ಕಲಬುರಗಿ: ವರ್ಗಾವಣೆಗೊಂಡ ಶಿಕ್ಷಕನ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಗಳಗಳನೆ ಅತ್ತ ವಿದ್ಯಾರ್ಥಿನಿಯರು

ಶಿಕ್ಷಕ ಶ್ರೀನಿವಾಸ ಕುಲಕರ್ಣಿಯವರ ವರ್ಗಾವಣೆಯಾಗಿದ್ದು, ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ನಿನ್ನೆ (ಡಿಸೆಂಬರ್ 10) ಬಿಳ್ಕೋಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿಕ್ಷಕನ ವಿದಾಯದ ವೇಳೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಲಬುರಗಿ: ವರ್ಗಾವಣೆಗೊಂಡ ಶಿಕ್ಷಕನ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಗಳಗಳನೆ ಅತ್ತ ವಿದ್ಯಾರ್ಥಿನಿಯರು
ಶಿಕ್ಷಕನನ್ನು ತಬ್ಬಿ ಅತ್ತ ವಿದ್ಯಾರ್ಥಿನಿಯರು
Follow us
TV9 Web
| Updated By: preethi shettigar

Updated on:Dec 11, 2021 | 11:16 AM

ಕಲಬುರಗಿ: ಶಿಕ್ಷಕರಿಗೆ ವಿದ್ಯಾರ್ಥಿಗಳು ಕೀಟಲೆ ಮಾಡುವ ಅಥವಾ ಇನ್ನಿತರ ಚೆಷ್ಟೆಯ ವಿಡಿಯೋಗಳು ಹರಿದಾಡುತ್ತಿರುವ ಸಮಯದಲ್ಲಿಯೇ, ಶಿಕ್ಷಕರೋರ್ವರು ವರ್ಗಾವಾಣೆಯಾಗಿದ್ದರಿಂದ ಇಡೀ ಶಾಲೆಯ ಮಕ್ಕಳು, ಸಹ ಶಿಕ್ಷಕರು ಕಣ್ಣೀರು ಹಾಕಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್​ ಆಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿಿನ ಲಿಂಗಂಪಲ್ಲಿ ಗ್ರಾಮದಲ್ಲಿ ಮಕ್ಕಳು, ಶಿಕ್ಷಕರು ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸ್ವತಃ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೂಡಾ ಈ ಶಿಕ್ಷಕನಿಗೆ ಅಭಿನಂದಿಸಿದ್ದಾರೆ.

ವರ್ಗಾವಣೆಯಾದ ಶಿಕ್ಷಕ; ಕಣ್ಣೀರು ಹಾಕಿದ ವಿದ್ಯಾರ್ಥಿಗಳು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮೇದಕ್ ಗ್ರಾಮದ ನಿವಾಸಿಯಾಗಿರುವ ಶ್ರೀನಿವಾಸರಾವ್ ಕುಲಕರ್ಣಿ ಅನೇಕ ವರ್ಷಗಳಿಂದ ಕನ್ನಡ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಸೇಡಂ ತಾಲೂಕಿನ ಲಿಂಗಂಪಲ್ಲಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರೀನಿವಾಸರಾವ್ ಕುಲಕರ್ಣಿ ಅವರು ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೇಡಂನಲ್ಲಿಯೇ ವಾಸವಾಗಿರುವ ಶ್ರೀನಿವಾಸರಾವ್ ಕುಲಕರ್ಣಿ, ಪ್ರತಿನಿತ್ಯ ಸೇಡಂನಿಂದ ಲಿಂಗಂಪಲ್ಲಿ ಗ್ರಾಮಕ್ಕೆ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗಿ ಬಂದು ಮಾಡುತ್ತಿದ್ದರು. ಆದರೆ ಪ್ರತಿನಿತ್ಯ ಹೆದ್ದಾರಿಯಲ್ಲಿ ಬೈಕ್ ಮೇಲೆ ಹೋಗಿ ಬರುವುದು ಕಷ್ಟಸಾಧ್ಯವಾಗುತ್ತಿದ್ದರಿಂದ, ಸ್ವತಃ ಅವರೇ ವರ್ಗಾವಣೆಗಾಗಿ ಕೋರಿಕೆ ಸಲ್ಲಿಸಿದ್ದರು.

