ಶಿಕ್ಷಕನ ಹಾವ ಭಾವಕ್ಕೆ ಬೆರಗಾದ ವಿದ್ಯಾರ್ಥಿಗಳು; ಪಾಠದ ಮತ್ತಷ್ಟು ವಿಡಿಯೋಗಳು ವೈರಲ್
ಮಂಜುನಾಥ ಗಡ್ಡಿ ಎನ್ನುವವರು ಧಾರವಾಡದ ಜೀನಿಯಸ್ ಕರಿಯರ್ ಅಕಾಡೆಮಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಆಂಗ್ಲೋ-ಮರಾಠಾ ಯುದ್ಧದ ಪಾಠದ ಜತೆಗೆ ಮತ್ತೆರಡು ಪಾಠಗಳ ವಿಡಿಯೋ ವೈರಲ್ ಆಗಿತ್ತು. ಈಗ ಮತ್ತಷ್ಟು ಪಾಠದ ವೈಖರಿಯ ವಿಡಿಯೋ ವೈರಲ್ ಆಗಿದೆ.
ಧಾರವಾಡ: ಪಾಠ ಮಾಡುವಾಗ ವಿದ್ಯಾರ್ಥಿಗಳ ಚಿತ್ತ ಬೇರೆಡೆ ಹೋಗದಂತೆ ಶಿಕ್ಷಕರು ಮಕ್ಕಳಿಗೆ ಇಷ್ಟವಾಗುವ ಕಥೆ, ಕವನ, ಆಟ, ಇನ್ನಿತರ ತಮಾಷೆ ಸಂಗತಿಗಳನ್ನು ಹೇಳುತ್ತಾರೆ. ಆದರೆ ಧಾರವಾಡ ಜಿಲ್ಲೆಯ ಶಿಕ್ಷಕರೊಬ್ಬರು ತಮ್ಮ ಹಾವ ಭಾವದ ಮೂಲಕವೇ ಪಾಠ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ಶಿಕ್ಷಕನ ಮತ್ತಷ್ಟು ವಿಡಿಯೋಗಳು ವೈರಲ್ ಆಗಿದೆ. ಮಂಜುನಾಥ ಗಡ್ಡಿ ಎನ್ನುವವರು ಧಾರವಾಡದ ಜೀನಿಯಸ್ ಕರಿಯರ್ ಅಕಾಡೆಮಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಆಂಗ್ಲೋ-ಮರಾಠಾ ಯುದ್ಧದ ಪಾಠದ ಜತೆಗೆ ಮತ್ತೆರಡು ಪಾಠಗಳ ವಿಡಿಯೋ ವೈರಲ್ ಆಗಿತ್ತು. ಈಗ ಮತ್ತಷ್ಟು ಪಾಠದ ವೈಖರಿಯ ವಿಡಿಯೋ ವೈರಲ್ ಆಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪಾಠ ಮಾಡುವ ಈ ಶಿಕ್ಷಕ, ಪಾಠದ ಜತೆ ಜತೆಗೆ ವಿದ್ಯಾರ್ಥಿಗಳಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ:
ಶಿಕ್ಷಕನ ಪಾಠಕ್ಕೆ ಬಿದ್ದು ಬಿದ್ದು ನಕ್ಕ ಮಕ್ಕಳು; ವಿಡಿಯೋ ಇಲ್ಲಿದೆ
ದೃಷ್ಟಿಹೀನ ಶಿಕ್ಷಕ ಪಾಠ ಮಾಡುತ್ತಿದ್ದರೆ, ಅವರೆದುರು ನೃತ್ಯ ಮಾಡಿದ ವಿದ್ಯಾರ್ಥಿಗಳು; ಮೂವರಿಗೆ ಗೇಟ್ಪಾಸ್