ಇದು ಅಕ್ಷರಶಃ ರಾಕ್ಷಸೀ ಪ್ರವೃತ್ತಿ. ಈ ಕೃತ್ಯವೆಸಗಿವರು ಯಾರೇ ಆಗಿರಲ್ಲಿ ಮನಷ್ಯರೆನಿಸಿಕೊಳ್ಳಲು ನಾಲಾಯಕ್ಕು ಎಂದೇ ಹೇಳಬೇಕು. ನೀವೇ ನೋಡಿ. 6 ಎಕೆರೆ ಜಮೀನಿನಲ್ಲಿ ಬೆಳೆದ ಹತ್ತಿಯನ್ನು ರಾಶಿ ಮಾಡಿ ಇಲ್ಲಿ ಒಡ್ಡಲಾಗಿತ್ತು. ಆದರೆ, ಇಟ್ಟಿದ್ದಾರೆ. ಘಟನೆ ನಡೆದಿರುವುದು ರಾಯಚೂರ ಜಿಲ್ಲೆ ದೇವದುರ್ಗ ತಾಲ್ಲೂಕಿನಲ್ಲಿರುವ ಕರ್ಕಿಹಳ್ಳಿ ಹೆಸರಿನ ಗ್ರಾಮದಲ್ಲಿ. ನಿಮಗೆ ಕಾಣುತ್ತಿರುವ ಜಮೀನು ಬುಡ್ಡ ಸಾಬಣ್ಣ ಹೆಸರಿನ ರೈತನಿಗೆ ಸೇರಿದ್ದು. ಅವರ ಗೋಳು ಹೇಳತೀರದ್ದು. ಕಷ್ಟಪಟ್ಟು ಬೆಳೆದ ಹತ್ತಿ ಹೀಗೆ ದುಷ್ಕರ್ಮಿಗಳ ಕುಕೃತ್ಯಕ್ಕೆ ಬಲಿಯಾದರೆ ಅವರು ಸಹಿಸಿಕೊಳ್ಳಲು ಹೇಗೆ ಸಾಧ್ಯ? ಅಸಲಿಗೆ ಸಾಬಣ್ಣ ಅವರು ತಮ್ಮ 8 ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ದಾರೆ. ಅದರಲ್ಲಿ ಸುಮಾರು 6 ಎಕರೆಯಲ್ಲಿ ಬೆಳೆದಿದ್ದ ಹತ್ತಿಯ ರಾಶಿ ಮಾಡಿದ್ದಾರೆ. ಮಿಕ್ಕಿದ್ದನ್ನು ಒಂದೆರಡು ದಿನಗಳಲ್ಲಿ ಮಾಡಬೇಕೆಂದುಕೊಂಡಿದ್ದರೇನೋ?
ಅವರ ವೈರಿಗಳು ಯಾರೇ ಆಗಿರಲಿ, ಅವರು ಮಾಡಿದ್ದು ಅಕ್ಷಮ್ಯ. ಹಗೆತನ ತೀರಿಸಿಕೊಳ್ಳಲು ಬೇರೆ ದಾರಿಗಳಿವೆ, ಕೋರ್ಟು ಕಚೇರಿಗಳಿವೆ. ಸಾಬಣ್ಣ ಅವರೊಂದಿಗೆ ಅವರ ಇಡೀ ಕುಟುಂಬ ಹೊಲದಲ್ಲಿ ಬೆವರು ಸುರಿಸಿರುತ್ತದೆ. ಉಳುಮೆ, ಬಿತ್ತನೆ, ಬೆಳೆದ ಪೈರುಗಳ ಸಂರಕ್ಷಣೆ ಸಾಮಾನ್ಯ ಕೆಲಸವಲ್ಲ. ಹೇಳೋದಿಕ್ಕೆ ನೋಡೋದಿಕ್ಕೆ ಇದೆಲ್ಲ ಸುಲಭ ಅನಿಸುತ್ತದೆ. ಆದರೆ ದುಡಿಮೆ ಮಾಡಿದವನಿಗೆ ಮಾತ್ರ ಗೊತ್ತು ಅದರ ಕಷ್ಟ.
ಪ್ರಕರಣ ದೇವದುರ್ಗ ಪೊಲೀಸ್ ಸ್ಟೇಶನಲ್ಲಿ ದಾಖಲಾಗಿದೆ. ಪೊಲೀಸರು ಜಾಲ ಬೀಸಿ ಕಿಡಿಗೇಡಿಗಳನ್ನು ಹಿಡಿಯಬಹುದು. ಅದರೆ, ಸುಟ್ಟು ಕರಕಲಾದ ಹತ್ತಿ ಸಾಬಣ್ಣಗೆ ಹೇಗೆ ವಾಪಸ್ಸು ಸಿಕ್ಕೀತು? ಕೋರ್ಟು ಸುಟ್ಟು ಹೋದ ಹತ್ತಿಗೆ ಸಮನಾದ ಬೆಲೆಯನ್ನು ಅವರಿಂದ ದಂಡದ ರೂಪದಲ್ಲಿ ಕಕ್ಕಿಸಿ ಸಾಬಣ್ಣಗೆ ತಲುಪಿಸುವ ವ್ಯವಸ್ಥೆ ಮಾಡುವುದೆ?
ಇದನ್ನೂ ಓದಿ: ಕೆಸರುಮಯ ರಸ್ತೆಯಲ್ಲಿ ಪುಟ್ಟ ಬಾಲಕ ಟ್ರ್ಯಾಕ್ಟರ್ ಓಡಿಸುವ ವಿಡಿಯೋವನ್ನು ಹಂಚಿಕೊಂಡ ಆನಂದ್ ಮಹೀಂದ್ರಾ; ವಿಡಿಯೋ ವೈರಲ್