ಶಿಕ್ಷಕನ ಪಾಠಕ್ಕೆ ಬಿದ್ದು ಬಿದ್ದು ನಕ್ಕ ಮಕ್ಕಳು; ವಿಡಿಯೋ ಇಲ್ಲಿದೆ
ಈಗ ಮತ್ತೆರಡು ಪಾಠಗಳ ವಿಡಿಯೋ ವೈರಲ್ ಆಗಿದೆ. ಷಹಜಾನ್, ಔರಂಗಜೇಬ್ ಕುರಿತ ಪಾಠ ಮಾಡಿದ್ದಾರೆ. ಷಹಜಹಾನ್ ಬಗ್ಗೆ ಹೇಳುತ್ತ ಶಿಕ್ಷಕ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಧಾರವಾಡ: ತರಗತಿಯಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿಗಳ ಚಿತ್ತ ಬೇರೆಡೆ ಹೋಗದಂತೆ ಶಿಕ್ಷಕರು ಮಕ್ಕಳಿಗೆ ಇಷ್ಟವಾಗುವ ಕಥೆ, ಕವನ, ತಮಾಷೆ ಸಂಗತಿಗಳನ್ನು ಹೇಳುತ್ತಾರೆ. ಆದರೆ ಧಾರವಾಡ ಜಿಲ್ಲೆಯ ಶಿಕ್ಷಕರೊಬ್ಬರು ಹಾವ ಭಾವದ ಮೂಲಕ ಪಾಠ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಶಿಕ್ಷಕ ಮಂಜುನಾಥ ಗಡ್ಡಿ ಎನ್ನುವವರು ಧಾರವಾಡದ ಜೀನಿಯಸ್ ಕರಿಯರ್ ಅಕಾಡೆಮಿಯಲ್ಲಿ ಪಾಠ ಮಾಡುತ್ತಿದ್ದರು. ಇತ್ತೀಚೆಗೆ ಆಂಗ್ಲೋ-ಮರಾಠಾ ಯುದ್ಧದ ಪಾಠ ವೈರಲ್ ಆಗಿತ್ತು. ಈಗ ಮತ್ತೆರಡು ಪಾಠಗಳ ವಿಡಿಯೋ ವೈರಲ್ ಆಗಿದೆ. ಷಹಜಾನ್, ಔರಂಗಜೇಬ್ ಕುರಿತ ಪಾಠ ಮಾಡಿದ್ದಾರೆ. ಷಹಜಹಾನ್ ಬಗ್ಗೆ ಹೇಳುತ್ತ ಶಿಕ್ಷಕ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಶಿಕ್ಷಕನ ಹಾವ ಭಾವಕ್ಕೆ ವಿದ್ಯಾರ್ಥಿಗಳು ಬೆರಗಾದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪಾಠ ಮಾಡುವ ಮಂಜುನಾಥ ಗಡ್ಡಿ ಪಾಠ ಮಾಡುತ್ತಲೇ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಿದ್ದಾರೆ.
Latest Videos