ಒಂಬತ್ತು ವರ್ಷಗಳ ಕಾಲ ಸೇಡಂನಲ್ಲಿ ಸೇವೆ ಮಾಡಿ, ನಿವೃತ್ತಿ ಪಡೆಯಬೇಕು ಎಂದು ಶ್ರೀನಿವಾಸರಾವ್ ಕುಲಕರ್ಣಿ ಅವರು ಇಚ್ಚೆಯನ್ನು ಹೊಂದಿದ್ದರು.  ಕೆಲ ದಿನಗಳ ಹಿಂದೆ ನಡೆದ ವರ್ಗಾವಣೆಯಲ್ಲಿ ಅದೃಷ್ಟವೆನ್ನುವಂತೆ ಶ್ರೀನಿವಾಸರಾವ್ ಕುಲಕರ್ಣಿ, ಅವರಿಗೆ ಸೇಡಂನಲ್ಲಿಯೇ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಸೇಡಂ ಪಟ್ಟಣದಲ್ಲಿರುವ ಸರ್ಕಾರಿ ಜೂನಿಯರ್​ ಕಾಲೇಜಿನಲ್ಲಿ ಕನ್ನಡ ಶಿಕ್ಷಕ ಹುದ್ದೆ ಖಾಲಿಯಿದ್ದಿದ್ದರಿಂದ ಶ್ರಿನಿವಾಸರಾವ್ ಕುಲಕರ್ಣಿ ಅವರ ವರ್ಗಾವಣೆಯಾಗಿತ್ತು. ತಾನು ವಾಸವಿದ್ದ ಸ್ಥಳದಲ್ಲಿಯೇ ವರ್ಗಾವಣೆ ಸಿಕ್ಕಿದ್ದು, ಸಹಜವಾಗಿ ಶ್ರೀನಿವಾಸರಾವ್ ಕುಲಕರ್ಣಿ ಅವರಿಗೆ ಕೂಡಾ ಸಂತೋಷ ತಂದಿದೆ.

ನೆಚ್ಚಿನ ಶಿಕ್ಷಕನ ವರ್ಗಾವಣೆಯಿಂದ ಭಾವೋದ್ವೇಗಕ್ಕೊಳಗಾದ ಮಕ್ಕಳು ಕಳೆದ ಒಂಬತ್ತು ವರ್ಷಗಳಿಂದ ಸೇಡಂ ಲಿಂಗಂಪಲ್ಲಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಪಾಠ ಮಾಡಿದ್ದ ಶ್ರೀನಿವಾಸರಾವ್ ಕುಲಕರ್ಣಿ, ತಮಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ, ಇದೇ ಡಿಸೆಂಬರ್ 9 ರಂದು ಲಿಂಗಂಪಲ್ಲಿ ಸರ್ಕಾರಿ ಪ್ರೌಢ ಶಾಲೆಗೆ ರಿಲೀವ್ ಆಗಲು ಹೋಗಿದ್ದರು. ಶಾಲೆಗೆ ಹೋಗಿ ರಿಲಿವ್ ಆಗಿ ಮರಳಿ ಸೇಡಂಗೆ ಹೋಗುವಾಗ ಮಕ್ಕಳು ಕಣ್ಣೀರು ಹಾಕಲು ಪ್ರಾರಂಭಿಸಿದ್ದರು. ಸಹ ಶಿಕ್ಷಕರು ಕೂಡಾ ಕಣ್ಣೀರು ಹಾಕುವುದರ ಜೊತೆಗೆ ಶ್ರೀನಿವಾಸರಾವ್ ಕುಲಕರ್ಣಿ ಅವರ ಕಾಲಿಗೆ ನಮಸ್ಕಾರ ಮಾಡಿ ಆಶಿರ್ವಾದ ಪಡೆದರು. ಮಕ್ಕಳ ಅಳು, ಸಹ ಶಿಕ್ಷಕರ ಪ್ರೀತಿ, ಗ್ರಾಮದ ಜನರ ಸಹಕಾರ ಕಂಡು ಸ್ವತಃ ಶ್ರೀನಿವಾಸರಾವ್ ಕುಲಕರ್ಣಿ ಅವರು ಕೂಡಾ ಭಾವೋದ್ವೇಗಕ್ಕೊಳಗಾಗಿದ್ದರು.

ದೀರ್ಘದಂಡ ನಮಸ್ಕಾರ ಹಾಕಿದ ಶ್ರೀನಿವಾಸರಾವ್ ಕುಲಕರ್ಣಿ ಲಿಂಗಂಪಲ್ಲಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಪಾಠ ಮಾಡಿದ್ದ ಶ್ರಿನಿವಾಸರಾವ್ ಕುಲಕರ್ಣಿ, ಮಕ್ಕಳು, ಸಹ ಶಿಕ್ಷಕರು ಸೇರಿದಂತೆ ಇಡೀ ಗ್ರಾಮದ ಜನರ ಪ್ರೀತಿಗೆ ಕಾರಣವಾಗಿದ್ದರು. ತಮ್ಮ ನಡೆ ನುಡಿ, ಪಾಠದಿಂದ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಮೊನ್ನೆ ಶಾಲೆಗೆ ಹೋಗಿ ರಿಲಿವ್ ಆಗಿ ಮರಳುತ್ತಿದ್ದಾಗ, ಪ್ರೀತಿ ನೀಡಿದ ಶಾಲೆ ಮುಂದೆ ನಿಂತು ದೀರ್ಘದಂಡ ನಮಸ್ಕಾರ ಹಾಕಿ, ಗೌರವ ಸಲ್ಲಿಸಿದ್ದಾರೆ.

