ರಕ್ಕೆ ಅವರ ಪತ್ನಿ ಜೆನಿಲಿಯಾ ಡಿಸೋಜಾ (Genelia Dsouza) ಅವರೇ ನಾಯಕಿ. ಈ ಪತಿ-ಪತ್ನಿಯ ಈ ಸಿನಿಮಾಗೆ ಕಿಚ್ಚ ಸುದೀಪ್​ ಶುಭ ಹಾರೈಸಿದ್ದಾರೆ. ಸ್ಟಾರ್​ ದಂಪತಿಯ ಕೆಲಸಕ್ಕೆ ಅವರು ಪ್ರೋತ್ಸಾಹ ನೀಡಿದ್ದಾರೆ.

ಈ ಕುರಿತು ಸುದೀಪ್​ ಟ್ವೀಟ್​ ಮಾಡಿದ್ದಾರೆ. ‘ಇದು ಅತ್ಯಂತ ಸಿಹಿ ಸುದ್ದಿ. ನಿಮಲ್ಲಿ ಯಾವಾಗಲೂ ಪ್ರಾಮಾಣಿಕತೆ ಮತ್ತು ಪ್ಯಾಷನ್​ ಇದೆ. ಈಗ ನಿರ್ದೇಶನ ಮಾಡುವ ಸಮಯ ಬಂದಿದೆ. ನಿಮ್ಮ ಈ ನಿರ್ಧಾರದಿಂದ ನನಗೆ ತುಂಬ ಖುಷಿ ಆಗಿದೆ. ಅಲ್ಟ್ರಾ ಎನರ್ಜಿ ಪ್ಯಾಕ್​ ರೀತಿ ನಿಮ್ಮ ಜೊತೆ ಜೆನಿಲಿಯಾ ಇದ್ದಾರೆ. ಇದಕ್ಕಿಂತ ಇನ್ನೇನು ಬೇಕು? ನಿಮ್ಮಿಬ್ಬರಿಗೂ ನನ್ನ ಶುಭಾಶಯಗಳು. ಈ ಬಗ್ಗೆ ನಾನು ಎಗ್ಸೈಟ್​ ಆಗಿದ್ದೇನೆ’ ಎಂದು ಸುದೀಪ್​ ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಸುದೀಪ್​ ಕೂಡ ಮೊದಲು ನಟನಾಗಿ ಮಿಂಚಿ ನಂತರ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಅವರ ನಿರ್ದೇಶನದಲ್ಲಿ ಬಂದ ‘ಮೈ ಆಟೋಗ್ರಾಫ್​’, ‘ಮಾಣಿಕ್ಯ’ ಮುಂತಾದ ಚಿತ್ರಗಳು ಸೂಪರ್​ ಹಿಟ್​ ಆಗಿವೆ. ಈಗ ನಿರ್ದೇಶನದ ಪ್ರಯತ್ನಕ್ಕೆ ಕೈ ಹಾಕಿರುವ ತಮ್ಮ ಸ್ನೇಹಿತ ರಿತೇಶ್​ ದೇಖಮುಖ್​ಗೆ ಕಿಚ್ಚ ಶುಭ ಹಾರೈಸಿದ್ದಾರೆ.

‘20 ವರ್ಷಗಳ ಕಾಲ ಕ್ಯಾಮೆರಾ ಮುಂದೆ ನಟನಾಗಿ ಕೆಲಸ ಮಾಡಿದ ನಾನು ಇದೇ ಮೊದಲ ಬಾರಿಗೆ ಕ್ಯಾಮೆರಾ ಹಿಂದೆ ನಿಂತು ನಿರ್ದೇಶನ ಮಾಡಲಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ಬೇಡುತ್ತೇನೆ’ ಎಂದು ರಿತೇಶ್​ ಪೋಸ್ಟ್​ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಜೆನಿಲಿಯಾ ಕೂಡ ಮಾಹಿತಿ ನೀಡಿದ್ದಾರೆ. ಬರೋಬ್ಬರಿ 10 ವರ್ಷಗಳ ಬಳಿಕ ನಟನೆಗೆ ಕಮ್​ಬ್ಯಾಕ್​ ಮಾಡುತ್ತಿರುವುದಕ್ಕೆ ಅವರು ಖುಷಿ ಹಂಚಿಕೊಂಡಿದ್ದಾರೆ. ಇದೊಂದು ಮರಾಠಿ ಸಿನಿಮಾ ಆಗಿರಲಿದ್ದು, ‘ವೇಡ್​​’ ಎಂದು ಶೀರ್ಷಿಕೆ ಇಡಲಾಗಿದೆ.

‘ಇದು ನನ್ನ ಮೊದಲ ಮರಾಠಿ ಸಿನಿಮಾ. 10 ವರ್ಷಗಳ ಬಳಿಕ ನಾನು ಮತ್ತೆ ನಟಿಸುತ್ತಿದ್ದೇನೆ. ನನ್ನ ಗಂಡನ ನಿರ್ದೇಶನದಲ್ಲಿ ನಟಿಸುವ ಕನಸು ನನಸಾಗುತ್ತಿದೆ’ ಎಂದು ಜೆನಿಲಿಯಾ ಬರೆದುಕೊಂಡಿದ್ದಾರೆ. ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ. ಅಜಯ್​-ಅತುಲ್​ ಅವರು ಸಂಗೀತ ನೀಡಲಿದ್ದಾರೆ.

ಇದನ್ನೂ ಓದಿ:

ಸುದೀಪ್​ಗಾಗಿ ದೇವಸ್ಥಾನ: ಕಿಚ್ಚನ 4 ಅಡಿ ಮೂರ್ತಿ ಎದುರು ಪುನೀತ್​ ರಾಜ್​ಕುಮಾರ್​​ ಭಾವಚಿತ್ರ

ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಕಿಚ್ಚ ಸುದೀಪ್​

Published On - 7:42 am, Mon, 13 December 21

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