ನನಗೆ 8 ಜನ ಹೆಣ್ಣುಮಕ್ಕಳು ಇದ್ದಾರೆ ಎಂದು ರಮೇಶ್ ಕುಮಾರ್ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಇಬ್ರಾಹಿಂ
ರಮೇಶ್ ಕುಮಾರ್ ಯಾವ ದೃಷ್ಟಿಕೋನದಿಂದ ಮಾತಾಡಿದ್ದಾರೆ. ಈ ಬಗ್ಗೆ ನೋಡಬೇಕಾಗಿದೆ. ನನಗೂ ಎಂಟು ಜನ ಹೆಣ್ಣು ಮಕ್ಕಳಿದ್ದಾರೆ. ರಮೇಶ್ ಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಅಂತ ಗೊತ್ತಿಲ್ಲ ಎಂದು ಕಾಂಗ್ರೆಸ್ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಬೆಳಗಾವಿ: ರಮೇಶ್ ಕುಮಾರ್ ಹೇಳಿಕೆಗೆ ಬೆಳಗಾವಿಯಲ್ಲಿ ಕಾಂಗ್ರೆಸ್ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದು, ಈ ಸರ್ಕಾರಕ್ಕೆ ಯಾವ ಭಾಷೆಯಲ್ಲಿ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಹೇಳಿದರೆ ಅರ್ಥವಾಗಲ್ಲ. ಹೀಗಾಗಿ ರಮೇಶ್ ಕುಮಾರ್ ಅವರಿಗೆ ಹೇಳಬೇಕಾದ ಭಾಷೆಯಲ್ಲಿ ಹೇಳಿದ್ದಾರೆ. ರಾಜ್ಯ ಸರ್ಕಾರಕ್ಕೆ ರಮೇಶ್ ಕುಮಾರ್ ಭಾಷೆಯೇ ಸರಿಯಾಗಿದೆ. ರಮೇಶ್ ಕುಮಾರ್ ಯಾವ ದೃಷ್ಟಿಕೋನದಿಂದ ಮಾತಾಡಿದ್ದಾರೆ. ಈ ಬಗ್ಗೆ ನೋಡಬೇಕಾಗಿದೆ. ನನಗೂ ಎಂಟು ಜನ ಹೆಣ್ಣು ಮಕ್ಕಳಿದ್ದಾರೆ. ರಮೇಶ್ ಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಶಿಸ್ತಿನ ಕೇಸರಿ ನಾಯಕರು ಯಾಕೆ ಸುಮ್ಮಿನಿದ್ದಾರೆ. 12 ಪತಿವ್ರತ ಮಹಾಜನರು ಸದಾನಂದಗೌಡರದ್ದು ವಿಡಿಯೋ ಇದೆ. ಸದಾನಂದಗೌಡರು ಸದಾ ನಗ್ತಾ ಇರುತ್ತಾರೆ. ಬಿಜೆಪಿ ಮತ್ತು ಕೇಶವ ಕೃಪದವರು ಸುಮ್ಮನೆ ಇದ್ದಾರೆ. ಆಗ 12 ಜನ ಕೋರ್ಟ್‌ಗೆ ಹೋಗಿ ಸ್ಟೇ ತೆಗೆದುಕೊಂಡು ಬಂದಿದ್ದಾರಲ್ಲಾ. ಆ ವಿಡಿಯೋದಲ್ಲಿ ಏನಿದೆ ಎಂದು ಅವರು ಸ್ಟೇ ತಂದಿದ್ದಾರೆಂದು ನನ್ನ ಪ್ರಶ್ನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ನಾವು ಬೀಫ್ ರಪ್ತು ಮಾಡಿದರೆ ಲಾಭ ಆಗುತ್ತಲ್ವಾ: ಗೋಹತ್ಯೆ ಬಗ್ಗೆ ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಮಾತು
ರೇಪ್ ಆಸ್ವಾದಿಸುವ ಹೇಳಿಕೆ: ಕ್ಷಮೆಯಾಚಿಸಿದ ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್, ಇಂದು ಸದನದಲ್ಲಿ ಹೇಳಿದ್ದೇನು?