ನನಗೆ ಇನ್ನು ಒಂಬತ್ತು ವರ್ಷ ಸೇವೆ ಉಳದಿದೆ. ಪ್ರತಿನಿತ್ಯ ಲಿಂಗಂಪಲ್ಲಿ ಗ್ರಾಮಕ್ಕೆ ಹೋಗಿ ಬರುವುದು ಕಷ್ಟವಾಗುತ್ತಿದ್ದರಿಂದ ನಾನೇ ವರ್ಗಾವಣೆಗೆ ಅರ್ಜಿ ಹಾಕಿದ್ದೆ. ಅದೃಷ್ಟವೆನ್ನುವಂತೆ ಸೇಡಂನಲ್ಲಿಯೇ ನನಗೆ ವರ್ಗಾವಣೆ ಸಿಕ್ಕಿತ್ತು. ಆದರೆ ಶಾಲೆಗೆ ಹೋಗಿ ರಿಲೀವ್ ಆಗಿ ಬರುವಾಗ ಮಕ್ಕಳ ಕಣ್ಣೀರು, ಸಹ ಶಿಕ್ಷಕರು, ಗ್ರಾಮಸ್ಥರ ಪ್ರೀತಿ ಕಂಡು, ಯಾಕಾದರು ವರ್ಗಾವಣೆ ಮಾಡಿಸಿಕೊಂಡೆ ಅನ್ನೋ ಭಾವನೆ ಬಂತು.  ಎಲ್ಲರ ಪ್ರೀತಿಗೆ ಕಾರಣವಾಗಿದ್ದಕ್ಕೆ ಸಂತೋಷವಾಗಿದೆ.  ಅವರ ಪ್ರೀತಿಗೆ ನಾನು ಚಿರರುಣಿ ಎಂದು ವರ್ಗಾವಣೆಯಾಗಿರುವ ಶಿಕ್ಷಕ ಶ್ರೀನಿವಾಸರಾವ್ ಕುಲಕರ್ಣಿ ಹೇಳಿದ್ದಾರೆ.

ವರದಿ: ಸಂಜಯ್ ಚಿಕ್ಕಮಠ

ಕೊಪ್ಪಳ: ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳ‌ ರೋಧನೆ ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳು ಗಳಗಳನೆ ಅತ್ತ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕು ಹಿರೇಖೇಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ. ನೆಚ್ಚಿನ ಶಿಕ್ಷಕ ಈಶಪ್ಪ ಅವರ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಶಾಲೆ‌ ಬಿಟ್ಟು ಹೋಗಬೇಡಿ ಎಂದು ವಿದ್ಯಾರ್ಥಿಗಳು ಗೋಳಾಡಿದ್ದಾರೆ. ಕಳೆದ 13 ವರ್ಷದಿಂದ ಹಿರೇಖೇಡ ಗ್ರಾಮದಲ್ಲೇ ಕೆಲಸ ನಿರ್ವಹಿಸಿದ್ದ ಶಿಕ್ಷಕ, ಗಂಗಾವತಿ ತಾಲೂಕು ಚಳ್ಳೂರು ಗ್ರಾಮಕ್ಕೆ ವರ್ಗಾವಣೆಯಾಗಿರುವ ಹಿನ್ನೆಲೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಶಿಕ್ಷಕನ ಹಾವ ಭಾವಕ್ಕೆ ಬೆರಗಾದ ವಿದ್ಯಾರ್ಥಿಗಳು; ಪಾಠದ ಮತ್ತಷ್ಟು ವಿಡಿಯೋಗಳು ವೈರಲ್

ಮೈಸೂರಿನ ಸರ್ಕಾರಿ ಶಿಕ್ಷಕರಿಗೆ ವಸ್ತ್ರ ಸಂಹಿತೆ ಜಾರಿ: ಶಿಕ್ಷಕರು ಜೀನ್ಸ್ ಪ್ಯಾಂಟ್, ಟಿ ಶರ್ಟ್ ಧರಿಸದಂತೆ ಆದೇಶ

Published On - 8:56 am, Sat, 11 December 21

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