ವಿಜಯಪುರ: ವರ್ಗಾವಣೆಯಾದ ಗುರುವಿಗೆ ಕಣ್ಣೀರು ಹಾಕಿ ಬೀಳ್ಕೊಟ್ಟ ವಿದ್ಯಾರ್ಥಿಗಳು

ವಿಜಯಪುರ: ವರ್ಗಾವಣೆಯಾದ ಗುರುವಿಗೆ ಕಣ್ಣೀರು ಹಾಕಿ ಬೀಳ್ಕೊಟ್ಟ ವಿದ್ಯಾರ್ಥಿಗಳು

TV9 Web
| Updated By: preethi shettigar

Updated on: Dec 17, 2021 | 2:32 PM

ಶಾಲೆಯಿಂದ ಹೊರಡುವ ವೇಳೆ ಶಿಕ್ಷಕ ಬಿ. ಕೆ. ರಾಮತೀರ್ಥ ಅವರನ್ನು ಸುತ್ತುವರೆದು ಕಣ್ಣೀರು ಹಾಕಿದ್ದಾರೆ. ಮಕ್ಕಳ ಪ್ರೀತಿ ಕಂಡು ಶಿಕ್ಷಕ ಮೂಕ ವಿಸ್ಮಿತರಾಗಿದ್ದಾರೆ. ನಂತರ ವಿದ್ಯಾರ್ಥಿಗಳಿಗೆ ಸಮಾಧಾನ ಮಾಡಿ ಶಿಕ್ಷಕ ಬಿ. ಕೆ. ರಾಮತೀರ್ಥ ತೆರಳಿದ್ದಾರೆ.

ವಿಜಯಪುರ: ವರ್ಗಾವಣೆಯಾದ ಗುರುವಿಗೆ ಕಣ್ಣೀರು ಹಾಕಿ ವಿದ್ಯಾರ್ಥಿಗಳು ಬೀಳ್ಕೊಟ್ಟ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುಬಕಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಿಕ್ಷಕ ಬಿ.ಕೆ. ರಾಮತೀರ್ಥ ಕುಬಕಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ವರ್ಗಾವಣೆಯಾಗಿದ್ದರು. ಶಾಲೆಯಿಂದ ಹೊರಡುವ ವೇಳೆ ಶಿಕ್ಷಕ ಬಿ. ಕೆ. ರಾಮತೀರ್ಥ ಅವರನ್ನು ಸುತ್ತುವರೆದು ಕಣ್ಣೀರು ಹಾಕಿದ್ದಾರೆ. ಮಕ್ಕಳ ಪ್ರೀತಿ ಕಂಡು ಶಿಕ್ಷಕ ಮೂಕ ವಿಸ್ಮಿತರಾಗಿದ್ದಾರೆ. ನಂತರ ವಿದ್ಯಾರ್ಥಿಗಳಿಗೆ ಸಮಾಧಾನ ಮಾಡಿ ಶಿಕ್ಷಕ ಬಿ. ಕೆ. ರಾಮತೀರ್ಥ ತೆರಳಿದ್ದಾರೆ.

ಇದನ್ನೂ ಓದಿ:
ಉತ್ತರ ಕರ್ನಾಟಕದಲ್ಲಿ ವರ್ಗಾವಣೆ ಹೊಂದಿದ ಮತ್ತೊಬ್ಬ ಶಿಕ್ಷಕರಿಗೆ ಮಕ್ಕಳಿಂದ ಭಾವಪೂರ್ಣ ವಿದಾಯ

ಕಲಬುರಗಿ: ವರ್ಗಾವಣೆಗೊಂಡ ಶಿಕ್ಷಕನ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಗಳಗಳನೆ ಅತ್ತ ವಿದ್ಯಾರ್ಥಿನಿಯರು