ವಿಜಯಪುರನಲ್ಲಿ ಬೃಹತ್ ಗಾತ್ರದ ಶಿರ್ಡಿ ಸಾಯಿಬಾಬಾ ಮಂದಿರ ನಿರ್ಮಾಣಗೊಳ್ಳುವ ಹಿಂದೆ ದೊಡ್ಡ ಕಾರಣವಿದೆ
ದೇವಸ್ಥಾನದಲ್ಲಿ ಸಾಯಿಬಾಬಾರ ಹೊರತಾಗಿ, ಗಣೇಶ ಮತ್ತು ನವಗ್ರಹ ದೇವತೆಗಳ ವಿಗ್ರಹಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಪ್ರತಿ ಗುರುವಾರದಂದು ಭಕ್ತರಿಗೆ ಪ್ರಸಾದ ನೀಡುವ ಏರ್ಪಾಟು ಮಾಡಲಾಗುತ್ತದೆ.
ಇತ್ತೀಚಿಗಷ್ಟೇ ನಾವು ರೇಷ್ಮೆ ನಗರ ರಾಮನಗರನಲ್ಲಿರುವ ಶಿರ್ಡಿ ಸಾಯಿಬಾಬಾ ದೇವಸ್ಥಾನವನ್ನು ತೋರಿಸಿದ್ದೆವು. ಈಗ ಉತ್ತರ ಕರ್ನಾಟಕದ ವಿಜಯಪುರದಲ್ಲಿರುವ ಅದೇ ಶಿರ್ಡಿ ಸಾಯಿಬಾಬಾ ದೇಗುಲದ ಸರದಿ. ಈ ಮಂದಿರ ಅಲ್ಪಾವಧಿಯಲ್ಲೇ ಬಹಳ ಪ್ರಸಿದ್ಧಿ ಪಡೆದುಕೊಂಡಿದೆ. ಸಾಯಿಬಾಬಾ ದೇವಸ್ಥಾನದ ನಿರ್ಮಾಣ ಕಾರ್ಯ 1995 ರಲ್ಲಿ ಕೊನೆಗೊಂಡಿತಾದರೂ ಅದರ ಲೋಕಾರ್ಪಣೆಯಾಗಿದ್ದು ಮಾತ್ರ 2000 ರಲ್ಲಿ. ಅಂದಿನಿಂದಲೂ ಸಾಯಿಬಾಬಾರ ದೇವಸ್ಥಾನ ಭಕ್ತರನ್ನು ನಿರಂತರವಾಗಿ ತನ್ನತ್ತ ಸೆಳೆಯುತ್ತಿದೆ. ಅಸಲಿಗೆ, ಮಂದಿರವನ್ನು ಇಷ್ಟು ದೊಡ್ಡದಾಗಿ ನಿರ್ಮಿಸುವ ಇಚ್ಛೆ ಇದನ್ನು ತಮ್ಮ ಕೈಯಾರೆ ಹಣ ಹಾಕಿ ಕಟ್ಟಿಸಲಾರಂಭಿಸಿದ ಜನರಿಗೆ ಇರಲಿಲ್ಲ.
ಶಿರ್ಡಿ ಸಾಯಿಬಾಬಾರ ಪರಮ ಭಕ್ತರಾಗಿದ್ದ ಅವರು ಪ್ರತಿದಿನ ಆರಾಧನೆ ನಡೆಸುವುದಕ್ಕೋಸ್ಕರ ಒಂದು ಚಿಕ್ಕಗಾತ್ರದ ಮಂದಿರವನ್ನು ಕಟ್ಟಲಾರಂಭಿಸಿದ್ದರು. ಆದರೆ, ನಿರ್ಮಾಣ ಕಾರ್ಯ ಜಾರಿಯಲ್ಲಿದ್ದಾಗ, ಅ ಸ್ಥಳದಲ್ಲಿ ಅವರಿಗೆ ಕಪ್ಪುಶಿಲೆ ಸಿಕ್ಕು ಅದರಲ್ಲಿ ಅವರಿಗೆ ಶಿರ್ಡಿ ಸಾಯಿಬಾಬಾರ ಪ್ರತಿರೂಪ ಕಂಡಾಗ ಅದು ಬಾಬಾರ ಮಹಿಮೆ ಎಂದುಕೊಂಡು ಬೃಹತ್ ಮಂದಿರವನ್ನು ನಿರ್ಮಿಸಲು ಮುಂದಾಗುತ್ತಾರೆ. ಹಾಗಾಗೇ, ಶಿರ್ಡಿ ಸಾಯಿಬಾಬಾರ ಬೃಹತ್ ದೇವಸ್ಥಾನ ಇಲ್ಲಿ ತಲೆಯೆತ್ತಿದೆ.
ಮಂದಿರನಲ್ಲಿರುವ ಸಾಯಿಬಾಬಾರ ಕುಳಿತಿರುವ ಭಂಗಿಯ ಅಮೃತಶಿಲೆಯ ಮೂರ್ತಿಯನ್ನು ರಾಜಸ್ತಾನದ ಬುಖಾರಾ ಎಂಬಲ್ಲಿಂದ ತರಿಸಲಾಗಿದೆ. ಮಹಾರಾಷ್ಟ್ರದಲ್ಲಿರುವ ಮೂಲ ಶಿರ್ಡಿ ಮಂದಿರನಲ್ಲಿ ನಡೆಯುವ ಹಾಗೆಯೇ ಈ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ದೇವಸ್ಥಾನದಲ್ಲಿ ಸಾಯಿಬಾಬಾರ ಹೊರತಾಗಿ, ಗಣೇಶ ಮತ್ತು ನವಗ್ರಹ ದೇವತೆಗಳ ವಿಗ್ರಹಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಪ್ರತಿ ಗುರುವಾರದಂದು ಭಕ್ತರಿಗೆ ಪ್ರಸಾದ ನೀಡುವ ಏರ್ಪಾಟು ಮಾಡಲಾಗುತ್ತದೆ. ಈ ದೇವಸ್ಥಾನದಲ್ಲಿರುವ ಸಾಯಿಬಾಬಾರ ವಿಗ್ರಹದಂತಿರುವ ಇನ್ನೊಂದು ಮೂರ್ತಿಯನ್ನು ನಗರದ ಕೀರ್ತಿನಗರನಲ್ಲಿರುವ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಇದನ್ನೂ ಓದಿ: Viral Video: ಹಳೆಯ ಎಟಿಎಂ ಖರೀದಿಸಿ 1.49 ಲಕ್ಷ ರೂ. ಪಡೆದ ಯುವಕರು! ಖುಷಿಯಲ್ಲಿ ಕಿರುಚಾಡಿದ ವಿಡಿಯೋ ವೈರಲ್